ಬ್ರೇಕಿಂಗ್ ನ್ಯೂಸ್
14-10-21 08:14 pm Headline Karnataka News Network ಕ್ರೈಂ
ಮುಂಬೈ, ಅಕ್ಟೋಬರ್ 14: ''ಅರಬ್ಬಿ ಸಮುದ್ರದಲ್ಲಿ ತೇಲುತ್ತಿದ್ದ ಕ್ರೂಸರ್ ಶಿಪ್ನಲ್ಲಿ ನಿಗದಿತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಆರ್ಯನ್ ಖಾನ್ ಡ್ರಗ್ ಸಾಗಿಸಿಲ್ಲ, ಡ್ರಗ್ಸ್ ಹೊಂದಿರಲಿಲ್ಲ, ವಿದೇಶಿ ಕರೆನ್ಸಿ ಜಪ್ತಿಯಾಗಿಲ್ಲ, ಹೀಗಿದ್ದು, ನನ್ನ ಕಕ್ಷಿದಾರರ ಬಂಧನವೇಕೆ?,'' ಎಂದು ಹಿರಿಯ ವಕೀಲ ಅಮಿತ್ ದೇಸಾಯಿ ವಾದಿಸಿದ್ದಾರೆ. ಆದರೆ, ಆರ್ಯನ್ ಹಾಗೂ ಸಹ ಆರೋಪಿಗಳ ಜಾಮೀನು ಅರ್ಜಿ ವಜಾಗೊಂಡಿದ್ದು, ಅಕ್ಟೋಬರ್ 20ರಂದು ಎನ್. ಡಿ.ಪಿ. ಎಸ್ ವಿಶೇಷ ನ್ಯಾಯಾಲಯವು ತನ್ನ ತೀರ್ಪನ್ನು ನೀಡಲಿದೆ.
ಆರ್ಯನ್ ಖಾನ್ ಜಾಮೀನು ಮನವಿಯ ವಿಚಾರಣೆ ನಡೆಸಿದ ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯವು, ಆರೋಪಿಗಳಿಗೆ ರಿಮ್ಯಾಂಡ್ ವಿಸ್ತರಿಸಲಾಗಿಲ್ಲ, ಹಾಗಾಗಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಖಾನ್ಗೆ ಸಮನ್ಸ್ ನೀಡಿ, ತನಿಖೆ ನಡೆಸಲಾಗಿದೆ. ಹಾಗಾಗಿ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನ ಮುಂದುವರೆಯಲಿದೆ ಎಂದಿದೆ. ಆರ್ಥರ್ ರೋಡ್ ಜೈಲಿನಲ್ಲಿ ಆರ್ಯನ್ ಖಾನ್ ಇತರರನ್ನು ಕೋವಿಡ್ 19 ಮಾರ್ಗಸೂಚಿಯಂತೆ ಇರಿಸಲು ಸೂಚಿಸಲಾಗಿದೆ. ಪೊಲೀಸರ ಕಸ್ಟಡಿಗೆ ನೀಡಿಲ್ಲವಾದ್ದರಿಂದ ಇದು ಜಾಮೀನು ನೀಡಲು ಅತಿ ಮುಖ್ಯವಾಗುತ್ತದೆ ಎಂದು ವಕೀಲ ದೇಸಾಯಿ ಹೇಳಿದ್ದಾರೆ.
"ಆರ್ಯನ್ ಅವರನ್ನು ಎನ್ಡಿಪಿಎಸ್ ಕಾಯಿದೆಯ ಸೆಕ್ಷನ್ಗಳಾದ 27, 20(ಬಿ), 28, 29, 8(ಸಿ) ಅಡಿ ಬಂಧಿಸಲಾಗಿದೆ. ಎನ್ಸಿಬಿ ಪ್ರತಿಕ್ರಿಯೆಯಲ್ಲಿ ಕಾನೂನುಬಾಹಿರ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಆರ್ಯನ್ ಅವರನ್ನು ಎನ್ಡಿಪಿಎಸ್ ಕಾಯಿದೆಯ ಸೆಕ್ಷನ್ 27ಎ ಅಡಿ ಬಂಧಿಸಲಾಗಿಲ್ಲ" ಎಂದು ದೇಸಾಯಿ ಅವರು ವಿಶೇಷ ನ್ಯಾಯಾಧೀಶ ವಿ ವಿ ಪಾಟೀಲ್ ಅವರ ಏಕಸದಸ್ಯ ಪೀಠದ ಮುಂದೆ ವಾದಿಸಿದರು.
ಎನ್ಸಿಬಿಯು ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳ ಸಾಗಣೆಯ ಆರೋಪ ಮಾಡಿದೆ. ಇದರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ... ಈ ಪ್ರಕರಣವನ್ನು ಅವರು ಪಿತೂರಿ ವಿಭಾಗದಲ್ಲಿ ಬಳಕೆ ಮಾಡುತ್ತಿದ್ದಾರೆ... ಪ್ರತಿಕ್ರಿಯೆಯಲ್ಲಿ ಎನ್ಸಿಬಿಯು ಹಲವು ಆರೋಪಿಗಳನ್ನು ಉಲ್ಲೇಖಿಸಿದೆ.
ಎನ್ ಸಿಬಿ ಪರ ವಕೀಲ ಅನಿಲ್ ಸಿಂಗ್ ವಾದ;
ಆರ್ಯನ್ ಖಾನ್ ವಾಟ್ಸಾಪ್ ಸಂದೇಶ, ಡ್ರಗ್ ಗುಣಮಟ್ಟ, ವಿದೇಶಿ ಪ್ರಜೆಗಳು ಭಾಗಿಯಾಗಿರುವುದು ಎಲ್ಲವೂ ಪ್ರಕರಣದಲ್ಲಿ ಮುಖ್ಯವಾಗಿದೆ. ಒಂದೇ ಕಾರಿನಲ್ಲಿ ಖಾನ್ ಮನೆಗೆ ಮರ್ಚೆಂಟ್ ತೆರಳಿದ್ದಾರೆ. ಬಂಧನವಾದಾಗ ಇಬ್ಬರೂ ಟರ್ಮಿನಲ್ ಬಳಿ ಇದ್ದರು. ಅರ್ಬಾಜ್ ಮರ್ಚೆಂಟ್ ಬಳಿ ಇದ್ದ ಮಾದಕ ವಸ್ತುವನ್ನು ತಾವು ಸೇವಿಸಿಲು ಇಟ್ಟುಕೊಂಡಿದ್ದರು. ಇದು ಇಬ್ಬರಿಗೂ ತಿಳಿದಿತ್ತು. ಮರ್ಚೆಂಟ್ ಮಾದಕ ವಸ್ತು ಸೇವಿಸಿದ್ದಾರೆ ಎಂಬುದು ಖಾನ್ಗೆ ತಿಳಿದಿತ್ತು ಎಂದ ಸಿಂಗ್. ಕಾನೂನುಬಾಹಿರ ಮಾದಕ ವಸ್ತುಗಳ ಸಂಗ್ರಹದ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲದಲ್ಲಿರುವ ಕೆಲವರ ಜೊತೆ ಖಾನ್ ಸಂಪರ್ಕದಲ್ಲಿದ್ದಾರೆ ಎಂದು ತೋರಿಸಲು ದಾಖಲೆಗಳಿವೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಎನ್ಸಿಬಿ ಹೇಳಿದೆ. ಉಭಯ ಪಕ್ಷದ ವಕೀಲರ ವಾದ-ಪ್ರತಿವಾದ ಆಲಿಸಿದ ಕೋರ್ಟ್, ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಅಕ್ಟೋಬರ್ 20ರಂದು ತೀರ್ಪು ಹೊರಬರಲಿದೆ. ಐಸೋಲೇಷನ್ ಅವಧಿ ಮುಗಿದಿರುವುದರಿಂದ ಉಳಿದ ಕೈದಿಗಳ ಜೊತೆ ಆರ್ಯನ್ ಅವರು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
Bollywood star Shah Rukh Khan's 23-year-old son Aryan Khan did not get bail in the drugs-on-cruise case today from a Mumbai sessions court that reserved the order till next Wednesday, sending him back to jail. Shah Rukh Khan's son Aryan Khan - Accused No. 1 for the Narcotics Control Bureau (NCB) - allegedly "indulged in illicit drug trafficking", and was in touch with "some persons abroad who appear to be a part of an International Drug Network" to procure a "bulk quantity of hard drugs", the anti-narcotics agency said in a statement to the court on Wednesday.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm