ಬ್ರೇಕಿಂಗ್ ನ್ಯೂಸ್
01-11-21 07:27 pm Headline Karnataka News Desk ಕ್ರೈಂ
Photo credits : LIVE LAW
ಭರತ್ ಪುರ, ನ.1: ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ಸ್ಪೆಷಲ್ ಜಡ್ಜ್ ಎಂದು ನೇಮಕಗೊಂಡಿದ್ದ ವ್ಯಕ್ತಿ ಮತ್ತು ಇತರರು ಸೇರಿ 14 ವರ್ಷದ ಬಾಲಕನಿಗೆ ಅಮಲು ಪದಾರ್ಥ ನೀಡಿ ಗ್ಯಾಂಗ್ ರೇಪ್ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದ್ದಂತೆ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಆರೋಪಿ ಸ್ಪೆಷಲ್ ಜಡ್ಜ್ ನನ್ನು ಹುದ್ದೆಯಿಂದ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಇಲಾಖಾ ತನಿಖೆಗೆ ಆದೇಶ ಮಾಡಿದ್ದಾರೆ. ಬಾಲಕನ ತಾಯಿ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
14 ವರ್ಷದ ಬಾಲಕ ಸ್ಟೇಡಿಯಂಗೆ ಟೆನಿಸ್ ಆಡಲೆಂದು ಹೋಗುತ್ತಿದ್ದ. ಅಲ್ಲಿಗೆ ಜಡ್ಜ್, ಪೊಲೀಸ್ ಅಧಿಕಾರಿಗಳು ಕೂಡ ಅಲ್ಲಿಗೆ ಆಟ ಆಡುವುದಕ್ಕೆ ಬರುತ್ತಿದ್ದರು. ಈ ವೇಳೆ, ಹೊಸತಾಗಿ ಬಂದಿದ್ದ ಜಡ್ಜ್ ಗೆ ಬಾಲಕನ ಪರಿಚಯವಾಗಿದ್ದು, ತಿಂಗಳ ಹಿಂದೆ ಬಾಲಕನನ್ನು ತನ್ನ ಮನೆಗೆ ಕರೆದೊಯ್ದಿದ್ದ. ಅಲ್ಲಿ ಯಾವುದೋ ಮಾದಕ ವಸ್ತುವನ್ನು ನೀಡಿ, ಆತನ ಜೊತೆ ಸೆಕ್ಸ್ ನಡೆಸಿದ್ದಾನೆ. ಆನಂತರ, ಆಮಿಷ ಮತ್ತು ಬೆದರಿಕೆ ಒಡ್ಡಿ ಈ ಬಗ್ಗೆ ಯಾರಿಗೂ ಹೇಳದಂತೆ ಒತ್ತಡ ಹೇರಿದ್ದ.
ಆದರೆ, ಕಳೆದ ಒಂದು ತಿಂಗಳಲ್ಲಿ ಇದೇ ರೀತಿ ಮತ್ತೆ ಮತ್ತೆ ಬಾಲಕನನ್ನು ಮೂವರು ಸೇರಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದರಿಂದ ಬಾಲಕನಿಗೆ ನೋವು ಉಂಟಾಗಿತ್ತು. ತಾಯಿ ಮನೆಯಲ್ಲಿ ಬಾಲಕನ ನೋವಿನ ಬಗ್ಗೆ ಪ್ರಶ್ನೆ ಮಾಡಿದಾಗ, ಆತ ನಿಜ ವಿಚಾರವನ್ನು ಹೇಳಿದ್ದಾನೆ. ನೊಂದ ತಾಯಿ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಜಡ್ಜ್ ಮತ್ತು ಇತರರ ವಿರುದ್ಧ ದೂರು ನೀಡಿದ್ದಾರೆ. ಈ ನಡುವೆ, ಜಡ್ಜ್ ಮತ್ತು ಎಸಿಬಿ ಅಧಿಕಾರಿಯೊಬ್ಬ ತಾಯಿ ಮತ್ತು ಮಗನಿಗೆ ಬೆದರಿಕೆ ಒಡ್ಡಿದ್ದು ಕೊಂದು ಹಾಕುವುದಾಗಿ ಬೆದರಿಸಿದ್ದಾರೆ.
ಇದಲ್ಲದೆ, ಜಡ್ಜ್ ತನ್ನ ತಪ್ಪನ್ನು ಕ್ಷಮಿಸುವಂತೆ ಹೇಳಿ ತಾಯಿ ಬಳಿ ಕೇಳಿಕೊಳ್ಳುವ ವಿಡಿಯೋ ಕೂಡ ಇದೇ ವೇಳೆ ವೈರಲ್ ಆಗಿದೆ. ಜಡ್ಜ್, ಎಸಿಬಿ ಅಧಿಕಾರಿ ಮತ್ತು ಇನ್ನೊಬ್ಬನ ವಿರುದ್ಧ ತಾಯಿ ದೂರು ನೀಡಿದ್ದು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
A special judge posted in Rajasthan's Bharatpur district has been booked along with two others for allegedly gang-raping a 14-year-old boy, the police said on Sunday. An Anti-Corruption Bureau (ACB) officer was also placed under Awaiting Posting Order (APO) for allegedly threatening the boy.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am