ಬ್ರೇಕಿಂಗ್ ನ್ಯೂಸ್
09-11-21 11:08 pm Mangaluru Correspondent ಕ್ರೈಂ
ಉಳ್ಳಾಲ, ನ.9: ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು ನಿನ್ನೆ ರಾತ್ರಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಝುಪಿಟರ್ ಸ್ಕೂಟರನ್ನ ಯಾರೋ ಕಳವುಗೈದ ಪ್ರಕರಣ ತೊಕ್ಕೊಟ್ಟಿನಲ್ಲಿ ನಡೆದಿದೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ರಕ್ಷಾ ಕ್ಲಿನಿಕ್ ಬಳಿಯ ಪ್ರಿಯಾ ಫ್ಯಾನ್ಸಿ ಅಂಗಡಿ ಹೊಂದಿರುವ ಚೇತನ್ ಅವರ ಮನೆಯಂಗಳದಿಂದ ಸ್ಕೂಟರನ್ನ ಕಳವುಗೈಯಲಾಗಿದೆ. KA 19 ER 0584 ನೋಂದಣಿ ಸಂಖ್ಯೆಯ ಬೂದು (ಗ್ರೇ) ಬಣ್ಣದ ಝುಫಿಟರ್ ಸ್ಕೂಟರನ್ನ ಕಳ್ಳರು ರಾತ್ರೋ ರಾತ್ರಿ ಎಗರಿಸಿದ್ದಾರೆ. ಚೇತನ್ ಅವರ ಮನೆ ಮತ್ತು ವಾಣಿಜ್ಯ ಸಂಕೀರ್ಣ ರಸ್ತೆ ಬದಿಯಲ್ಲೇ ಇದ್ದು, ಅವರದ್ದೇ ವಾಣಿಜ್ಯ ಕಟ್ಟಡದಲ್ಲಿ ಫ್ಯಾನ್ಸಿ ಹೊಂದಿದ್ದಾರೆ. ಚೇತನ್ ನಿನ್ನೆ ರಾತ್ರಿ ಫ್ಯಾನ್ಸಿ ಅಂಗಡಿಯನ್ನು ಬಂದ್ ಮಾಡಿ ಮನೆಯಂಗಳದಲ್ಲಿ ಸ್ಕೂಟರನ್ನ ನಿಲ್ಲಿಸಿದ್ದು ಬೆಳಗ್ಗೆ ಸ್ಕೂಟರ್ ಕಳವಾದ ಬಗ್ಗೆ ತಿಳಿದಿದೆ.
ಮನೆಯ ಮೇಲ್ಬಾಗದಲ್ಲಿರುವ ಸಹಕಾರಿ ಬ್ಯಾಂಕ್ ಶಾಖೆಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದು ಕಳ್ಳರ ಬಗ್ಗೆ ಸುಳಿವು ಲಭಿಸಿಲ್ಲ. ಕಳೆದ ಅಕ್ಟೋಬರ್ 28 ರ ರಾತ್ರಿ ಓವರ್ ಬ್ರಿಡ್ಜ್ ನಲ್ಲಿರುವ ಮಾರುತಿ ಸೆಂಟರ್ ವಾಣಿಜ್ಯ ಕಟ್ಟಡದ ಮುಂಭಾಗದಲ್ಲೂ ಬೈಕ್ ಕಳವು ಯತ್ನ ನಡೆದಿತ್ತು. ಮಾರುತಿ ಸೆಂಟರ್ ನ ಮುತ್ತೂಟ್ ಫೈನಾನ್ಸ್ ಸೆಕ್ಯುರಿಟಿ ಗಾರ್ಡ್ ನ ಬೈಕನ್ನೇ ಕಳವಿಗೆ ಯತ್ನಿಸಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಅಂಗಡಿಪದವು ಶಾಂತಿನಗರ ನಿವಾಸಿ ನೌಫಾಲ್(23) ಎಂಬಾತನಿಗೆ ಸೆಕ್ಯುರಿಟಿ ಗಾರ್ಡ್ ಸೇರಿ ಸಾರ್ವಜನಿಕರು ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದರು.
ಕಳವಾದ ಸ್ಕೂಟರ್ ಉಳ್ಳಾಲದಲ್ಲಿ ಪತ್ತೆ
ಈ ನಡುವೆ, ನಿನ್ನೆ ರಾತ್ರಿ ಕಳವಾಗಿದ್ದ ಸ್ಕೂಟರ್ ಉಳ್ಳಾಲ ಬೈಲಿನ ಯಮಹಾ ಶೋರೂಂ ಬಳಿ ಮಂಗಳವಾರ ಸಂಜೆ ಪತ್ತೆಯಾಗಿದೆ. ಯಾರೋ ಕಳ್ಳರು ಸ್ಕೂಟರನ್ನು ಕದ್ದೊಯ್ಯಲು ವಿಫಲ ಯತ್ನ ನಡೆಸಿದ್ದಾರೆ. ಆದರೆ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯಿಂದ ಸ್ಕೂಟರನ್ನು ದೂಡುತ್ತಾ ಹೋಗಿ ಉಳ್ಳಾಲದಲ್ಲಿ ಇರಿಸಿ ಹೋಗಿದ್ದು ಸಂಶಯಕ್ಕೆ ಕಾರಣವಾಗಿದೆ.
Mangalore Parked Bike Stolen by theives outside the house, found in Ulall
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am