ಬ್ರೇಕಿಂಗ್ ನ್ಯೂಸ್
24-08-21 10:11 pm Headline Karnataka News Network ಕ್ರೈಂ
ಬೆಂಗಳೂರು, ಆಗಸ್ಟ್ 25: ಇಲ್ಲೊಬ್ಬ ವ್ಯಕ್ತಿ ಜೈಲಿನಲ್ಲಿದ್ದುಕೊಂಡೇ ಬರೋಬ್ಬರಿ ₹ 200 ಕೋಟಿ ರೂಪಾಯಿ ಮೊತ್ತವನ್ನು ಜನರನ್ನು ಬ್ಲ್ಯಾಕ್ಮೇಲ್ ಮಾಡಿಯೇ ವಸೂಲಿ ಮಾಡಿದ್ದಾನೆ. ಈತನ ವಸೂಲಿ ದಂಧೆ ಕೇಳಿ ರಾಜಧಾನಿ ದೆಹಲಿ ಪೊಲೀಸರು ದಂಗಾಗಿದ್ದಾರೆ. ಅಧಿಕಾರಿಗಳ ಸರ್ಪಗಾವಲಿನಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ₹ 200 ಕೋಟಿ ಹಣವನ್ನು ಬೆದರಿಕೆ ಮೂಲಕ ವಸೂಲಿ ಮಾಡಿದ್ದಾನೆ. ಈತನ ಬೆದರಿಕೆಗೆ ಹೆದರಿ ದೊಡ್ಡ ದೊಡ್ಡ ಉದ್ಯಮಿಗಳು, ಶ್ರೀಮಂತರೇ ಕೋಟಿಗಟ್ಟಲೇ ಹಣ ನೀಡಿ ಇಂಗು ತಿಂದ ಮಂಗನಂತಾಗಿದ್ದಾರೆ.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಓದಿದ್ದ ಸುಕೇಶ ಚಂದ್ರಶೇಖರ್ ಗೆ ಹೇಗಾದ್ರೂ ಶ್ರೀಮಂತನಾಗಲೇ ಬೇಕೆಂಬ ಹುಚ್ಚು ಇತ್ತು. ಶ್ರೀಮಂತನಾಗಿ, ಐಷಾರಾಮಿ ಜೀವನ ನಡೆಸಲು ಈತ ಆಯ್ಕೆ ಮಾಡಿಕೊಂಡ ಮಾರ್ಗ ಮಾತ್ರ ಕೆಟ್ಟದ್ದಾಗಿತ್ತು.
ನಾಲ್ಕು ವರ್ಷಗಳ ಹಿಂದೆಯೇ ದೆಹಲಿ ಪೊಲೀಸರಿಂದ ಬಂಧನ
ಸುಕೇಶ್ ಚಂದ್ರಶೇಖರ್ ನನ್ನು ದೆಹಲಿ ಪೊಲೀಸರು ನಾಲ್ಕು ವರ್ಷಗಳ ಹಿಂದೆಯೇ ಬಂಧಿಸಿ ತಿಹಾರ್ ಜೈಲಿಗೆ ತಳ್ಳಿದ್ದರು. ತಮಿಳುನಾಡಿನ ಟಿಟಿವಿ ಮಾಲೀಕ ದಿನಕರನ್ಗೇ ಚಳ್ಳೆಹಣ್ಣು ತಿನ್ನಿಸಲು ಹೋಗಿ ಸಿಕ್ಕಿಬಿದ್ದಿದ್ದ. ಎಐಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಯಾದ ಎರಡೆಲೆ ಚಿಹ್ನೆಯನ್ನು ನಿಮ್ಮ ಬಣಕ್ಕೆ ಕೊಡಿಸುತ್ತೇನೆ. ಕೇಂದ್ರ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳ ಸಂಪರ್ಕವಿದೆ. ಅವರ ಮೂಲಕ ನಿಮ್ಮ ರಾಜಕೀಯ ಪಕ್ಷದ ಬಣಕ್ಕೆ ಎರಡೆಲೆ ಚಿಹ್ನೆ ಸಿಗುವಂತೆ ಮಾಡುತ್ತೇನೆ. ಇದಕ್ಕಾಗಿ ರೂ. 50 ಕೋಟಿ ನೀಡಬೇಕೆಂದು ಟಿಟಿವಿ ದಿನಕರನ್ ಬಳಿ ಬೇಡಿಕೆ ಇಟ್ಟಿದ್ದ. ಈತನ ಮಾತು ನಂಬಿ ದಿನಕರನ್ ಸ್ಪಲ್ಪ ಹಣ ಕೊಟ್ಟಿದ್ದರು. ಆದರೆ, ಚುನಾವಣಾ ಚಿಹ್ನೆ ಸಿಗದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.
ಆಗ ದೆಹಲಿ ಪೊಲೀಸರು ಅಖಾಡಕ್ಕಿಳಿದು ದೆಹಲಿಯ ಹಯಾತ್ ಹೋಟೆಲ್ ಕೊಠಡಿ ಮೇಲೆ ದಾಳಿ ನಡೆಸಿದ್ದರು. ಸುಕೇಶ್ ತಂಗಿದ್ದ ರೂಮಿನಲ್ಲಿ ಬರೋಬ್ಬರಿ 1.3 ಕೋಟಿ ರೂ. ನಗದು ಪತ್ತೆಯಾಗಿತ್ತು. ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಹಣವನ್ನು ಜಪ್ತಿ ಮಾಡಿ, ಸುಕೇಶ್ ಚಂದ್ರಶೇಖರ್ನನ್ನು ಬಂಧಿಸಿದ್ದರು. ಆನಂತರ ಚೆನ್ನೈ, ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಜೈಲಿಗಟ್ಟಿದ್ದರು.
ಟಿಡಿಪಿ ಸಂಸದನಿಗೂ ಬ್ಲಾಕ್ ಮೇಲ್
ಆಂಧ್ರ ಪ್ರದೇಶದಲ್ಲಿ ತೆಲುಗುದೇಶಂ ಪಕ್ಷದ ಸಂಸದರಾಗಿದ್ದ ರಾಯಪಟ್ಟಿ ಸಾಂಬಶಿವ ರಾವ್ ಅವರಿಗೂ ಈತ ಬ್ಲ್ಯಾಕ್ಮೇಲ್ ಮಾಡಿದ್ದ. ತಾನು ಸಿಬಿಐ, ಕೇಂದ್ರದ ಗೃಹ ಇಲಾಖೆಯ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದ. ನಿಮ್ಮ ವಿರುದ್ಧ ಕೇಸ್ ಬಂದಿದೆ. ಈ ಕೇಸ್ನಿಂದ ಬಚಾವಾಗಲು 100 ಕೋಟಿ ರೂಪಾಯಿ ಹಣ ನೀಡಬೇಕೆಂದು ಬ್ಲ್ಯಾಕ್ಮೇಲ್ ಮಾಡಿದ್ದ.
ನಾಲ್ಕು ವರ್ಷದಿಂದ ಜೈಲು, ಅಲ್ಲಿಂದಲೇ ವಸೂಲಿ !
ಸುಕೇಶ್ ಚಂದ್ರಶೇಖರ್ ಕಳೆದ ನಾಲ್ಕು ವರ್ಷಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಮೊಬೈಲ್ ಪೋನ್ ಮೂಲಕ ದೆಹಲಿಯ ಗಣ್ಯ ವ್ಯಕ್ತಿಗಳು, ಉದ್ಯಮಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದು ಈಗ ಬೆಳಕಿಗೆ ಬಂದಿದೆ. ಜೈಲಿನಲ್ಲಿದ್ದೇ ಬರೋಬ್ಬರಿ ₹190ರಿಂದ 200 ಕೋಟಿ ವರೆಗೂ ಹಣವನ್ನು ಸಿರಿವಂತರನ್ನು ಬೆದರಿಸಿ ವಸೂಲಿ ಮಾಡಿದ್ದಾನೆ. ಜೈಲಿನ ಹೊರಗಿದ್ದ ಈತನ ಇಬ್ಬರು ಸಹಚರರು ಗಣ್ಯವ್ಯಕ್ತಿಗಳು, ಉದ್ಯಮಿಗಳಿಂದ ಈತನ ಪರವಾಗಿ ಹಣ ಪಡೆಯುತ್ತಿದ್ದರು. ಪ್ರಕರಣದಲ್ಲಿ ದೊಡ್ಡ ಮೊತ್ತ, ಗಣ್ಯ ವ್ಯಕ್ತಿಗಳು ಭಾಗಿಯಾಗಿರುವುದರಿಂದ ಉನ್ನತ ಮಟ್ಟದ ತನಿಖೆಗಾಗಿ ಆರ್ಥಿಕ ಅಪರಾಧ ಪತ್ತೆ ವಿಭಾಗಕ್ಕೆ ವಹಿಸಲಾಗಿದೆ.
ಸುಕೇಶ್ ಚಂದ್ರಶೇಖರನ್ ಸಹಚರರಾದ ದೀಪಕ್ ರಾಮದಾನಿ, ಪ್ರದೀಪ್ ರಾಮದಾನಿಯನ್ನು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿ, ಮಾಡೆಲ್ ಟೌನ್ನಲ್ಲಿ ಬಂಧಿಸಲಾಗಿದೆ. ಇವರಿಂದ ಹಣ ಎಣಿಸುವ ಮೆಷಿನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ದೀಪಕ್ ರಾಮದಾನಿ, ಪ್ರದೀಪ್ ರಾಮದಾನಿ ಇಬ್ಬರೂ ಸುಕೇಶ್ ಹೇಳಿದ ವ್ಯಕ್ತಿಗಳ ಬಳಿ ಹೋಗಿ ಕೋಟಿಗಟ್ಟಲೆ ಹಣ ಪಡೆದುಕೊಂಡು ಬರುತ್ತಿದ್ದರು. ಜೈಲಿನ ಹೊರಗಿದ್ದ ಇವರನ್ನು ಬಳಸಿಕೊಂಡೇ ಸುಕೇಶ್ ಚಂದ್ರಶೇಖರ್ ಬರೋಬ್ಬರಿ ₹ 200 ಕೋಟಿ ವಸೂಲಿ ಮಾಡಿದ್ದಾನೆ. ಸುಕೇಶ್ ಚಂದ್ರಶೇಖರ್ ವಿರುದ್ಧ ದೇಶಾದ್ಯಂತ 24 ಕ್ರಿಮಿನಲ್ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ವಸೂಲಿ ಹಣದಲ್ಲೇ ಐಷಾರಾಮಿ ಬಂಗಲೆ !
ಬೆದರಿಸಿ ವಸೂಲಿ ಮಾಡಿದ ಹಣದಲ್ಲೇ ಸುಕೇಶ್ ಚಂದ್ರಶೇಖರ್ ಚೆನ್ನೈನಲ್ಲಿ ಬೀಚ್ ಫ್ರಂಟ್ ಐಷಾರಾಮಿ ಬಂಗಲೆ ಖರೀದಿಸಿದ್ದ. ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಗಲೆ ಮೇಲೆ ದಾಳಿ ನಡೆಸಿ, 16 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಬಂಗಲೆಯಲ್ಲಿ ₹ 82 ಲಕ್ಷ ನಗದು, 2 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಚಿತ್ರನಟಿ ಲೀನಾ ಮಾರಿಯ ಎಂಬಾಕೆ ಆರೋಪಿ ಸುಕೇಶ್ ಪ್ರೇಯಸಿಯಾಗಿದ್ದು ಕೆಲವು ಸಿನಿಮಾ, ಸಾಕ್ಷ್ಯಚಿತ್ರ, ಕಿರುಚಿತ್ರಗಳಲ್ಲಿ ನಟಿಸಿದ್ದಾಳೆ. ಇದೀಗ ಲೀನಾ ಮಾರಿಯಳನ್ನೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
The Enforcement Directorate (ED) on Monday said it has "seized" a sea-facing bungalow in Chennai, ₹ 82.5 lakh cash, and over a dozen luxurious cars in connection with a money laundering case against Sukesh Chandrashekar, accused in an alleged multi-crore extortion racket. It took the action after raiding multiple premises of Sukesh Chandrashekhar, also an accused in the Election Commission (EC) bribery case, along with those of his alleged associate and vice president of the RBL Bank identified as Komal Poddar.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
18-07-25 11:36 am
Mangalore Correspondent
Crore Fraud, Ronald Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm