ಬ್ರೇಕಿಂಗ್ ನ್ಯೂಸ್
04-12-21 01:01 pm HK Desk news ಕ್ರೈಂ
ಮಂಗಳೂರು, ಡಿ.4: ಕುಳೂರಿನಲ್ಲಿ ಶುಕ್ರವಾರ ನಸುಕಿನಲ್ಲಿ ಮನಯವರಿಗೆ ತಲವಾರು ತೋರಿಸಿ, ಮೂರು ದನಗಳನ್ನು ಕದ್ದೊಯ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿಗಳಾದ ಮೊಹಮ್ಮದ್ ಸಲೀಂ(32), ಮೊಹಮ್ಮದ್ ತಂಜಿಲ್(25), ಮೊಹಮ್ಮದ್ ಇಕ್ಬಾಲ್ (23) ಬಂಧಿತರು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋ (ಕೆಎ19- ಎಂಎ 7706) ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಳೂರಿನ ಗೋಲ್ಡ್ ಫಿಂಚ್ ಮೈದಾನದ ಬಳಿಯ ಮನೆಯ ಆವರಣದಲ್ಲಿ ಕಟ್ಟಿಹಾಕಿದ್ದ ಮೂರು ದನಗಳನ್ನು ಶುಕ್ರವಾರ ನಸುಕಿನ ನಾಲ್ಕು ಗಂಟೆ ಸುಮಾರಿಗೆ ಸ್ಕಾರ್ಪಿಯೋ ವಾಹನಕ್ಕೆ ತುಂಬಿ ಕದ್ದೊಯ್ದಿದ್ದರು. ಈ ವೇಳೆ, ಪರಿಸರದ ಜನರು ಸೇರಿ ಬೊಬ್ಬೆ ಹೊಡೆದಿದ್ದು, ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಘಟನೆ ಬಗ್ಗೆ ಬಜರಂಗದಳ ನಾಯಕರು ಸ್ಥಳಕ್ಕೆ ತೆರಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ, ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದೇ ಇದ್ದರೆ ಕಾವೂರು ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಘಟನೆ ಬಗ್ಗೆ ದನಗಳನ್ನು ಕಳಕೊಂಡಿದ್ದ ಉಮೇಶ್ ಸುವರ್ಣ ಮತ್ತು ಉದಯ ಶೆಟ್ಟಿ ಎಂಬವರು ಕಾವೂರು ಠಾಣೆಯಲ್ಲಿ ದೂರನ್ನೂ ನೀಡಿದ್ದರು. ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದು, ಮೂರು ಮಂದಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಾವೂರು, ಮೂಡುಬಿದ್ರೆ ಮತ್ತು ಬಜ್ಪೆ ಠಾಣೆ ಪೊಲೀಸರು ಪಾಲ್ಗೊಂಡಿದ್ದರು.
ನೋಡ ನೋಡುತ್ತಲೇ ತಲವಾರು ತೋರಿಸಿ ದನಗಳನ್ನು ಸ್ಕಾರ್ಪಿಯೋ ವಾಹನದಲ್ಲಿ ಕದ್ದೊಯ್ದ ದುಷ್ಕರ್ಮಿಗಳು ; ಬಜರಂಗದಳ ಆಕ್ರೋಶ
Cattle theft by showing sword in Kavoor three arrested by Mangalore Police, car seized. In the early hours of Friday three who came in the car threatened the house owner and stole the cattles and dumped them into car and flee.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am