ಬ್ರೇಕಿಂಗ್ ನ್ಯೂಸ್
27-09-21 10:36 pm Headline Karnataka News Network ಕ್ರೈಂ
ಚಿಕ್ಕಬಳ್ಳಾಪುರ, ಸೆ.27: ತಮ್ಮ ಅಕ್ರಮ ಸಂಬಂಧ ಪುತ್ರಿಗೂ ತಿಳಿದು ಮರ್ಯಾದೆ ಬಟಾ ಬಯಲಾಯ್ತು ಅಂತ ಮುಜುಗರ ಪಟ್ಟುಕೊಂಡ ತಾಯಿ ತನ್ನ ಕರುಳ ಕುಡಿಯನ್ನೇ ಪ್ರಿಯಕರನ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೈದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಎಂಬಲ್ಲಿ ಸೆ.5 ರಂದು ಬಾವಿಯಲ್ಲಿ ಯುವತಿ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಿದ್ದ ಮೃತ ಯುವತಿಯ ತಂದೆ, ತಾಯಿ, ದೊಡ್ಡಪ್ಪನೇ ಕೊಲೆಗಾರರಾಗಿದ್ದು ಪೊಲೀಸರನ್ನು ಕೈಕೋಳ ತೊಡಿಸಿದ್ದಾರೆ.
ಮುಸಲ್ಮಾನಪುರ ಗ್ರಾಮದ ಪರ್ವೀನ್ ಮುಬಾರಕ್ (34) ಎಂಬ ಯುವತಿಯ ಕೊಲೆ ನಡೆದಿದ್ದು ಪಾಳು ಬಾವಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ಬಳಿಕ ಮೃತಳ ದೊಡ್ಡಪ್ಪ ಮೈದಗೋಳಂ ಪ್ಯಾರೇಜಾನ್, ಮೃತಳ ತಾಯಿ ಗುಲ್ಜಾರ್ ಬಾನು, ಮೃತಳ ತಂದೆ ಪ್ಯಾರೇಜಾನ್ ಅವರನ್ನು ಬಂಧಿಸಿದ್ದಾರೆ.
ಮೃತಳ ತಾಯಿ ಗುಲ್ಜಾರ್ ಬಾನುಗೆ ತನ್ನ ಅಕ್ಕನ ಗಂಡನ ಜೊತೆ ಅನೈತಿಕ ಸಂಬಂಧ ಇದ್ದುದು ಮಗಳಿಗೆ ಗೊತ್ತಾಗಿ ಪ್ರಶ್ನೆ ಮಾಡಿದ್ದಳು. ಅದೇ ಕಾರಣಕ್ಕೆ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ.

ಮೃತ ಪರ್ವೀನ್ ಮುಬಾರಕ್ 10 ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಪ್ರಿಯಕರ ಶಿವಪ್ಪನೊಂದಿಗೆ ವಾಸವಿದ್ದಳು. ಆದ್ರೆ ಪ್ರಿಯಕರ ಶಿವಪ್ಪ ಕೆಲ ಸಮಯದಲ್ಲಿ ಬಳಿಕ ಮೃತಪಟ್ಟಿದ್ದ. ನಂತರ ಮತ್ತೊಬ್ಬ ವಿನಯ್ ಕುಮಾರ್ ಜೊತೆ ವಾಸವಾಗಿದ್ದಳು. ಆದರೆ ಆತನೂ ಕೆಲ ವರ್ಷಗಳಲ್ಲಿ ಮೃತಪಟ್ಟಿದ್ದ. ಇಬ್ಬರನ್ನು ಕಳೆದುಕೊಂಡ ಪರ್ವೀನ್, ತವರು ಮನೆ ಸೇರಿದ್ದಳು.
ಆದರೆ, ಮನೆಗೆ ಬಂದರೆ ತಾಯಿಯೇ ತನ್ನ ಅಕ್ಕನ ಗಂಡನ ಜೊತೆ ಸಂಬಂಧ ಇರಿಸಿಕೊಂಡಿದ್ದಳು. ತನ್ನ ಅನೈತಿಕ ಸಂಬಂಧವನ್ನು ತಿಳಿದ ಮಗಳು ಪ್ರಶ್ನೆ ಮಾಡಿದ್ದಳು. ಆದರೆ ಕಟ್ಟಿಕೊಂಡ ಗಂಡನ ಬಿಟ್ಟು ಬೇರೆಯವರ ಜೊತೆ ಹೋಗಿ ಮರಳಿ ಬಂದಿದ್ದ ವಿಚಾರ ಮನೆಯಲ್ಲಿ ಕೋಪ ಇತ್ತು. ಅದರ ಜೊತೆಗೆ, ತನ್ನ ಸುಖಕ್ಕೆ ಅಡ್ಡಬಂದಿದ್ದ ನೆಪದಲ್ಲಿ ತಾಯಿಯೇ ಕೊಲೆಗೆ ಸ್ಕೆಚ್ ಹಾಕಿದ್ದಳು. ಅಕ್ಕನ ಗಂಡ ಹಾಗೂ ತನ್ನ ಪತಿಯೊಂದಿಗೆ ಸೇರಿ ದಾರದಿಂದ ಬಿಗಿದು ಕೊಲೆ ಮಾಡಿದ್ದಾಳೆ. ಆನಂತರ, ಪಾಳು ಬಾವಿಗೆ ಎಸೆದಿದ್ದರು. ಶವದಲ್ಲಿ ಕತ್ತು ಬಿಗಿದಿದ್ದು ಕಂಡಿದ್ದರಿಂದ ಪೊಲೀಸರು ಸಂಶಯಗೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ, ಆಕೆಯೇ ನೇಣು ಬಿಗಿದು ಸಾವನ್ನಪ್ಪಿದ್ದಾಗಿ ಕತೆ ಕಟ್ಟಿದ್ದರು.
ಆದರೆ, ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೊರಬಂದಿದ್ದು ಅಸಲಿ ಆರೋಪಿಳು ಜೈಲು ಸೇರಿದ್ದಾರೆ.
Chikkaballapur Mother and family Murder own daughter over illicit affiar tell cops as suicide three arrested. Mother along with her brothers had killed thier daughter and then threw her into the well and represented it as suicide to the police. The deceases has been identified as Parvin.
07-11-25 09:59 pm
HK News Desk
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm