ಬ್ರೇಕಿಂಗ್ ನ್ಯೂಸ್
15-12-21 12:56 pm HK Desk news ಕ್ರೈಂ
ಮಂಗಳೂರು, ಡಿ.15 : ನಗರ ಹೊರವಲಯದ ನೀರುಮಾರ್ಗ ಬಳಿಯ ಪಡು ಬೊಂಡಂತಿಲ ಎಂಬಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧಿಸಿ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.
ಹಿಂದು ಹುಡುಗಿಯನ್ನು ಕಾರಿನಲ್ಲಿ ಒಯ್ಯುತ್ತಿದ್ದ ಕಾರಣಕ್ಕೆ ಹಿಂದು ಸಂಘಟನೆಗೆ ಸೇರಿದ ಯುವಕರು ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಅಡ್ಯಾರು ಪದವು ನಿವಾಸಿ ಮಹಮ್ಮದ್ ರಿಯಾಜ್ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿತ್ತು. ಡಿ.10ರಂದು ಸಂಜೆ 7.30ರ ಸುಮಾರಿಗೆ ಘಟನೆ ನಡೆದಿತ್ತು. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಇದೀಗ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೊಂಡಂತಿಲ ನಿವಾಸಿ ಗಣೇಶ್ (23), ಚೇತನ್ ಕುಮಾರ್ (21), ಕಟ್ಟಿಂಜ ಸೈಟ್ ನಿವಾಸಿ ಕೀರ್ತಿರಾಜ್ (23), ನೀರುಮಾರ್ಗದ ಸುವೀತ್ (19), ಪರೀಕ್ಷಿತ್ (20) ಬಂಧಿತರು. ಬ್ಯಾಟ್, ರಾಡ್ ನಿಂದ ಹಲ್ಲೆ ನಡೆಸಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ರಿಯಾಜ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಯಾಜ್, ಹಿಂದು ಯುವತಿಯನ್ನು ಕಾರಿನಲ್ಲಿ ಒಯ್ಯುತ್ತಿದ್ದ ವಿಚಾರಕ್ಕೆ ಹಲ್ಲೆ ನಡೆಸಲಾಗಿತ್ತು. ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.


ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ
ಪೊಲೀಸರ ಮಾಹಿತಿ ಪ್ರಕಾರ, ರಿಯಾಜ್ ಹಿಂದಿನಿಂದಲೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಪಂಪ್ವೆಲ್ ಲಾಡ್ಜ್ ನಲ್ಲಿ ಸಿಕ್ಕಿಬಿದ್ದು ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಮೈಸೂರು ಮೂಲದ ಯುವತಿಯರನ್ನು ಮಂಗಳೂರಿನ ವಿವಿಧ ಕಡೆಗಳಿಗೆ ಪೂರೈಸುವ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದ ಹಿಂದು ಸಂಘಟನೆಯ ಯುವಕರು ರಿಯಾಜ್ ಮೇಲೆ ಕಣ್ಣಿಟ್ಟು ನೀರುಮಾರ್ಗದ ಬಳಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಮೂಲದ ಹಿಂದು ಯುವತಿ ಇದ್ದಳು ಎನ್ನಲಾಗಿದೆ.


ರಿಯಾಜ್ ಮೇಲಿನ ಹಲ್ಲೆ ಘಟನೆಯ ಬಳಿಕ ಕದ್ರಿ ಪೊಲೀಸರು ಕಂಕನಾಡಿ ಬಳಿಯ ಮನೆಯೊಂದಕ್ಕೆ ದಾಳಿ ನಡೆಸಿದ್ದು, ಅಲ್ಲಿದ್ದ ಒಬ್ಬ ಯುವತಿ ಮತ್ತು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿಯ ದಂಧೆಯನ್ನೂ ರಿಯಾಜ್ ಮಾಡಿಕೊಂಡಿದ್ದ ಎನ್ನುವ ಮಾಹಿತಿಯಿದ್ದು, ಪೊಲೀಸರು ಅದರ ಬಗ್ಗೆ ಕೇಸು ದಾಖಲಿಸಿದ್ದಾರೆ. ಈತನ ದಂಧೆಯ ಬಗ್ಗೆ ತಿಳಿದಿರುವ ಕಾರಣ ಮುಸ್ಲಿಂ ಸಂಘಟನೆಗಳು ಕೂಡ ರಿಯಾಜ್ ಪರ ಬೆಂಬಲವಾಗಿ ನಿಂತಿಲ್ಲ ಎಂದು ಹೇಳಲಾಗುತ್ತಿದೆ.
Regarding the assault incident at Adyar Padavu on December 10, five persons have been arrested and produced to court. The five arrested are identified as Ganesh (24), resident of Kapettu site, Bondantila village, Chetan Kumar (21) from Bantukatta, Padu, Bondantila village, Keertiraj (23), Kattinja site, Padu, Bondantila, Suveeth (20), Rangapade, Neermarga, and Pareekshit (21) residing near Padu post office, Bondatila village. Police commissioner N Shashi Kumar said, “The accused were known to Riaz. The accused and the victim had clashes earlier on past issues.
21-03-26 06:57 pm
HK News Staffer
ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕನ ಕಿರುಕ...
21-03-26 05:32 pm
ಕಾಮುಕ ಗುರೂಜಿ ಅಶೋಕ್ ಖಾರಟ್ ಜೊತೆ ಸಂಪರ್ಕ ಆರೋಪ ; ಮ...
21-03-26 01:22 pm
ಜ್ಯೋತಿಷಿ ಹೆಸರಿನಲ್ಲಿ ಮಾಟ- ಮಂತ್ರ ; 58 ಮಹಿಳೆಯರ ವ...
20-03-26 06:10 pm
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
21-03-26 06:31 pm
HK News Staffer
ಯೂಟ್ಯೂಬ್ ನೋಡಿ ನಕಲಿ ಆನ್ಲೈನ್ ಟ್ರೇಡಿಂಗ್ ಆ್ಯಪ್ ಮ...
21-03-26 03:22 pm
ಉಳ್ಳಾಲದ ರೌಡಿಶೀಟರ್, ಕೋರ್ಟಿಗೆ ವಂಚಿಸಿ ತಲೆಮರೆಸಿಕೊ...
21-03-26 01:57 pm
ಪ್ರಯಾಣಿಕರಿಗೆ ದೊಡ್ಡ ಹೊಡೆತ ; ಮಂಗಳೂರು–ಸುಬ್ರಹ್ಮಣ...
21-03-26 11:56 am
Yakshagana, Govinda Bhat Death: ತೆಂಕುತಿಟ್ಟು ಯ...
20-03-26 11:26 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm