ಬ್ರೇಕಿಂಗ್ ನ್ಯೂಸ್
15-12-21 08:14 pm HK Desk news ಕ್ರೈಂ
Photo credits : Headline Karnataka
ಉಳ್ಳಾಲ, ಡಿ.15 : ವೈಯಕ್ತಿಕ ಕಾರಣ ಮುಂದಿಟ್ಟು ಆಟೋ ಚಾಲಕನೊಬ್ಬ ಇನ್ನೊಬ್ಬ ಆಟೋ ಚಾಲಕನ ಮನೆ ಆವರಣಕ್ಕೆ ನುಗ್ಗಿ ಕೊಲೆಗೆ ಯತ್ನಿಸಿದ್ದಲ್ಲದೆ, ತಡೆಯಲು ಬಂದವನನ್ನೂ ಇರಿದು ಗಾಯಗೊಳಿಸಿದ ಘಟನೆ ಕುಂಪಲ ಹನುಮಾನ್ ನಗರದಲ್ಲಿ ನಡೆದಿದೆ.
ಕುಂಪಲ ಹುನುಮಾನ್ ನಗರದ ನಿವಾಸಿ ರಿಕ್ಷಾ ಚಾಲಕ ಸುನಿಲ್ ಇರಿತದಿಂದ ಗಂಭೀರ ಗಾಯಗೊಂಡಿದ್ದು, ತಡೆಯಲು ಬಂದ ಇನ್ನೋರ್ವ ರಿಕ್ಷಾ ಚಾಲಕರಾದ ಜಯಪ್ರಕಾಶ್ ಕೂಡ ಇರಿತಕ್ಕೊಳಗಾಗಿದ್ದಾರೆ. ಕುಂಪಲ ಬಗಂಬಿಲ ನಿವಾಸಿ ರೋಕೇಶ್ ಯಾನೆ ರೋಸ್ ಎಂಬಾತ ತನ್ನ ಗೆಳೆಯ ದುರ್ಗೇಶ್ ಜೊತೆ ಆಟೋ ರಿಕ್ಷಾದಲ್ಲಿ ಹನುಮಾನ್ ನಗರದ ಸುನಿಲ್ ಎಂಬವರ ಮನೆ ಆವರಣಕ್ಕೆ ಮಂಗಳವಾರ ರಾತ್ರಿ ನುಗ್ಗಿದ್ದು ಧಾಂದಲೆ ನಡೆಸಿದ್ದಾನೆ. ಸುನಿಲ್ ನನ್ನು ಮನೆಯಿಂದ ಹೊರ ಕರೆದ ರೋಕೇಶ್ ಚಾಕುವಿನಿಂದ ತೋಳು, ಹೊಟ್ಟೆ, ಕಾಲು, ಬೆನ್ನಿಗೆ ಇರಿದಿದ್ದಾನೆನ್ನಲಾಗಿದೆ. ಗಲಾಟೆಯನ್ನ ತಡೆಯಲು ಬಂದ ಸುನಿಲ್ ಸ್ನೇಹಿತ ಜಯಪ್ರಕಾಶ್ ಎಂಬವರಿಗೂ ರೋಕೇಶ್ ಇರಿದಿದ್ದು ಗಾಯಾಳುಗಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.



ರೋಕೇಶ್ ಯಾನೆ ರೋಸ್, ಸುನಿಲ್, ಜಯಪ್ರಕಾಶ್ ಎಂಬ ಮೂವರೂ ಕುಂಪಲ ಬೈಪಾಸ್ ರಿಕ್ಷಾ ಪಾರ್ಕಲ್ಲಿ ಆಟೋ ಚಲಾಯಿಸುವ ವೃತ್ತಿ ನಡೆಸುತ್ತಿದ್ದಾರೆ. ವೈಯಕ್ತಿಕ ವಿಚಾರವನ್ನೇ ಮುಂದಿಟ್ಟು ರೋಕೇಶ್ ಮಂಗಳವಾರ ರಾತ್ರಿ ಸ್ನೇಹಿತ ದುರ್ಗೇಶ್ ಜತೆಗೂಡಿ ಸುನಿಲ್ ಮೇಲೆ ಇರಿದಿದ್ದಾನೆ. ರೋಕೇಶ್ ಯಾನೆ ರೋಸ್ ಹೆಣ್ಣು ಪೀಡಕನಾಗಿದ್ದು ಈ ಹಿಂದೆಯೂ ತನ್ನ ಕಚ್ಚೇ ಹರಕುತನ ತೋರಿಸಲು ಹೋಗಿ ಸ್ಥಳೀಯರಿಂದ ಅನೇಕ ಬಾರಿ ಶಾಸ್ತಿ ಮಾಡಿಸಿಕೊಂಡಿದ್ದ. ಈತನ ಸಹೋದರ ವಕೀಲನಾಗಿದ್ದು ತಮ್ಮನ ಪುಂಡಾಟಿಕೆಗೆ ಬೆಂಗಾವಲಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ.
ರೋಸ್ ಯಾನೆ ರೋಕೇಶ್ ಮತ್ತು ದುರ್ಗೇಶ್ ಘಟನೆ ಬಳಿಕ ತಲೆಮರೆಸಿದ್ದು ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Auto driver stabs two persons over personal gredge in Kumpala. Kampala resident Rokesh is accused of doing this crime over personal reasons. Both who are stabbed are also said to be auto drivers.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
11-08-26 04:49 pm
HK News Staffer
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
11-08-26 06:33 pm
HK News Staffer
ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ...
11-08-26 03:08 pm
Mangalore Suicide: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ...
10-08-26 11:00 pm
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
11-08-26 05:34 pm
HK News Staffer
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm