ಬ್ರೇಕಿಂಗ್ ನ್ಯೂಸ್
26-11-21 12:19 pm HK news Desk ಕ್ರೈಂ
ಮಂಗಳೂರು, ನ.26: ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ನಾಲ್ಕು ದಿನಕ್ಕೆ ಕಸ್ಟಡಿ ಪಡೆದಿದ್ದಾರೆ.

ಮಧ್ಯಪ್ರದೇಶ ಮೂಲದ ಜಯ್ ಬನ್ ಅಲಿಯಾಸ್ ಜೈಸಿಂಗ್, ಮುಕೇಶ್ ಸಿಂಗ್, ಮುನೀಮ್ ಸಿಂಗ್ ಮತ್ತು ಜಾರ್ಖಂಡ್ ಮೂಲದ ಮನೀಶ್ ತಿರ್ಕೆ ಆರೋಪಿಗಳಾಗಿದ್ದು, ನಾಲ್ವರನ್ನೂ ಪೊಲೀಸರು ಮತ್ತೆ ವಿಚಾರಣೆ ಮುಂದುವರಿಸಿದ್ದಾರೆ. ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿರುವ ಇವರಲ್ಲಿ ಮೂವರು ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಮನೀಶ್ ತಿರ್ಕೆಯನ್ನು ಕರೆಸಿಕೊಂಡು ನ.21ರಂದು ಅದೇ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ದಂಪತಿಯ ಎಂಟು ವರ್ಷದ ಪುತ್ರಿಯನ್ನು ತಮ್ಮ ಕೊಠಡಿಗೆ ಹೊತ್ತೊಯ್ದು ಕೃತ್ಯ ಎಸಗಿದ್ದರು.


ಒಬ್ಬನ ನಂತರ ಇನ್ನೊಬ್ಬನಂತೆ ಅತ್ಯಾಚಾರ ಎಸಗಿದ್ದು, ನೋವಿನಿಂದ ಚೀರಾಡಿದ ಬಾಲಕಿಯನ್ನು ಕೊನೆಗೆ ಕತ್ತು ಹಿಸುಕಿ ಕೊಲೆಗೈದಿದ್ದರು. ಶವವನ್ನು ಅಲ್ಲಿಯೇ ಟೈಲ್ಸ್ ಫ್ಯಾಕ್ಟರಿಯ ಒಳಭಾಗದಿಂದ ಹರಿದು ಹೋಗುತ್ತಿದ್ದ ನೀರಿನ ಚರಂಡಿಗೆ ಎಸೆದು ಹೋಗಿದ್ದರು. ಸಂಜೆಯಾಗುತ್ತಿದ್ದಂತೆ ಶವ ಪತ್ತೆಯಾಗಿದ್ದು ಪೈಶಾಚಿಕ ಕೃತ್ಯದ ಬಗ್ಗೆ ಭಾರೀ ಆಕ್ರೋಶ ಎದ್ದಿತ್ತು. ಪೊಲೀಸರು ಟೈಲ್ಸ್ ಫ್ಯಾಕ್ಟರಿಯಲ್ಲಿ 20 ಮಂದಿ ಉತ್ತರ ಭಾರತೀಯ ಕಾರ್ಮಿಕರನ್ನು ವಶಕ್ಕೆ ಪಡೆದು ಬೆಂಡೆತ್ತಿದ್ದಾರೆ. ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ತಮ್ಮನ್ನು ಒಪ್ಪಿಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮತ್ತೆ ನಾಲ್ಕು ದಿನಕ್ಕೆ ಕಸ್ಟಡಿ ಪಡೆದುಕೊಂಡಿದ್ದಾರೆ.
ಈ ನಡುವೆ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಗೆ ಹಲವು ಸಂಘಟನೆಗಳು, ಸಾರ್ವಜನಿಕರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Four persons who have been accused of committing the macabre act of raping an eight-year-old girl in turns inside the premises of Raj Tiles Factory at Parari near Ulaibettu in the outskirts of the city and strangiulating her to death and then dumpling her body in a drain were arrested by the city police on November 24. The four have been sent to four-day police custody.
21-03-26 01:22 pm
HK News Staffer
ಜ್ಯೋತಿಷಿ ಹೆಸರಿನಲ್ಲಿ ಮಾಟ- ಮಂತ್ರ ; 58 ಮಹಿಳೆಯರ ವ...
20-03-26 06:10 pm
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
21-03-26 03:22 pm
HK News Staffer
ಉಳ್ಳಾಲದ ರೌಡಿಶೀಟರ್, ಕೋರ್ಟಿಗೆ ವಂಚಿಸಿ ತಲೆಮರೆಸಿಕೊ...
21-03-26 01:57 pm
ಪ್ರಯಾಣಿಕರಿಗೆ ದೊಡ್ಡ ಹೊಡೆತ ; ಮಂಗಳೂರು–ಸುಬ್ರಹ್ಮಣ...
21-03-26 11:56 am
Yakshagana, Govinda Bhat Death: ತೆಂಕುತಿಟ್ಟು ಯ...
20-03-26 11:26 pm
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm