ಬ್ರೇಕಿಂಗ್ ನ್ಯೂಸ್
10-08-21 01:25 pm Headline Karnataka News Network ಕ್ರೈಂ
ಥಾಣೆ, ಆಗಸ್ಟ್ 10: ವೈದ್ಯಕೀಯ ಕೋರ್ಸ್ಗೆ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಹದಿನೈದು ವರ್ಷದ ಬಾಲಕಿಯೊಬ್ಬಳು, ತನ್ನ ತಾಯಿಯೊಂದಿಗೆ ಜಗಳವಾಡಿ, ಕೊನೆಗೆ ಕರಾಟೆ ಬೆಲ್ಟ್ನಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನವಿ ಮುಂಬೈ ಉಪನಗರದಲ್ಲಿ ನಡೆದಿದೆ.
ನವಿ ಮುಂಬೈ ಉಪನಗರದ ಐರೋಲಿ ಪ್ರದೇಶದಲ್ಲಿ ಜುಲೈ 30ರಂದು ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹುಡುಗಿ ಹೇಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್ಗೆ ಸೇರುವ ವಿಚಾರದಲ್ಲಿ, ಈ ಬಾಲಕಿ ಮತ್ತು ತಾಯಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ತಾಯಿ, ತನ್ನ ಮಗಳು ವೈದ್ಯಕೀಯ ಪದವಿ ಓದಬೇಕೆಂದು ಬಯಸಿದ್ದರು. ಮಗಳಿಗೆ ಇದು ಇಷ್ಟವಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ರಬಾಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ತಾಯಿ–ಮಗಳ ಘರ್ಷಣೆ ಒಮ್ಮೆ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ. ಕಳೆದ ತಿಂಗಳು ಈ ಬಾಲಕಿ, ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಳು. ಪೊಲೀಸರು ಬಾಲಕಿಯ ಕುಟುಂಬದ ಸದಸ್ಯರನ್ನು ಠಾಣೆಗೆ ಕರೆಸಿ, ಮಾತುಕತೆ ನಡೆಸಿ ಕಳಿಸಿಕೊಟ್ಟಿದರು. ನಂತರ ಜುಲೈ 30ರಂದು ಇದೇ ಬಾಲಕಿ, ‘ತನ್ನ ತಾಯಿ ಮೇಲಿಂದ ಬಿದ್ದು ಸತ್ತು ಹೋಗಿದ್ದಾರೆ‘ ಎಂದು ಪೊಲೀಸರಿಗೆ ತಿಳಿಸಿದ್ದಳು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆ ಕಳಿಸಿದರು. ಪರೀಕ್ಷೆ ವರದಿ ಪರಿಶೀಲಿಸಿದಾಗ, ಕುತ್ತಿಗೆ ಹಿಸುಕಿದ್ದರಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿತು. ನಂತರ ಪೊಲೀಸರು ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ, ‘ತಾಯಿ, ತನ್ನೊಂದಿಗೆ ಜಗಳವಾಡಿದಾಗ, ಕರಾಟೆ ಬೆಲ್ಟ್ನಿಂದ ಆಕೆಯ ಕತ್ತು ಹಿಸುಕಿದೆ‘ ಎಂದು ಒಪ್ಪಿಕೊಂಡಿದ್ದಾಳೆ. ಬಾಲಕಿಯನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 302ರ ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ.
A 15-year-old girl allegedly strangulated her mother to death with a karate belt after a fight over her studies in Navi Mumbai, police said on Tuesday. The girl later tried to pass it off as a case of accidental death, they said.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
11-05-26 06:20 pm
HK News Staffer
ವಾಯುವ್ಯ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ದಾಳಿ;...
11-05-26 02:14 pm
ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ; ಬಿಜೆಪಿ ಅಧಿಕ...
10-05-26 09:38 pm
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
11-05-26 04:58 pm
HK News Staffer
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm
ಬೆಳ್ತಂಗಡಿ ; ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ದಂಧೆ...
11-05-26 01:06 pm
ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು...
09-05-26 10:29 pm
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm