ಬ್ರೇಕಿಂಗ್ ನ್ಯೂಸ್
28-10-21 05:17 pm HK News Desk ಕ್ರೈಂ
ಮುಂಬೈ, ಅ.28: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಜಾಮೀನು ಲಭಿಸಿದೆ. ಬಾಂಬೆ ಹೈಕೋರ್ಟ್ ಸುದೀರ್ಘ ವಿಚಾರಣೆಯ ಬಳಿಕ ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಇದರೊಂದಿಗೆ ಮೂರು ವಾರಗಳ ಜೈಲು ವಾಸದ ಬಳಿಕ ಆರ್ಯನ್ ಖಾನ್ ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದ್ದಾನೆ.
ಆರ್ಯನ್ ಖಾನ್ ಜೊತೆಗೆ ಜೈಲು ಸೇರಿದ್ದ ಆತನ ಗೆಳೆಯರಾಗಿದ್ದ ಅರ್ಬಾಜ್ ಖಾನ್, ಮುನ್ ಮುನ್ ಧಮೇಚಾ ಅವರಿಗೂ ಕೋರ್ಟ್ ಜಾಮೀನು ನೀಡಿದೆ. ಆದರೆ, ಕೋರ್ಟ್ ಈ ಬಗ್ಗೆ ಆದೇಶವನ್ನು ನಾಳೆ (ಅ.29) ನೀಡಲಿದ್ದು ಆನಂತರವೇ ಇವರ ಬಿಡುಗಡೆ ಯಾವಾಗ ಆಗಲಿದೆ ಅನ್ನೋದು ಗೊತ್ತಾಗಲಿದೆ.
ಶುಕ್ರವಾರ ಅಥವಾ ಶನಿವಾರ ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆ ಆಗಲಿದ್ದಾನೆ ಎಂದು ಆರೋಪಿ ಪರ ವಕೀಲ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ. ಕೊನೆಯ ಬಾರಿಗೆ ವಾದ ಮಂಡಿಸಿದ್ದ ರೋಹ್ಟಗಿ, ಪ್ರಕರಣದಲ್ಲಿ ಹಡಗಿನಲ್ಲಿ ಅರ್ಬಾಜ್ ಮತ್ತು ಅಚಿತ್ ಬಿಟ್ಟರೆ ಬೇರೆ ಯಾವುದೇ ವ್ಯಕ್ತಿಯ ಪರಿಚಯ ಆರ್ಯನ್ ಖಾನ್ ಗೆ ಇರಲಿಲ್ಲ. ಅಚಿತ್ ಪ್ರಕರಣ ನಡೆದು ನಾಲ್ಕು ದಿನಗಳ ಬಳಿಕ ಬಂಧಿತನಾಗಿದ್ದ. ಆದರೆ, ಆತನನ್ನು ಡ್ರಗ್ ಡೀಲರ್ ಎಂದು ಹೇಳಲಾಗಿದ್ದು ಆತನ ಬಳಿ ಸಿಕ್ಕಿದ್ದು ಕೇವಲ 2.4 ಗ್ರಾಮ್ ಡ್ರಗ್. ಒಬ್ಬ ಡ್ರಗ್ ಪೆಡ್ಲರ್ ಅಥವಾ ಡೀಲರ್ ಆಗಬೇಕಿದ್ದರೆ ಕನಿಷ್ಠ ಅಂದರೂ 200 ಗ್ರಾಮ್ ಡ್ರಗ್ ಇರಬೇಕು ಎಂದು ವಾದಿಸಿದ್ದರು.

ಎನ್ ಸಿಬಿ ಪರವಾಗಿ ಹಾಜರಾಗಿದ್ದ ಎಎಸ್ ಜಿ ಅನಿಲ್ ಸಿಂಗ್, ಪ್ರಕರಣದ ಸಂಚು ನಡೆಸಿದ್ದನ್ನು ಪ್ರೂವ್ ಮಾಡಬೇಕೆಂದ್ರೆ ಕಷ್ಟ ಆಗುತ್ತದೆ. ಸಂಚು ಯಾವ ರೀತಿ ಮಾಡಿದ್ದರೆಂದು ಮಾಡಿದವರೇ ಹೇಳಬೇಕಷ್ಟೆ. ನಾವು ಬಂಧನ ಮಾಡಿದ್ದು ಕಾನೂನು ರೀತ್ಯ ಇತ್ತು. ಈ ಬಗ್ಗೆ ನಿರ್ಧಾರ ಮಾಡುವುದನ್ನು ನ್ಯಾಯಾಧೀಶರಿಗೆ ಬಿಡುತ್ತೇನೆ ಎಂದು ಹೇಳಿದರು. ನ್ಯಾಯಾಧೀಶರು ಕೊನೆಗೆ ಆರೋಪಿ ಆರ್ಯನ್ ಖಾನ್ ಸೇರಿದಂತೆ ಮೂವರಿಗೆ ಷರತ್ತಿನ ಜಾಮೀನು ನೀಡಲು ಒಪ್ಪಿಗೆ ನೀಡಿದ್ದಾರೆ.
ನವೆಂಬರ್ 2ರಂದು ನಟ ಶಾರುಖ್ ಖಾನ್ ಬರ್ತ್ ಡೇ ಆಗಿದ್ದು, ಅದಕ್ಕೂ ಮೊದಲೇ ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಯಾಗಿದ್ದು ಕುಟುಂಬಕ್ಕೆ ನೋವಿನಲ್ಲೂ ಸಂತಸ ನೀಡಿದೆ. ಈ ಹಿಂದೆ, 23 ವರ್ಷದ ಸ್ಟಾರ್ ನಟನ ಪುತ್ರನಿಗೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಏಂಟಿ ಸ್ಪೆಷಲ್ ಏಂಟಿ ಡ್ರಗ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಶಾರುಖ್ ಪುತ್ರನಿಗೆ ಜಾಮೀನು ಸಿಗದೇ ಇದ್ದುದು ಭಾರೀ ಚರ್ಚೆಗೂ ಕಾರಣವಾಗಿತ್ತು.
Aryan Khan has been granted bail after three weeks in jail, by the Bombay High Court. The 23-year-old son of Shah Rukh Khan has been in custody since October 3, hours after raids on a cruise ship party by the Narcotics Control Bureau (NCB).
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm