ಬ್ರೇಕಿಂಗ್ ನ್ಯೂಸ್
19-09-21 01:52 pm Mangaluru Correspondent ಕ್ರೈಂ
Photo credits : Representational
ಪಡುಬಿದ್ರಿ, ಸೆ.19 : ಮಂಗಳೂರು- ಮುಂಬಯಿ ಕೊಂಕಣ ರೈಲ್ವೆಯಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು, ಉಡುಪಿ ಜಿಲ್ಲೆಯ ಎಲ್ಲೂರು ನಿವಾಸಿ ಸುಚಿತಾ ಕುಸುಮಾಕರ್ ಶೆಟ್ಟಿಯವರ ಬೆಲೆ ಬಾಳುವ ಮೊಬೈಲ್ ಸಹಿತ ನಗದು ಇದ್ದ ಪರ್ಸ್ ಅನ್ನು ಸೆ.16 ರ ರಾತ್ರಿ ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.
ಪರ್ಸ್ನಲ್ಲಿ 75 ಸಾವಿರ ರೂ. ಮೌಲ್ಯದ ಮೊಬೈಲ್, 12 ಸಾವಿರ ರೂ. ನಗದು ಇನ್ನಿತರ ವಸ್ತುಗಳಿದ್ದವು. ಸುಚಿತಾ ಅವರು ಬೆಲೆ ಬಾಳುವ ವಜ್ರ ಮತ್ತು ಚಿನ್ನಾಭರಣಗಳನ್ನು ಸೀಟ್ನಡಿ ಇರಿಸಿದ್ದ ಬ್ಯಾಗ್ನಲ್ಲಿಟ್ಟಿದ್ದರು. ಹಾಗಾಗಿ ಅವುಗಳು ಕಳವಾಗಿಲ್ಲ. ಮುಂಬೈ ಬಂಟರ ಸಂಘದ ನಗರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಕುಸುಮಾಕರ್ ಶೆಟ್ಟಿ ಮುಂಬಯಿಗೆ ತೆರಳಲು ಉಡುಪಿಯಲ್ಲಿ ಮತ್ಸ್ಯ ಗಂಧ ರೈಲು ಹತ್ತಿದ್ದರು. ರೈಲಿನ ಎಸಿ ಕೋಚ್ನಲ್ಲಿ ಸಹೋದರಿಯೊಂದಿಗೆ ಪ್ರಯಾಣ ಬೆಳೆಸಿದ್ದರು.

ಉಡುಪಿಯಿಂದ ಹೊರಟ ರೈಲು ತಡರಾತ್ರಿ ಪನ್ವೇಲ್ ಸಮೀಪದ ರೋಹಾ - ನಾಗೋಥಾಣೆಗೆ ತಲುಪಿದ್ದಾಗ ಸುಚಿತಾರಿಗೆ ನಿದ್ದೆ ಆವರಿಸಿದ್ದು ಮುಂಜಾನೆ 3.40ರ ವೇಳೆ ತಲೆದಿಂಬಿನಡಿ ಇಟ್ಟಿದ್ದ ಪರ್ಸ್ನ್ನು ಕಳ್ಳರು ಎಳೆದುಕೊಂಡು ಹೋಗಿದ್ದಾರೆ. ಕಂಪಾರ್ಟ್ಮೆಂಟಿನ ಕೊನೆಯ ಸೀಟ್ ನಲ್ಲಿ ಮಲಗಿದ್ದ ಕಾರಣ ಪರ್ಸ್ ಎಳೆದು ಬಾಗಿಲಿನ ಮೂಲಕ ಓಡಿ ಹೋಗಿದ್ದಾನೆ. ಈ ಸಂದರ್ಭ ಅವರು ಬೊಬ್ಬಿಟ್ಟರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈಯಿಂದ ಮಂಗಳೂರಿಗೆ ಬರುವ ಮತ್ಸ್ಯ ಗಂಧ ರೈಲಿನಲ್ಲಿ ಎರಡು ಕುಖ್ಯಾತ ಕಳ್ಳರ ತಂಡಗಳು ನಿರಂತರ ಕಳವು ಕೃತ್ಯದಲ್ಲಿ ತೊಡಗಿವೆ. ಆದರೆ ರೈಲ್ವೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ.
Udupi Robbery in Matsyagandha train Man robbed of 75 Thousand. The railway police are showing negligence it is said in this case.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm