ಬ್ರೇಕಿಂಗ್ ನ್ಯೂಸ್
22-10-21 08:21 pm Mangalore Reporter ಕ್ರೈಂ
ಮಂಗಳೂರು, ಅ.22: ಬೈಕಂಪಾಡಿಯ ಕರ್ಕೇರ ಮೂಲಸ್ಥಾನ, ಜಾರಂದಾಯ ದೈವಸ್ಥಾನ ಮತ್ತು ನಾಗನ ಕಲ್ಲು, ನಂದಿ ವಿಗ್ರಹಕ್ಕೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಕುಳಾಯಿ ನಿವಾಸಿ ಲೋಹಿತಾಶ್ವ(32) ಎಂಬಾತ ಬಂಧಿತ. ಕರ್ಕೇರ ದೈವಸ್ಥಾನದಲ್ಲಿ ಬೆಳ್ಳಿ, ಬಂಗಾರ ಇರುವುದನ್ನು ತಿಳಿದು ಕದಿಯಲು ಹೋಗಿದ್ದ. ಆದರೆ, ಅ.16ರಂದು ರಾತ್ರಿ ಬೀಗ ಒಡೆದು ಗರ್ಭಗುಡಿಯಲ್ಲಿ ನೋಡಿದಾಗ, ಯಾವುದೇ ಬೆಳ್ಳಿ, ಬಂಗಾರ ಲಭಿಸಿರಲಿಲ್ಲ. ಆನಂತರ ಕಾಣಿಕೆ ಡಬ್ಬಿಯನ್ನೂ ಒಡೆದು ತಡಕಾಡಿದ್ದಾನೆ. ಸ್ವಲ್ಪ ದುಡ್ಡಷ್ಟೇ ಸಿಕ್ಕಿತ್ತು. ಇದರಿಂದ ಹತಾಶೆಗೊಂಡ ಖದೀಮ, ಅಲ್ಲಿದ್ದ ನಾಗನ ಕಲ್ಲು ಮತ್ತು ನಂದಿ ವಿಗ್ರಹವನ್ನು ಭಗ್ನಗೊಳಿಸುವ ಯತ್ನ ಮಾಡಿದ್ದ.

ಅಲ್ಲಿನ ಖಚಿತ ಮಾಹಿತಿಗಳನ್ನು ಆಧರಿಸಿ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು, ದೈವಸ್ಥಾನದ ಕಮಿಟಿಯವರು ಪೂರಕ ಮಾಹಿತಿಗಳನ್ನು ನೀಡಿದ್ದರಿಂದ ಆರೋಪಿಯ ಪತ್ತೆ ಸುಲಭವಾಗಿದೆ. ದೈವಸ್ಥಾನವನ್ನು ತಿಂಗಳಿಗೊಮ್ಮೆ ತೆರೆಯುತ್ತಿದ್ದಾಗ ಅಲ್ಲಿಗೆ ಬಂದು ನೋಡುತ್ತಿದ್ದ. ಹೀಗಾಗಿ ಅಲ್ಲಿ ಬೆಳ್ಳಿ ಮತ್ತು ಬಂಗಾರ ಇರುವುದನ್ನು ಕಂಡುಕೊಂಡು ಕಳ್ಳತನಕ್ಕೆ ಮುಂದಾಗಿದ್ದ. ಆರೋಪಿಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ ಅಥವಾ ಬೇರೆ ಕಡೆಯೂ ಇದೇ ರೀತಿ ಕಳ್ಳತನ ನಡೆಸಿದ್ದಾನೆಯೇ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Police on Thursday arrested one man in connection with the theft attempt and damaging the idols at a temple in Baikampady Industrial Area. The arrested accused has been identified as Rohitashwa, a resident of Kulai here in the city. According to the police, the accused was working in Baikampady as a laborer for the last few years. He had reportedly attempted theft at a temple there believing he will get his hands on the gold, jewelry, and cash from the donation box.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm