ಬ್ರೇಕಿಂಗ್ ನ್ಯೂಸ್
08-10-21 04:07 pm Mangalore Reporter ಕ್ರೈಂ
ಮಂಗಳೂರು, ಅ.8 : ತಲವಾರು ತೋರಿಸಿ ಬಹಿರಂಗವಾಗಿ ಕೊಲೆ ನಡೆಸುವ ಬೆದರಿಕೆ ಹಾಕಿದ್ದಲ್ಲದೆ, ನಡುರಸ್ತೆಯಲ್ಲಿ ದಾಂಧಲೆ ನಡೆಸಿದ ರೌಡಿಗಳ ತಂಡವನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೊಲೆಯತ್ನ, ಬೆದರಿಕೆ, ಹಲ್ಲೆ ನಡೆಸಿದ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಅ.7ರಂದು ಸಂಜೆ ಮೂಡುಶೆಡ್ಡೆಯಲ್ಲಿ ವಿವೇಕಾನಂದ ಎನ್ನುವ ಬಜರಂಗದಳದ ಕಾರ್ಯಕರ್ತನನ್ನು ಅಟ್ಟಿಸಿಕೊಂಡು ಬಂದಿದ್ದ ಏಳು ಮಂದಿಯ ತಂಡ ನಡುರಸ್ತೆಯಲ್ಲಿ ದಾಂಧಲೆಗೆ ಮುಂದಾಗಿತ್ತು. ಆನಂತರ ವಿವೇಕಾನಂದ ಅಲ್ಲಿನ ಅಂಗಡಿಯೊಂದಕ್ಕೆ ನುಗ್ಗಿ ಅಪಾಯದಿಂದ ಪಾರಾಗಿದ್ದ. ಅಟ್ಟಿಸಿಕೊಂಡು ಬಂದ ಏಳು ಮಂದಿಯಿದ್ದ ತಂಡದಲ್ಲಿ ರೌಡಿ ಶೀಟರ್ ಗಳಿದ್ದರು. ಬಹಿರಂಗವಾಗಿ ತಲವಾರು ತೋರಿಸಿ ಬೆದರಿಸಿದ್ದಲ್ಲದೆ, ಮಹಿಳೆಯರು, ಮಕ್ಕಳನ್ನು ಬೆದರಿಸಿ ತೆರಳಿದ್ದರು. ಈ ಘಟನೆಯ ವಿಡಿಯೋವನ್ನು ಸ್ಥಳೀಯರು ಮಾಡಿದ್ದು, ಅದು ವೈರಲ್ ಆಗಿತ್ತು. ವಿಡಿಯೋ ಆಧರಿಸಿ, ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಮಿಥುನ್ ರೈ ಪರವಾಗಿ ಪೋಸ್ಟರ್ ಹಾಕುತ್ತಿದ್ದ ವೇಳೆ ಎರಡು ತಂಡಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಹಿಂದು ಯುವಕರು ಪೋಸ್ಟರ್ ಹಾಕಿದ್ದನ್ನು ಮುಸ್ಲಿಮ್ ಯುವಕರು ಪ್ರಶ್ನೆ ಮಾಡಿದ್ದರು. ನೀವು ಬಿಜೆಪಿ ಅಲ್ವಾ ಎಂದು ಪ್ರಶ್ನೆ ಮಾಡಿದ್ದು ಆನಂತರ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಆನಂತರ, ಅಲ್ಲಿದ್ದ ಬಜರಂಗದಳದ ಯುವಕ ವಿವೇಕಾನಂದ ಎಂಬಾತನನ್ನು ಮುಸ್ಲಿಂ ಯುವಕರು ಅಟ್ಟಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಇಮ್ರಾನ್, ರಿಜ್ವಾನ್, ರಮೀಜ್, ಮುಸ್ತಾಫ್, ಶಾರುಖ್ ಮತ್ತು ಅಶ್ಪಾಕ್ ಎಂಬವರು ಅಟ್ಟಿಸಿಕೊಂಡು ಬಂದಿದ್ದು, ಅವರ ವಿರುದ್ಧ ಕೇಸು ದಾಖಲಾಗಿದೆ. ಈ ಪೈಕಿ ರಿಜ್ವಿನ್ ರೌಡಿ ಶೀಟರ್ ಆಗಿದ್ದು ಬಹಿರಂಗ ಬೆದರಿಕೆ ಹಾಕಿದ್ದು ವಿಡಿಯೋದಲ್ಲಿ ದಾಖಲಾಗಿತ್ತು.

ಮೂಡುಶೆಡ್ಡೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಹಿಂದು ಸಂಘಟನೆಗೆ ಸೇರಿದ ಮನೋಜ್ ಮತ್ತು ವೀರೇಶ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಅ.6ರಂದು ರಾತ್ರಿ ಅಶ್ಫಾಕ್ ಎಂಬ ಯುವಕನಿಗೆ ನಾಲ್ವರ ತಂಡವೊಂದು ಹಲ್ಲೆ ನಡೆಸಿತ್ತು. ಆಟೋ ರಿಕ್ಷಾದಲ್ಲಿ ಬಂದಿದ್ದ ತಂಡ ಹಲ್ಲೆ ನಡೆಸಿದ್ದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಘಟನೆಗೆ ಪ್ರತೀಕಾರ ರೂಪದಲ್ಲಿ ಮರುದಿನ ಗುರುವಾರ ಸಂಜೆ ರಿಜ್ವಾನ್ ಮತ್ತು ತಂಡ ತಲವಾರು ತೋರಿಸಿ ಬೆದರಿಕೆ ಹಾಕಿದೆ ಎನ್ನಲಾಗುತ್ತಿದೆ. ಇವೆರಡೂ ಘಟನೆಗೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
Mangalore Seven arrested for assault and threatening of Bajarang dal activist in Moodushedde. A gang of rowdy sheeters reportedly brandished swords and posed death threat. The incident happened on the evening of Thursday October 7.
20-03-26 06:10 pm
HK News Staffer
ಫೇಸ್ಬುಕ್ ಪೋಸ್ಟ್ನಿಂದ ಹುಟ್ಟಿದ ಜೀವಭಯ ; ನೀಲಿ ‘ಡ...
20-03-26 12:02 pm
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
20-03-26 05:32 pm
HK News Staffer
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
20-03-26 11:26 pm
HK News Staffer
ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್...
20-03-26 09:44 pm
Peace Festival in Udupi Amid Protests; High C...
20-03-26 07:54 pm
Mohan C Lazarus Udupi, Protest: ಹಿಂಜಾವೇ ಪ್ರತಿ...
20-03-26 07:36 pm
Sandesh PG, Inspector: ಮೂಡುಬಿದ್ರೆ ಇನ್ಸ್ ಪೆಕ್ಟ...
20-03-26 06:56 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm