ಬ್ರೇಕಿಂಗ್ ನ್ಯೂಸ್
08-08-21 05:44 pm Headline Karnataka News Network ಕ್ರೈಂ
ಬೆಂಗಳೂರು, ಆಗಸ್ಟ್ 18:ಮಾನವ ಹಕ್ಕು, ಜನಜಾಗೃತಿ, ರಕ್ಷಣಾ ವೇದಿಕೆ ಹೀಗೆ ನಾನಾ ಹೆಸರೇಳಿಕೊಂಡು ಸಂಘಟನೆ ಕಟ್ಟಿಕೊಂಡವರನ್ನು ಕೇಳಿದ್ದೇವೆ. ಹೀಗೆ ಸಂಘಟನೆ ಕಟ್ಟಿಕೊಂಡೇ ಜನಸಾಮಾನ್ಯರನ್ನು ವಂಚಿಸುವ ಖದೀಮರನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಾನವ ಹಕ್ಕು ಜನಜಾಗೃತಿ ವೇದಿಕೆ ಅಧ್ಯಕ್ಷನೆಂದು ಹೇಳಿಕೊಂಡು ಅನಾಚಾರಗಳನ್ನೇ ಮಾಡಿಕೊಂಡು ಬಂದಿದ್ದಾನೆ.
ಆತನ ಹೆಸರು ಜ್ಞಾನಪ್ರಕಾಶ್. ಜ್ಞಾನಭಾರತಿ ಠಾಣೆ ವ್ಯಾಪ್ತಿಯ ನಿವಾಸಿ. ಹೆಸರಿನಲ್ಲೇನೋ ಜ್ಞಾನ ಇದೆ. ಆದರೆ, ತನ್ನ ಜ್ಞಾನವನ್ನೆಲ್ಲಾ ಇನ್ಯಾರನ್ನೋ ಯಾಮಾರಿಸಲು ಮತ್ತು ಏನೇನೋ ಹೆಸರೇಳಿ ವಂಚಿಸಿ ಹಣ ಪೀಕಿಸುವುದಕ್ಕೆ ಬಳಸ್ಕೊಂಡಿದ್ದೇ ಹೆಚ್ಚು. ಈತನ ವಿರುದ್ಧ ಇತ್ತೀಚೆಗೆ ಕೆಂಗೇರಿ ಠಾಣೆಯಲ್ಲಿ ಮಗು ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಒಂದು ಮಗುವಿನ ಫೋಟೋ ತೋರಿಸಿ, ಮಕ್ಕಳಿಲ್ಲದ ಎರಡು ಕುಟುಂಬಗಳನ್ನು ಸಂಪರ್ಕಿಸಿ, ಲಕ್ಷಾಂತರ ರೂಪಾಯಿ ಪೀಕಿಸಿದ ಪ್ರಕರಣ.
ಒಂದೇ ಮಗುವನ್ನು ತೋರಿಸಿ ಮಂಜುಳಾ ಎಂಬ ಮಹಿಳೆಯಿಂದ ಎರಡೂವರೆ ಲಕ್ಷ ಮತ್ತು ರಾಜಮ್ಮ ಎನ್ನುವ ಮಹಿಳೆಯಿಂದ ಒಂದೂವರೆ ಲಕ್ಷ ರೂಪಾಯಿ ಪೀಕಿಸಿಕೊಂಡಿದ್ದ. ಹಣ ಕಳೆದುಕೊಂಡು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಇಬ್ಬರು ಮಹಿಳೆಯರು ಕೂಡ ಕೆಂಗೇರಿ ಠಾಣೆಯಲ್ಲಿ ಜುಲೈ 12ರಂದು ದೂರು ದಾಖಲಿಸಿದ್ದರು. ಪೊಲೀಸರಿಗೆ ಜ್ಞಾನಪ್ರಕಾಶನ ಕತರ್ನಾಕ್ ಕೃತ್ಯಗಳ ಬಗ್ಗೆ ಮೊದಲೇ ಗೊತ್ತಿದ್ದುದರಿಂದ ಠಾಣೆಗೆ ಬರಹೇಳಿ ಅರೆಸ್ಟ್ ಮಾಡಿದ್ದಾರೆ.
ಇಷ್ಟಕ್ಕೂ ಈತನ ಹೇತ್ಲಂಡಿ ಕೃತ್ಯಗಳಿಗೆ ಸಾಥ್ ನೀಡಿದ್ದು ಮತ್ತಿಬ್ಬರು ಮಹಿಳೆಯರು. ಮಾನವ ಹಕ್ಕು ಜನಜಾಗೃತಿ ವೇದಿಕೆ ಎಂಬ ನಕಲಿ ಸಂಘಟನೆಯ ಅಧ್ಯಕ್ಷನ ಹೆಸರಲ್ಲಿ ಪೋಸು ಕೊಡುತ್ತಿದ್ದ ಜ್ಞಾನಪ್ರಕಾಶ್, ಸಂಘಟನೆಯ ಹಿಂದುಳಿದ ವರ್ಗದ ಮಹಿಳಾ ಅಧ್ಯಕ್ಷೆಯಾಗಿ ರೂಪ ಎಂಬ ಮಹಿಳೆಯನ್ನು ಇಟ್ಟುಕೊಂಡಿದ್ದಾನೆ. ಇನ್ನೊಂದು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜಯ ಮೇರಿ ಎಂಬ ಮಹಿಳೆಯನ್ನು ಇಟ್ಟುಕೊಂಡಿದ್ದ. ಈ ಮೂವರು ಸೇರಿ ಮಗು ಮಾರಾಟದ ಜಾಲ ಹೆಣೆದಿದ್ದಾರೆ ಎನ್ನಲಾಗುತ್ತಿದ್ದು, ಮೂವರ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದರು. ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಮತ್ತು ಈತನ ಹರಾಮಿ ಕೆಲಸಗಳನ್ನು ತಿಳಿದವರು ಹೇಳುವ ಪ್ರಕಾರ, ಜ್ಞಾನಪ್ರಕಾಶ್ ಮಾಡಿಕೊಂಡು ಬಂದಿದ್ದೇ ಈ ರೀತಿಯ ಹೇಸಿಗೆ ಕೆಲಸಗಳನ್ನು. ಈ ಹಿಂದೆ ಬಸ್ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಈತ, ಆನಂತರ ರಾಜಕಾರಣಿಗಳ ನಂಟು ಗಳಿಸಿಕೊಂಡು ಅವರ ವಾಹನಗಳಿಗೆ ಚಾಲಕನಾಗಿ ಸೇರಿಕೊಂಡಿದ್ದ. ರಾಜಕೀಯದ ನಂಟು ಸಿಗುತ್ತಲೇ ಹೈಲೆವೆಲ್ ಟಚ್ ಸಿಕ್ಕಿದ್ದು, ಆನಂತರ ಸಂಘಟನೆ ಕಟ್ಟಿಕೊಂಡು ಅದರ ಹೆಸರಲ್ಲಿ ಪೋಸು ಕೊಡಲು ಆರಂಭಿಸಿದ್ದ. ಈಚೆಗೆ ಐದಾರು ವರ್ಷಗಳಲ್ಲಿ ಮಾನವ ಹಕ್ಕು ಜನಜಾಗೃತಿ ವೇದಿಕೆಯ ಹೆಸರೇಳಿಕೊಂಡು ಪೋಸು ಕೊಡುತ್ತಾ ಗಣ್ಯರ ಜೊತೆಗೆ ಕಾಣಿಸಿಕೊಳ್ಳಲು ಆರಂಭಿಸಿದ್ದ.
ಯಾವಾಗ ಈ ವ್ಯಕ್ತಿಗೆ ಗಣ್ಯ ಎನ್ನುವ ಪಟ್ಟ ಸಿಕ್ಕಿತ್ತೋ ಆವತ್ತಿನಿಂದಲೇ ಆತನ ಖದರ್ ಬದಲಾಗಿತ್ತು. ಸೂಟು ಬೂಟಿನ ಜೊತೆಗೆ ಒಂದಷ್ಟು ಮಂದಿಯನ್ನು ಜೊತೆಗೆ ಸೇರಿಸಿಕೊಂಡು ಇನ್ನೋವಾ ಕಾರಿನಲ್ಲಿ ತಿರುಗಾಡಲು ತೊಡಗಿದ್ದ. ಹಳ್ಳಿ ಕಡೆಗಳಲ್ಲಿ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಂಡು ಹಾರ ಹಾಕಿಸ್ಕೊಂಡು ಆ ಫೋಟೋಗಳನ್ನು ತೋರಿಸುತ್ತಾ ಇನ್ನಷ್ಟು ಮಂದಿಗೆ ಮೂರು ನಾಮ ಹಾಕಿಸುತ್ತಿದ್ದ. ಓಡಾಡೋಕೆ ಇದ್ದ ಇನೋವಾ ಕಾರು, ಜೊತೆಗಿದ್ದ ಚೇಲಾಗಳು ಸೇರಿಕೊಂಡು ಬೆಂಗಳೂರಿನ ನಾನಾ ಕಡೆಗಳಿಗೆ ತೆರಳಿ, ನಿಮ್ಮ ಏನೇ ಸಮಸ್ಯೆಗಳಿದ್ದರೂ ನಾವು ಪರಿಹರಿಸ್ತೀವಿ ಎನ್ನುತ್ತಾ ತಮ್ಮ ಸಂಘಟನೆಯ ಮೆಂಬರ್ ಆಗುವಂತೆ ಕೇಳಿಕೊಳ್ಳುತ್ತಿದ್ದ. ಬಣ್ಣನೆಯ ಮಾತುಗಳನ್ನು ನಂಬಿದ ಅದೆಷ್ಟೋ ಮಂದಿ ಎರಡು ಸಾವಿರ ರೂ. ಕೊಟ್ಟು ಮೆಂಬರ್ ಆಗಿದ್ದಾರೆ. ಹೋದಲ್ಲೆಲ್ಲ ಕಚೇರಿ ಅಂತ ಮಾಡ್ಕೊಂಡು ಒಂದಷ್ಟು ಸಮಯ ಇದ್ದು ಅಲ್ಲಿ ಏನಿಲ್ಲ ಅಂದ್ರೂ ನೂರಾರು ಮಂದಿಯಿಂದ ಸದಸ್ಯತ್ವದ ಹೆಸರಲ್ಲಿ ತಲಾ ಎರಡು ಸಾವಿರ ರೂ. ಪೀಕಿಸಿಕೊಂಡು ಕಾಲ್ಕೀಳುತ್ತಿದ್ದ. ಹೀಗೆ ವಂಚನೆ ಆದವರು ಸಾವಿರಕ್ಕೂ ಮೇಲಿದ್ದಾರಂತೆ. ಆದ್ರೆ, ಸಣ್ಣ ಮೊತ್ತವಾಗಿದ್ದರಿಂದ ಹೋಗ್ಲಿ ಬಿಡಿ ಎಂದು ಜನರು ಅಸಡ್ಡೆ ವಹಿಸಿದ್ದೇ ಈತ ಹೋದಲ್ಲಿ ಬಂದಲ್ಲಿ ತನ್ನ ಕರಾಮತ್ತು ತೋರಿಸುತ್ತಾ ಬಂದಿದ್ದಾನೆ.
ಮಾನವ ಹಕ್ಕು ಸಂಘಟನೆಯಾಗಿದ್ದರಿಂದ ನೀವು ಏನೇ ಸಮಸ್ಯೆ ಹಿಡ್ಕೊಂಡು ಬಂದ್ರೂ ನಾವು ಬಗೆಹರಿಸ್ತೀವಿ. ನೀವು ಬರೇ ಎರಡು ಸಾವಿರ ರೂ. ಕೊಟ್ಟರೆ ಸಾಕು. ಅಷ್ಟೇ ಅಲ್ಲಾ ನಿಮ್ಗೆ ಸರಕಾರಿ ಸವಲತ್ತು, ಸಾಲ ಏನಾದ್ರೂ ಬೇಕಿದ್ದರೂ ಅದನ್ನೂ ಮಾಡಿಕೊಡುತ್ತೀವಿ ಅಂತಾ ಪುಂಗಿ ಊದುತ್ತಾ ಜನರನ್ನು ಮಂಕು ಮರುಳು ಮಾಡುತ್ತಿದ್ದ. ಈತನ ಆಟಾಟೋಪ ಎಷ್ಟಿತ್ತು ಅಂದ್ರೆ, ಯಾರು ಗಂಡ ಸತ್ತ ಮಧ್ಯವಯಸ್ಕ ಮಹಿಳೆಯರು ಇರುತ್ತಾರೋ ಅವರನ್ನು ಸುಲಭದಲ್ಲಿ ಕ್ಯಾಚ್ ಮಾಡುತ್ತಿದ್ದ. ಅಂಗ- ಸಂಗದ ಜೊತೆಗೆ ವೇದಿಕೆಯ ಹೆಸರಲ್ಲಿ ಸ್ಥಳೀಯ ಘಟಕ ಅಂತಾ ಮಾಡ್ಕೊಂಡು ಒಂದು ಪೋಸ್ಟನ್ನೂ ಕೊಡುತ್ತಿದ್ದ. ಪ್ರಚಾರಕ್ಕೆ ಮೈಮೇಲೆ ಬೀಳುವ ಮಹಿಳೆಯರಿಗೆ ಅಷ್ಟು ಸಾಕಿತ್ತು ಬಿಡಿ.
ಮಕ್ಕಳಿಲ್ಲದರಿಗೆ ಮಕ್ಕಳ ಭಾಗ್ಯ!
ಇವೆಲ್ಲದಕ್ಕೂ ವಿಚಿತ್ರ ಏನಪ್ಪಾ ಅಂದ್ರೆ, ಮಕ್ಕಳು ಇಲ್ಲದ ಗೃಹಿಣಿಯರದ್ದು. ಮಕ್ಕಳು ಇಲ್ಲಾಂತ ಬೆಂಗ್ಲೂರು ಕಡೆ ಪೂಜೆ, ಪುನಸ್ಕಾರ ಮಾಡೋದು, ಮಂತ್ರದ ಮೂಲಕ ಮಕ್ಕಳು ಮಾಡಿಸೋ ಮಂತ್ರವಾದಿಗಳ ಕಡೆ ಹೋಗೋದು ಜಾಸ್ತಿ. ಅಂಥವರನ್ನೂ ಟಾರ್ಗೆಟ್ ಮಾಡ್ಕೊಂಡಿದ್ದ ಜ್ಞಾನಪ್ರಕಾಶ್, ಮಕ್ಕಳು ಮಾಡಿಸಿಕೊಡುತ್ತೇನೆಂದು ಹೇಳಿ ಅವರನ್ನು ತನ್ನ ಕಚೇರಿಗೇ ಬರಹೇಳುತ್ತಿದ್ದ ಎಂದು ಆತನ ಜೊತೆಗಿದ್ದು ಆನಂತರ ಅಲ್ಲಿಂದ ಬಗ್ಗೆ ಗೊತ್ತಿದ್ದವರು ಹೇಳುತ್ತಾರೆ. ಕೆಂಗೇರಿಯ ಸ್ಲಂ ಏರಿಯಾಗಳಲ್ಲಿ ಈತನ ಕಾರುಬಾರು ಭಾರೀ ಜೋರಾಗೇ ಇತ್ತು.
ಈತ ಪೊಲೀಸರ ಏಟು ತಿಂದಿದ್ದು, ಜೈಲೂಟ ಮಾಡಿಕೊಂಡು ಬಂದಿದ್ದು ಒಂದೆರಡು ಬಾರಿಯಲ್ಲ. ಹಲವು ಠಾಣೆಗಳಲ್ಲಿ ಅವೆಷ್ಟೋ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದು, ವಂಚನೆ, ದರೋಡೆ ಪ್ರಕರಣಗಳಲ್ಲಿ ಜೈಲು ಸೇರಿ ಹೊರಬಂದಿದ್ದಾನೆ. ಸರಿಯಾಗಿ ಒಂದು ವರ್ಷದ ಹಿಂದೆ, ಕಳೆದ ಆಗಸ್ಟ್ ತಿಂಗಳಲ್ಲಿ ಈತ ತಾನೊಬ್ಬ ಪತ್ರಕರ್ತನೆಂದು ಪೋಸು ಕೊಟ್ಟು ತುಮಕೂರು ಮೂಲದ ಅಡಿಕೆ ವ್ಯಾಪಾರಿಯನ್ನು ದರೋಡೆ ಮಾಡಲು ಹೋಗಿದ್ದ. ಅದಕ್ಕೆ ಆತನ ಸಂಬಂಧಿಕನೇ ಆಗಿದ್ದ ಎಸ್.ಜೆ. ಪಾರ್ಕ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜೀವನ್ ಕುಮಾರ್ ಸಾಥ್ ಕೊಟ್ಟಿದ್ದ. ಅಡಿಕೆ ವ್ಯಾಪಾರಿಗೆ ಸೇರಿದ್ದ 26 ಲಕ್ಷ ರೂಪಾಯಿ ಹಣವನ್ನು ನಾಲ್ವರು ಸೇರಿ ದರೋಡೆ ನಡೆಸಿ, ಆನಂತ್ರ ಕೇಸು ದಾಖಲಾಗಿ ಎಲ್ಲರೂ ಸಿಕ್ಕಿಬಿದ್ದಿದ್ದರು. ತೆರಿಗೆ ತಪ್ಪಿಸಲು ಯತ್ನಿಸಿದ್ದ ಅಡಿಕೆ ವ್ಯಾಪಾರಿಯನ್ನು ಯಾಮಾರಿಸಲು ಹೋಗಿ ತಾನೇ ಖೆಡ್ಡಾಕ್ಕೆ ಬಿದ್ದಿದ್ದ.
ಸಿರಿವಂತರನ್ನು ಬೋಳಿಸುತ್ತಿದ್ದ ಪಾಖಂಡಿ
ಈತನ ಹೇತ್ಲಂಡಿ ಕೆಲಸಗಳು ಇಷ್ಟಕ್ಕೇ ಮುಗಿಯಲ್ಲ. ರಿಯಲ್ ಎಸ್ಟೇಟ್ ಕುಳಗಳನ್ನೂ ತನ್ನ ಖೆಡ್ಡಾಕ್ಕೆ ಬೀಳಿಸಿದ್ದೂ ಇದೆಯಂತೆ. ಕೈಲಿ ಕಾಸು, ಒಂದಷ್ಟು ಸಿರಿವಂತಿಕೆ ಇರುತ್ತಿದ್ದವರನ್ನು ಟಾರ್ಗೆಟ್ ಮಾಡ್ಕೊಂಡು ಅವರ ಹಿಂದೆ ಬೀಳ್ತಿದ್ದ ಜ್ಞಾನ ಪ್ರಕಾಶ್, ತನ್ನ ಮಾತುಗಳಿಂದಲೇ ಮರುಳು ಮಾಡುತ್ತಿದ್ದ. ತನ್ನ ಬಲೆಗೆ ಬೀಳ್ತಾನೆ ಅಂತ ತಿಳಿಯುತ್ತಲೇ ಆತನಿಗೆ ಸಂಘಟನೆಯ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿ ದೊಡ್ಡ ಸಮಾರಂಭ ಏರ್ಪಡಿಸಿ, ಸನ್ಮಾನ, ಪದಗ್ರಹಣ ಅಂತಾ ಮಾಡುತ್ತಿದ್ದ. ಆನಂತರ ಆತನಿಂದಲೇ ಖರ್ಚು ಭರಿಸಿಕೊಂಡು ತನ್ನ ಹರಾಮಿ ಕೆಲಸಕ್ಕೂ ಹಣ ಪೀಕಿಸುತ್ತಿದ್ದ. ಜ್ಞಾನಪ್ರಕಾಶನ ಹಣದಾಹ ತಿಳಿಯುತ್ತಲೇ ರಿಯಲ್ ಎಸ್ಟೇಟ್ ಕುಳ ಅಲ್ಲಿಂದ ಹೊರಹಾಕುತ್ತಿದ್ದ. ಆದರೆ, ಜ್ಞಾನಪ್ರಕಾಶ್ ಅಲ್ಲಿಗೇ ಬಿಡುತ್ತಿರಲಿಲ್ಲ. ತನ್ನ ಜೊತೆಗಿರುತ್ತಿದ್ದ ಮಹಿಳೆಯರನ್ನು ಮುಂದಿಟ್ಟು ಬಕೆಟ್ ಹಾಕಿಸಿ, ಕೊನೆಗೆ ಕಿವಿಗೆ ಹೂ ಇಡುವ ಕೆಲಸ ಮಾಡುತ್ತಿದ್ದ.
ಮೈಸೂರಿನ ಜ್ಯೋತಿಷಿ ಒಬ್ಬರಲ್ಲಿ ನಿಮ್ಮನ್ನು ಸಂಘಟನೆಯ ರಾಜ್ಯಾಧ್ಯಕ್ಷ ಮಾಡುವುದಾಗಿ ಹೇಳಿ 22 ಲಕ್ಷ ರೂ. ಪೀಕಿಸಿದ್ದಾನಂತೆ. ಆನಂತರ ಮಹಿಳೆಯರನ್ನು ಮುಂದಿಟ್ಟು ಜ್ಯೋತಿಷಿಯ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದ್ದ. ಈ ಬಗ್ಗೆ ಕೇಸು ಆಗಿ, ಆನಂತ್ರ ಪ್ರಕರಣ ಮುಚ್ಚಿ ಹೋಗಿತ್ತು. ಯಾಕಂದ್ರೆ, ಈತನಿಗೆ ಪೊಲೀಸರ ಸಂಪರ್ಕವೂ ಸಾಕಷ್ಟಿದೆ. ಕಳೆದ ಬಾರಿ ದರೋಡೆ ಕೇಸಿನಲ್ಲಿ ಸಿಕ್ಕಿಬಿದ್ದಾಗ, ಯಾರಿಗೆಲ್ಲಾ ಮಾಮೂಲಿ ಕೊಡುತ್ತಿದ್ದುದಾಗಿ ಪೊಲೀಸರಲ್ಲಿ ಹೇಳಿಕೊಂಡಿದ್ದ.
ಹೆಬ್ಬೆಟ್ಟುಗಳಿಗೆ ನಕಲಿ ಡಾಕ್ಟರೇಟ್ ಕೊಡಿಸ್ತಿದ್ದ
ತನ್ನ ಹೆಸರಿನ ಜೊತೆಗೇ ಡಾಕ್ಟರೇಟ್ ಹಾಕಿಸಿಕೊಂಡಿದ್ದ ಈತ ಹಣ ಕೊಟ್ಟವರಿಗೆ ನಕಲಿ ಡಾಕ್ಟರೇಟ್ ಸರ್ಟಿಫಿಕೇಟುಗಳನ್ನೂ ಮಾಡಿಸಿಕೊಡುತ್ತಿದ್ದನಂತೆ. ಸ್ಲಂ ಏರಿಯಾಗಳಲ್ಲಿ ಕಾರ್ಮಿಕರ ಹೆಸರಲ್ಲಿ ಸಂಘಟನೆ, ಅಲ್ಲಿಗೊಂದು ಸ್ಥಳೀಯ ಪುಢಾರಿಯನ್ನು ಅಧ್ಯಕ್ಷನನ್ನಾಗಿ ಮಾಡಿಸುತ್ತಿದ್ದ. ಆತನಲ್ಲಿ ಒಂದಷ್ಟು ಕಾಸು ಇದ್ದರೆ ಡಾಕ್ಟರೇಟ್ ಬೇಕಿದ್ರೆ ಕೊಡಿಸ್ತೀನಿ ಎಂದು ಹೇಳಿ ಯಾವುದೋ ನಕಲಿ ವಿವಿಯ ಹೆಸರಲ್ಲಿ ಡಾಕ್ಟರೇಟ್ ಕೊಡಿಸುವ ನಾಟಕವಾಡುತ್ತಿದ್ದ. ಅದಕ್ಕೊಂದು ಸರ್ಟಿಫೀಕೇಟನ್ನೂ ಕೊಡಿಸಿ, ಹೆಬ್ಬೆಟ್ಟುಗಳನ್ನು ಯಾಮಾರಿಸುತ್ತಿದ್ದ. ಇಷ್ಟೆಲ್ಲವನ್ನೂ ಆತನ ಜೊತೆಗಿದ್ದವರೇ ಈಗ ಅಲ್ಲಲ್ಲಿ ಹೇಳಿಕೊಂಡು ಬರುತ್ತಿದ್ದಾರೆ.
ಆದರೆ, ಈ ರೀತಿಯ ಹರಾಮಿ ಕೆಲಸಗಳ ಬಗ್ಗೆ ಹೆಚ್ಚಿನ ಮಂದಿ ಪೊಲೀಸ್ ದೂರನ್ನೇ ಕೊಟ್ಟಿಲ್ಲ. ಸಮಾಜಕ್ಕೆ ಹೆದರಿಯೋ, ಹಣ ಹೋದರೆ ಹೋಗಲಿ ಅನ್ನುವ ಅಸಡ್ಡೆಯಿಂದಲೋ ದೂರು ಕೊಡದೇ ಇರುವುದು ಇಂಥ ಪಾಖಂಡಿಗಳು ತಮ್ಮ ಕಾರುಬಾರು ತೋರಿಸಲು ರಹದಾರಿಯಾಗುತ್ತದೆ. ಇಂಥಾ ನಯ ವಂಚಕರು ಬೆಂಗಳೂರಿನಲ್ಲಿ ಅದೆಷ್ಟು ಮಂದಿ ಇದ್ದಾರೋ ಗೊತ್ತಿಲ್ಲ. ಸಂಘಟನೆ ಹೆಸರೇಳಿಕೊಂಡು ಬಡವರಿಂದ ಹಣ ಪೀಕಿಸುತ್ತಾ ವಂಚಿಸುವ ಖದೀಮರು ಮಾತ್ರ ರಾಜ್ಯದ ಉದ್ದಗಲದಲ್ಲಿ ಇದ್ದಾರೆ. ಜನ ಸಾಮಾನ್ಯರು ಯಾಮಾರುವ ಮುನ್ನ ಇಂಥ ಹೇತ್ಲಂಡಿ ಮನುಷ್ಯರ ಬಗ್ಗೆ ಒಂದು ಕಣ್ಣಿಟ್ಟೇ ಇರಬೇಕು.
Read: ಬೆಂಗಳೂರು: ಮಾನವ ಹಕ್ಕು ಸಂಘಟನೆ ಹೆಸರಲ್ಲಿ ದೋಖಾ ; ಎಸ್ಐ ಜೊತೆ ಸೇರಿ ದರೋಡೆ, ಸಿಕ್ಕಿಬಿದ್ದ ಖದೀಮರು !!
Video:
Bangalore Human rights association Jnana Prakash arrested for Child trafficking by Kengeri Police Station. He also is alleged of cheating and blackmailing innocent people in the name of Human rights. Recently. The city market police had arrested Jnana Prakash including a police sub-inspector (PSI) Jeevan Kumar, for allegedly robbing Rs 26.5 lakh from the employee of a private firm last week. The Bengaluru police had arrested them on charges of Daicoty.
01-04-25 12:26 pm
Bangalore Correspondent
ಕಳೆದ 11 ವರ್ಷಗಳಿಂದ ನೀವೇ ಅಧಿಕಾರದಲ್ಲಿ ಮೊಳೆ ಹೊಡೆ...
31-03-25 07:41 pm
Yatnal, Lakshmi Hebbalkar, Controversy: ಯತ್ನಾ...
31-03-25 12:24 pm
Areca Nut, Machine Accident, Sirsi: ಅಡಿಕೆ ಸುಲ...
29-03-25 09:19 pm
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
31-03-25 09:34 pm
HK News Desk
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
31-03-25 12:26 pm
Mangalore Correspondent
CCB Police, CM Medal, Mangalore: ಮಂಗಳೂರು ಪೊಲೀ...
30-03-25 11:02 pm
Mangalore, Ullal Netravati Bridge Repair, Tra...
30-03-25 03:07 pm
Kumapla, Mangalore, Crime: ಲಕೋಟೆಯಲ್ಲಿ ಸಂಸ್ಕರಿ...
30-03-25 02:39 pm
Mangalore CM Medal, Anupam Agrawal, Police Ma...
29-03-25 11:04 pm
31-03-25 09:29 pm
Mangalore Correspondent
Mangalore Derlakatte Robbery attempt; ದೇರಳಕಟ್...
30-03-25 08:59 am
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm