ಬ್ರೇಕಿಂಗ್ ನ್ಯೂಸ್
21-11-21 07:31 pm Mangaluru Correspondent ಕ್ರೈಂ
ತಿರುವನಂತಪುರ, ನ.21: ತನ್ನ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ವಿವಾಹಿತ ಮಹಿಳೆಯೊಬ್ಬಳು ಯುವಕನ ಮುಖಕ್ಕೆ ಆ್ಯಸಿಡ್ ಎರಚಿದ ಘಟನೆ ನಡೆದಿದ್ದು, ಈ ವೇಳೆ ಮಹಿಳೆಯ ಮುಖ ಹಾಗೂ ದೇಹಕ್ಕೂ ಆ್ಯಸಿಡ್ ಬಿದ್ದು ಗಾಯಗೊಂಡಿದ್ದಾಳೆ.
ಶೀಬಾ ಆ್ಯಸಿಡ್ ಎರಚಿದ ಮಹಿಳೆಯಾಗಿದ್ದು, ಅರುಣ್ ಎಂಬಾತನ ಮೇಲೆ ಆ್ಯಸಿಡ್ ದಾಳಿ ಹಾಕಿದ್ದಾಳೆ. ತಿರುವನಂತಪುರ ಜಿಲ್ಲೆಯ ಅತಿಮಾಳಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದ್ದು ಇಲ್ಲಿನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶೀಬಾ ಹಾಗೂ ಅರುಣ್ ಚರ್ಚ್ ಆವರಣದಲ್ಲಿ ನಿಂತುಕೊಂಡಿದ್ದು, ಮದುವೆಯ ವಿಚಾರದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಶೀಬಾ ತನ್ನ ಕೈಯಲ್ಲಿದ್ದ ಬಾಟಲಿಯಿಂದ ಅರುಣ್ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ. ಈ ವೇಳೆ, ಆಕೆಯ ಮುಖಕ್ಕೆ ಕೂಡ ಆ್ಯಸಿಡ್ ಹನಿಗಳು ಬಿದ್ದಿವೆ.
ತೀವ್ರ ಗಾಯಗೊಂಡ ಅರುಣ್ ಸ್ಥಳದಲ್ಲಿ ಬಿದ್ದು ನರಳಾಡುತ್ತಿದ್ದರೆ, ಇತ್ತ ಶೀಬಾ ಸ್ಥಳದಿಂದ ಪರಾರಿಯಾಗಿದ್ದಾಳೆ. ಬಳಿಕ ಸ್ಥಳೀಯರು ಅರುಣ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಎರಡು ಕಣ್ಣುಗಳೂ ಸುಟ್ಟು ಹೋಗಿವೆ.
ಗಾಯದಿಂದ ಚೇತರಿಸಿದ ಬಳಿಕ ಅರುಣ್ ಆಗಿರುವ ಘಟನೆಯನ್ನು ತಿಳಿಸಿದ್ದಾನೆ. ಪೊಲೀಸರು ಕೇಸು ದಾಖಲಿಸಿದ್ದು ಚರ್ಚ್ ಆವರಣದ ಸಿಸಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಿ ಶೀಬಾಳನ್ನು ಪೊಲೀಸರು ಬಂಧಿಸಿದ್ದಾರೆ.
ಅರುಣ್ ಹಾಗೂ ಶೀಬಾಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿತ್ತು. ಆದರೆ, ಶೀಬಾಗೆ ವಿವಾಹವಾಗಿದೆ ಎನ್ನುವುದು ಅರುಣ್ ಗೆ ತಿಳಿದ ಬಳಿಕ ಆತ ಆಕೆಯಿಂದ ದೂರವಾಗಲು ಯತ್ನಿಸಿದ್ದ. ಇದರಿಂದ ಕೋಪಗೊಂಡಿದ್ದ ಶೀಬಾ ಇದೇ ದ್ವೇಷದಲ್ಲಿ ಕೃತ್ಯ ನಡೆಸಿದ್ದಾಳೆ ಎನ್ನಲಾಗಿದೆ. ಶೀಬಾ ಇಬ್ಬರು ಮಕ್ಕಳನ್ನು ಹೊಂದಿದ್ದು ಪೊಲೀಸರು ಮನೆಗೆ ಬರೋ ವರೆಗೂ ಪತ್ನಿಯ ಕಿತಾಪತಿ ಪತಿಗೆ ತಿಳಿದಿರಲಿಲ್ಲ.
The Adimali police have arrested a woman who smeared acid on the face of a youth who allegedly rejected her proposal to marry her. The youth, Arunkumar, 27, a native of Poojapura in Thiruvananthapuram has lost vision in one eye and is recuperating at Thiruvananthapuram Medical College Hospital.The incident occurred in front of St Antony's Church at Irumpupalam near Adimali in Idukki district on November 16. The Adimali police arrested, Sheeba, 35, a resident of Padikkath near Valara in Adimali on Saturday evening.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm