ಬ್ರೇಕಿಂಗ್ ನ್ಯೂಸ್
22-10-21 10:30 pm Mangalore Reporter ಕ್ರೈಂ
ಮಂಗಳೂರು, ಅ.22 : ಮನೆಯೊಂದರಲ್ಲಿ ಪ್ರತಿ ವಾರ ಗೋವುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಮೂಲ್ಕಿ ಹಾಗೂ ಮೂಡುಬಿದಿರೆ ಪ್ರಖಂಡದ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದು ಕಿನ್ನಿಗೋಳಿಯ ಸಂಕಲಕರಿಯದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಯನ್ನು ಪತ್ತೆ ಮಾಡಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಮಾರುತಿ ಓಮ್ನಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಕೆ.ಜಿ. ಗೋಮಾಂಸವನ್ನು ಪತ್ತೆ ಮಾಡಿದ್ದಾರೆ. ಬಳಿಕ ಅದರಲ್ಲಿದ್ದ ಆರೋಪಿಗಳು ನೀಡಿದ ಮಾಹಿತಿಯಂತೆ ಮೂಲ್ಕಿ ಪೊಲೀಸರಿಗೆ ಬಜರಂಗದಳ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ಆಬಳಿಕ ಕಸಾಯಿಖಾನೆ ಇದ್ದ ಜಾಗ ಕಾರ್ಕಳ ಠಾಣೆ ವ್ಯಾಪ್ತಿಗೆ ಬರುತ್ತಿದ್ದ ಕಾರಣ ಅಲ್ಲಿನ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.

ಕಸಾಯಿಖಾನೆಗೆಂದು ಮನೆಯ ಬಳಿಯಲ್ಲೇ ಹಟ್ಟಿಯನ್ನು ರಚಿಸಿದ್ದು ಅಲ್ಲಿ ಪ್ರತಿವಾರ ಗೋವನ್ನು ಖರೀದಿಸಿ ತಂದು ಕಟ್ಟಿ ಹಾಕುತ್ತಿದ್ದರು. ಬಳಿಕ ಅದನ್ನು ಪ್ರತಿ ವಾರ ಅಗತ್ಯ ಇದ್ದಷ್ಟು ಮಾಂಸ ಮಾಡುತ್ತಿದ್ದರು. ಸುತ್ತಲಲ್ಲಿ ಹಿಂದುಗಳ ಮನೆಯೇ ಇದ್ದರೂ, ಗೋವನ್ನು ಮಾಂಸ ಮಾಡಿ ಮೂಲ್ಕಿ ವ್ಯಾಪ್ತಿಯ ಹಲವು ಕಡೆಗಳಿಗೆ ಮಾಂಸವನ್ನು ವ್ಯವಸ್ಥಿತವಾಗಿ ಪೂರೈಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇದ್ದರೂ, ಪೊಲೀಸ್ ದೂರು ನೀಡಿರಲಿಲ್ಲ.

ದಾಳಿ ನಡೆಸಿದ ವೇಳೆ, ಆರೋಪಿಯ ಮನೆಯ ಒಳಗೇ ಕಸಾಯಿಖಾನೆ ನಡೆಸುತ್ತಿದ್ದುದು ಪತ್ತೆಯಾಗಿದೆ. ಹೊರಗಡೆ ಇದ್ದ ಹಟ್ಟಿಯಲ್ಲಿ ಎಂಟು ಗೋವುಗಳಿದ್ದು ಅವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮನೆಯ ಒಳಗಡೆಯೂ ಮಾಂಸ ಮತ್ತು ಮಾಂಸ ಮಾಡಲು ಬಳಸಿದ್ದ ಪರಿಕರಗಳನ್ನೂ ವಶಕ್ಕೆ ಪಡೆದಿದ್ದಾರೆ. ಒಟ್ಟು ಒಂದು ಕ್ವಿಂಟಾಲ್ನಷ್ಟು ಗೋಮಾಂಸ ಹಾಗೂ ನಾಲ್ಕು ಆರೋಪಿಗಳನ್ನು ಮೂಲ್ಕಿ ಮತ್ತು ಕಾರ್ಕಳ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಮಹಮ್ಮದ್ ಹಸನಬ್ಬ, ರಫೀಕ್, ಇದಿನಬ್ಬ ಹಾಗೂ ಇಬ್ರಾಹಿಂ ಬಂಧಿತರು. ಈ ಪೈಕಿ ಇಬ್ರಾಹಿಂ ಕಸಾಯಿಖಾನೆ ರೂವಾರಿಯಾಗಿದ್ದು ಆತನ ಮನೆಯಲ್ಲೇ ಮಾಂಸ ಮಾಡಿ ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
Mangalore House converted into slaughter house flesh illegally being traded Bagarang Dal members raid house four arrested near Kinnigoli.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
11-08-26 01:04 pm
HK News Staffer
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ; ಬೆಂಗಳೂರಿನ...
10-08-26 08:49 pm
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am