ಬ್ರೇಕಿಂಗ್ ನ್ಯೂಸ್
02-08-21 10:06 pm Mysore Correspondent ಕ್ರೈಂ
ಮೈಸೂರು, ಆಗಸ್ಟ್ 2: ಇಂಟರ್ ನ್ಯಾಷನಲ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುವ ಜಾಲವನ್ನು ಮೈಸೂರಿನಲ್ಲಿ ಪತ್ತೆ ಮಾಡಲಾಗಿದೆ. ಇಂಟರ್ನೆಟ್ ಬಳಸಿ ಇಂಟರ್ ನ್ಯಾಷನಲ್ ಕರೆಗಳನ್ನು ಲೋಕಲ್ ಕರೆಗಳಾಗಿ ಪರಿವರ್ತಿಸಿ ಗ್ರಾಹಕರಿಗೆ ನೀಡುವ ಮೂಲಕ ಭಾರೀ ಟೆಲಿಕಾಂ ಕಂಪನಿಗೆ ಭಾರೀ ದೋಖಾ ಎಸಗಲಾಗಿತ್ತು. ಪ್ರಕರಣ ಸಂಬಂಧಿಸಿ ಇಬ್ಬರು ಆಸಾಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಅಶ್ರಫ್ ಹಾಗೂ ಶೆಮೀಮ್ ಬಂಧಿತರು.
ಬಂಧಿತರಿಂದ 500ಕ್ಕೂ ಅಧಿಕ ಸಿಮ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಸಿಮ್ ಬಾಕ್ಸ್ ಹಾಗೂ ರೂಟರ್ ಬಳಸಿಕೊಂಡು ಕರೆಗಳನ್ನು ಪರಿವರ್ತಿಸುತ್ತಿದ್ದರು ಎಂದು ಪತ್ತೆ ಮಾಡಲಾಗಿದೆ.

ದಂಧೆಯಿಂದ ಸರ್ಕಾರಕ್ಕೆ ಹಾಗೂ ಟೆಲಿಕಾಂ ಕಂಪನಿಗಳಿಗೆ ಕೋಟ್ಯಾಂತರ ರೂ. ನಷ್ಟ ಆಗಿದೆ. ಕರೆ ಮಾಡಿದವರು ಹಾಗೂ ಸ್ವೀಕರಿಸಿದವರಿಗೂ ತಿಳಿಯದಂತೆ ದಂಧೆ ನಡೆಸುತ್ತಿದ್ದರು ಎನ್ನುವ ಅಂಶ ತನಿಖೆಯಲ್ಲಿ ಬಯಲಾಗಿದೆ. ಅಕ್ರಮ ಜಾಲದಲ್ಲಿ ತೊಡಗಿಕೊಂಡಿದ್ದ ಖದೀಮರನ್ನು ಮೈಸೂರು ಪೊಲೀಸರು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಜಾಲದಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದೊಂದು ಕ್ರಿಮಿನಲ್ ಅಪರಾಧವಾಗಿದ್ದು ಕೇವಲ ಕರೆ ಮಾತ್ರವಲ್ಲ, ಇದೇ ಜಾಲದಡಿ ಇತರೆ ದುಷ್ಕೃತ್ಯಗಳಿಗೂ ಬಳಸಿರುವ ಸಾಧ್ಯತೆ ಇದೆ. ಈ ರೀತಿಯ ದಂಧೆಯಿಂದ ಟೆಲಿಕಾಂ ಕಂಪನಿಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಆರೋಪಿಗಳಿಗೆ ದೊಡ್ಡ ಮೊತ್ತದಲ್ಲಿ ಸಿಮ್ಗಳು ಸಿಕ್ಕ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಹೇಳಿದ್ದಾರೆ.
Two people have been arrested by Mysore police for converting international calls into local calls. Ashraf and Shemim from Kerala are the accused and more than 500 SIMs have been seized by the detainees. Detainees were converting international calls into local calls through calls via a SIM box, router. The government and telecom companies have suffered billions in damages from the accused. In addition, these accused have been treated as headaches for various countries by their actions. The police said. The accused will be further investigated, Mysore Police Commissioner Dr Chandragupta said at a news conference.
20-03-26 12:02 pm
HK News Staffer
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
19-03-26 11:30 pm
HK News Desk
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
19-03-26 10:38 pm
Mangaluru Staffer
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm