ಬ್ರೇಕಿಂಗ್ ನ್ಯೂಸ್
25-09-21 05:23 pm Headline Karnataka News Network ಕ್ರೈಂ
ಚೆನ್ನೈ, ಸೆ.25: ಅದು ಜುಲೈ 7, 2003ರ ಘಟನೆ. ಆಗಷ್ಟೇ ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದ ಮುರುಗೇಶನ್ ಮತ್ತು ಕನ್ನಗಿ ಅವರನ್ನು ಮರಕ್ಕೆ ಕಟ್ಟಿ ಹಾಕಲಾಗಿತ್ತು. ಕೈಕಾಲನ್ನು ಕಟ್ಟಿ, ಬಲವಂತದಿಂದ ವಿಷವನ್ನು ಕುಡಿಸಿ ಕೊಂದು, ಬೆಂಕಿ ಕೊಟ್ಟು ದಹಿಸಿದ್ದರು. ಅಲ್ಲಿ ಸೇರಿದ್ದ 300ಕ್ಕೂ ಹೆಚ್ಚು ಜನರ ಎದುರಲ್ಲೇ ಭೀಭತ್ಸ ರೀತಿಯಲ್ಲಿ ಕೃತ್ಯ ನಡೆದಿತ್ತು. ತಮಿಳುನಾಡಿನ ಕುದ್ದಲೂರು ಜಿಲ್ಲೆಯ ವಿರುದಾಚಲಂ ಬಳಿಯ ಪುದುಕೂರೈಪೆಟ್ಟೈ ಎಂಬ ಗ್ರಾಮದಲ್ಲಿ ನಡೆದಿದ್ದ ಈ ಮರ್ಯಾದಾ ಹತ್ಯೆ ಇಡೀ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿತ್ತು. ಯಾಕಂದ್ರೆ, ಈ ಪರಿ ಪೈಶಾಚಿಕವಾಗಿ ಹಿಂಸಿಸಿ ಯುವ ಜೋಡಿಯನ್ನು ಕೊಂದು ಹಾಕಿದ್ದು ಬೇರಾರೂ ಆಗಿರಲಿಲ್ಲ. ಹುಡುಗಿಯ ತಂದೆ ಮತ್ತು ಸೋದರನೇ ಸೇರಿಕೊಂಡು ಜಾತಿ ವೈಷಮ್ಯದ ಕಾರಣಕ್ಕೆ ವಿಕೃತವಾಗಿ ನಡೆದುಕೊಂಡಿದ್ದರು.
ಘಟನೆ ನಡೆದು ಸುದೀರ್ಘ 17 ವರ್ಷಗಳ ನಂತರ, ಕುದ್ದಲೂರು ಜಿಲ್ಲೆಯ ಎಸ್ಸಿ- ಎಸ್ಟಿ ವಿಶೇಷ ಕೋರ್ಟ್ 13 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿದ್ದು, ಶಿಕ್ಷೆ ಘೋಷಣೆ ಮಾಡಿದೆ. ಇಡೀ ಕೃತ್ಯಕ್ಕೆ ಕಾರಣ ಎನ್ನಲಾದ ಕನ್ನಗಿಯ ಸೋದರ ಮರುದ ಪಾಂಡ್ಯನ್ ಗೆ ಗಲ್ಲು ಶಿಕ್ಷೆ ವಿಧಿಸಿದರೆ, ಕನ್ನಗಿಯ ತಂದೆಗೆ ಜೀವಾವಧಿ ಶಿಕ್ಷೆ ಘೋಷಣೆ ಮಾಡಲಾಗಿದೆ. ವಿಶೇಷ ಅಂದ್ರೆ, ಹಂತಕರಿಗೆ ನೆರವು ನೀಡಿದ್ದ ಆರೋಪದಲ್ಲಿ ನಿವೃತ್ತ ಡಿಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿ ಮತ್ತು ಇನ್ನೊಬ್ಬ ಇನ್ ಸ್ಪೆಕ್ಟರನಿಗೂ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.
ಕಾಲೇಜಿನಲ್ಲಿ ಟಿಸಿಲೊಡೆದಿದ್ದ ಪ್ರೀತಿ- ಪ್ರೇಮ
2003ರಲ್ಲಿ ದಲಿತ ವರ್ಗದ ಮುರುಗೇಸನ್(25) ಮತ್ತು ಮುಂದುವರಿದ ವನ್ನಿಯಾರ್ ಸಮುದಾಯಕ್ಕೆ ಸೇರಿದ ಕನ್ನಗಿ(22) ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸುತ್ತಾರೆ. 2003ರ ಮೇ 5ರಂದು ಇವರ ಮದುವೆ ನಡೆದಿತ್ತು. ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಮುರುಗೇಶನ್ ಮತ್ತು ಡಿಪ್ಲೋಮಾ ಪೂರೈಸಿದ್ದ ಕನ್ನಗಿ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಇಬ್ಬರೂ ಪುದುಕೂರಪೆಟ್ಟೈ ಗ್ರಾಮದವರೇ ಆಗಿದ್ದು, ಚಿದಂಬರಂ ನಗರದ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಕಾಲೇಜು ಕಲಿಯುತ್ತಿದ್ದಾಗಲೇ ಪ್ರೀತಿಯಲ್ಲಿ ಬಿದ್ದಿದ್ದರು.
ಅಂತರ್ಜಾತಿ ಅದರಲ್ಲೂ ಹುಡುಗ ಕೆಳಜಾತಿ ಆಗಿದ್ದರಿಂದ ಇವರ ಪ್ರೀತಿಯನ್ನು ಮನೆಯವರಿಗೆ ತಿಳಿಸದೇ ರಹಸ್ಯವಾಗೇ ಇಟ್ಟಿದ್ದರು. ಕನ್ನಗಿ ತನ್ನ ಮನೆಯವರಿಗೆ ಗೊತ್ತಾದರೆ, ಮದುವೆಗೆ ಅಡ್ಡಿ ಬರುತ್ತಾರೆ, ದಲಿತ ವ್ಯಕ್ತಿಯನ್ನಂತೂ ಮದುವೆಯಾಗಲು ಬಿಡಲ್ಲ ಎಂದು ತುಂಬ ಗುಪ್ತವಾಗಿಯೇ ಇಟ್ಟಿದ್ದಳು. ಇದೇ ಕಾರಣಕ್ಕೆ ಇವರು ರಹಸ್ಯವಾಗಿಯೇ ಮದುವೆಯಾಗುತ್ತಾರೆ. ಮದುವೆಯಾದರೂ ಹುಡುಗನ ಮನೆಗೆ ತೆರಳದೆ ತನ್ನ ಮನೆಯಲ್ಲೇ ಇದ್ದು, ಮುರುಗೇಶನಿಗೆ ಉದ್ಯೋಗ ಸಿಗಲೆಂದು ಕನ್ನಗಿ ಕಾಯುತ್ತಾಳೆ. ಈ ನಡುವೆ, ಕನ್ನಗಿ ಮದುವೆ ವಿಷಯ ತಿಳಿದ ಮನೆಮಂದಿ ಆತನ ಜೊತೆಗೆ ತೆರಳುವುದಕ್ಕೆ ಕಟುವಾಗಿ ವಿರೋಧಿಸುತ್ತಾರೆ. ಆನಂತರ ಮುರುಗೇಶನಿಗೆ ತಿರುಪ್ಪೂರ್ ಜಿಲ್ಲೆಯಲ್ಲಿ ಕೆಲಸ ಸಿಗುತ್ತಲೇ 2003ರ ಜುಲೈ ತಿಂಗಳಲ್ಲಿ ಕನ್ನಗಿಯ ಮನೆಗೆ ಬಂದು ಈಕೆಯನ್ನು ಕರೆದೊಯ್ಯುತ್ತಾನೆ.
ಇತ್ತ ಕೆಲವು ದಿನಗಳಲ್ಲೇ ಮಗಳು ಮನೆಯಿಂದ ಕಾಣೆಯಾಗಿದ್ದು ತಿಳಿಯುತ್ತಲೇ ಸ್ಥಳೀಯ ಪಂಚಾಯತ್ ಸದಸ್ಯನಾಗಿದ್ದ ಆಕೆಯ ತಂದೆ ಸಿ.ದೊರೈಸ್ವಾಮಿ ಕ್ರುದ್ಧನಾಗುತ್ತಾನೆ. ತನ್ನ ಮಗ ಮರುದಪಾಂಡ್ಯನ್ ಮತ್ತು ಇತರ ಸಂಬಂಧಿಕರ ಜೊತೆ ಸೇರಿಕೊಂಡು ಎಲ್ಲೆಡೆ ಹುಡುಕಾಟ ನಡೆಸುತ್ತಾರೆ. ವಿರುದಾಚಲಂನಲ್ಲಿರುವ ಮುರುಗೇಶನ ಮನೆಗೂ ತೆರಳಿ, ಹುಡುಕುತ್ತಾರೆ. ಕೆಲವು ದಿನಗಳ ವರೆಗೆ ಯುವ ಜೋಡಿ ಇವರಿಗೆ ಕಾಣ ಸಿಗುವುದೇ ಇಲ್ಲ. ಆನಂತರ ಪೊಲೀಸರ ಸಹಾಯವನ್ನೂ ಕನ್ನಗಿ ಕುಟುಂಬ ಪಡೆಯುತ್ತದೆ. ಇದರ ಬೆನ್ನಲ್ಲೇ ಮುರುಗೇಶ ಒಂದ್ಕಡೆ ಪತ್ತೆಯಾಗಿದ್ದು ಪೊಲೀಸರ ನೆರವು ಪಡೆದು ಆತನನ್ನು ಹೊತ್ತೊಯ್ಯುತ್ತಾರೆ. ನಿಗೂಢ ಜಾಗಕ್ಕೆ ಕರೆದೊಯ್ದು ಕನ್ನಗಿ ಎಲ್ಲಿದ್ದಾಳೆ ಅಂತ ಹೇಳುವಂತೆ ಚಿತ್ರಹಿಂಸೆ ಕೊಡುತ್ತಾರೆ.
ಪೊಲೀಸರ ನೆರವಿನಲ್ಲಿ ವಿಚಿತ್ರ ಚಿತ್ರಹಿಂಸೆ
ಮುರುಗೇಶನನ್ನು ಕೈಕಾಲು ಕಟ್ಟಿ ಬಾವಿಯ ಮೇಲೆ ನೇತು ಹಾಕುತ್ತಾರೆ. ಕನ್ನಗಿ ಬಗ್ಗೆ ಮಾಹಿತಿ ನೀಡದೇ ಇದ್ದಲ್ಲಿ ಬಾವಿಗೆ ತಳ್ಳಿ ಬಿಡುತ್ತೇವೆಂದು ಬೆದರಿಸಿ, ಆತನ ಬಾಯಿ ಬಿಡಿಸುತ್ತಾರೆ. ಇದರಿಂದ ಭಯ ಪಟ್ಟ ಮುರುಗೇಶ, ಕನ್ನಗಿ ತನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಸೇಫ್ ಆಗಿದ್ದಾಳೆ ಎಂದು ಹೇಳುತ್ತಾನೆ. ಆನಂತರ ಆಕೆಯನ್ನು ಅಲ್ಲಿಂದ ಕರೆತಂದು ತಮ್ಮ ಗ್ರಾಮದ ಪುತ್ತು ಕವರ್ ಪೇಟೈ ಎನ್ನುವ ಜಾಗದಲ್ಲಿ ಅವರಿಬ್ಬರನ್ನೂ ಮರಕ್ಕೆ ಕಟ್ಟಿ ಹಾಕಿ, ಬಲವಂತದಿಂದ ವಿಷ ಕುಡಿಸುತ್ತಾರೆ. ಗ್ರಾಮಸ್ಥರು, ಕುಟುಂಬಸ್ಥರು ಎಲ್ಲರ ಎದುರಲ್ಲೇ ವಿಕೃತವಾಗಿ ನಡೆದುಕೊಳ್ಳುತ್ತಾರೆ. ಬೆದರಿಕೆ ಮಧ್ಯೆಯೂ ಕನ್ನಗಿ ತಮ್ಮ ಕುಟುಂಬಸ್ಥರನ್ನು ದೂರವಿಟ್ಟು ಹೊರಗಿನ ವ್ಯಕ್ತಿಯನ್ನು ಮದುವೆಯಾಗಿದ್ದನ್ನು ನಾವು ಸಹಿಸಲ್ಲ ಎನ್ನುತ್ತಲ್ಲೇ ಇಬ್ಬರನ್ನೂ ಭೀಕರವಾಗಿ ಕೊಲ್ಲುತ್ತಾರೆ. ಅಷ್ಟೇ ಅಲ್ಲ, ನಮ್ಮ ಸಮುದಾಯದವರು ಯಾವತ್ತೂ ಹೊರಗಿನವರನ್ನು ಮದುವೆಯಾಗಬಾರದು ಎಂದು ಎಚ್ಚರಿಕೆ ನೀಡುತ್ತಲೇ ಅವರನ್ನು ಸುಟ್ಟು ಹಾಕುತ್ತಾರೆ. ತಂದೆ, ಮಗ ಸೇರಿಕೊಂಡು ಮಾಡಿದ್ದ ಜಾತಿ ದ್ವೇಷದ ಮರ್ಯಾದಾ ಹತ್ಯೆಯ ಈ ಕೃತ್ಯ ತಮಿಳುನಾಡಿನ ನೀಚ ಜಾತಿ ಪದ್ಧತಿಗೆ ಸಾಕ್ಷಿಯಾಗಿತ್ತು.
ಆನಂತರ ವಿಷ್ಯ ಭಾರೀ ಕೋಲಾಹಲಕ್ಕೆ ಕಾರಣವಾಗಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ, 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸುತ್ತಾರೆ. ಅದರಲ್ಲಿ 11 ಮಂದಿ ಕನ್ನಗಿಯ ಕುಟುಂಬಸ್ಥರೇ ಆಗಿರುತ್ತಾರೆ. ಇದಲ್ಲದೆ, ನಿವೃತ್ತ ಡಿಎಸ್ಪಿ ಚೆಲ್ಲಮುತ್ತು ಮತ್ತು ಮಂಗಲ್ ಪೇಟೈ ಇನ್ ಸ್ಪೆಕ್ಟರ್ ತಮಿಳ್ ಮಾರನ್ ಕೂಡ ಪ್ರಕರಣದಲ್ಲಿ ಆರೋಪಿಗಳಿಗೆ ನೆರವು ನೀಡಿದ್ದಾರೆಂದು ಆರೋಪ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ವಿಚಾರಣೆ ನಡೆಸಿದ ಎಸ್ಸಿ – ಎಸ್ಟಿ ವಿಶೇಷ ಕೋರ್ಟ್ ನ್ಯಾಯಾಧೀಶ ಎಸ್. ಉತ್ತಮರಸ ಮೊನ್ನೆ 2021ರ ಸೆಪ್ಟಂಬರ್ 24ರಂದು ಯಾವುದೇ ಮುಲಾಜು ತೋರದೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುತ್ತಾರೆ. ಆದರೆ, 15 ಮಂದಿಯಲ್ಲಿ ಇಬ್ಬರನ್ನು ಖುಲಾಸೆಗೊಳಿಸಿ ತೀರ್ಪು ನೀಡುತ್ತಾರೆ.
ಕೊಲೆಯಾದ ಮುರುಗೇಶನ ಸಂಬಂಧಿಕರೇ ಆಗಿದ್ದ ಅಯ್ಯಸ್ವಾಮಿ ಮತ್ತು ಗುಣಶೇಖರ್ ಅವರನ್ನು ಆರೋಪ ಮುಕ್ತಗೊಳಿಸುತ್ತಾರೆ. ಅಯ್ಯಸ್ವಾಮಿ ಮುರುಗೇಶನ ಸ್ವಂತ ಮಾವ. ಆದರೆ, ಮುರುಗೇಶನನನ್ನು ಕೊಲ್ಲುವುದಕ್ಕಾಗಿ, ಬಲವಂತದಿಂದ ಅಯ್ಯಸ್ವಾಮಿ ಮೂಲಕ ವಿಷ ಕುಡಿಸಿದ್ದರು. ಕನ್ನಗಿಯ ತಂದೆ ದೊರೆಸ್ವಾಮಿ ದಲಿತ ವ್ಯಕ್ತಿಯನ್ನು ತಾನು ಮುಟ್ಟಲ್ಲ ಎಂದು ಅಯ್ಯಸ್ವಾಮಿಯನ್ನು ಬಲವಂತ ಪಡಿಸಿ ವಿಷವನ್ನು ಮುರುಗೇಶನ ಬಾಯಿಗೆ ಹಾಕಿಸಿದ್ದರು. ಈ ವಿಚಾರವನ್ನು ಅಯ್ಯಸ್ವಾಮಿ ವಿಚಾರಣೆ ವೇಳೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ, ಅಯ್ಯಸ್ವಾಮಿ ಮತ್ತು ಇನ್ನೊಬ್ಬ ಆತನ ಸಂಬಂಧಿಕ ಗುಣಶೇಖರ್ ನನ್ನು ಬಲವಂತಪಡಿಸಿ, ಮುರುಗೇಶನ ದೇಹಕ್ಕೆ ಬೆಂಕಿ ಕೊಡಿಸಿದ್ದರು. ಈ ಕಾರಣಕ್ಕಾಗಿ ಇಬ್ಬರನ್ನೂ ನ್ಯಾಯಾಧೀಶರು ಪ್ರಕರಣದಲ್ಲಿ ಖುಲಾಸೆ ಪಡಿಸಿದ್ದಾರೆ.
On July 7, 2003, a young couple- Murugesan and Kannagi- were tied up at a public place in front of almost 300 people in the Puthukkooraippettai village near Virudhachalam in Tamil Nadu- they were forced to drink poison and then their bodies burnt. Eighteen years after what was probably the first case of caste killing reported from the Cuddalore district of Tamil Nadu, a Cuddalore special SC/ST court on Friday, September 24 convicted 13 accused in the case. Kannagi’s brother Marudupandian who hatched the entire conspiracy has been given the death sentence while her father Duraisami has been sentenced to life imprisonment. Two police officers, who the court found had sided with the murderers, including a retired Deputy Superintendent of Police and a inspector have been sentenced to life imprisonment.
05-04-25 02:47 pm
HK News Satff
Kalaburagi Accident Mini Bus and Truck: ಕಲಬುರ...
05-04-25 12:21 pm
Ankola Robbery, Talat gang: ಅಂಕೋಲಾದಲ್ಲಿ ನಗದು...
04-04-25 10:54 pm
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
05-04-25 07:49 pm
Udupi Correspondent
Mangalore Jail, Jammer, Vedavyas Kamath; ಜೈಲಿ...
05-04-25 01:16 pm
Mangalore, Thokkottu: ತೊಕ್ಕೊಟ್ಟು ಫ್ಲೈಓವರ್ ಕೆಳ...
04-04-25 11:07 pm
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
05-04-25 04:27 pm
HK News Staff
Anwar Manippady threat, Mangalore crime: ವಕ್ಪ...
04-04-25 03:03 pm
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm