ಬ್ರೇಕಿಂಗ್ ನ್ಯೂಸ್
30-07-21 12:18 pm Mangaluru Correspondent ಕ್ರೈಂ
ಮಂಗಳೂರು, ಜುಲೈ 30: ಮನೆಯ ಕಪಾಟಿನಲ್ಲಿರಿಸಿದ್ದ ತಂಗಿಯ ಒಡವೆಗಳನ್ನು ದೋಚಿಕೊಂಡು ಅಕ್ಕನೇ ತನ್ನ ಪ್ರಿಯತಮನ ಜೊತೆ ಪರಾರಿಯಾಗಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದ್ದು ಈ ಬಗ್ಗೆ ಮಗಳನ್ನು ಹುಡುಕಿಕೊಡುವಂತೆ ತಂದೆಯೇ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುರತ್ಕಲ್ ಠಾಣೆ ವ್ಯಾಪ್ತಿಯ ನಿವಾಸಿ ಇಬ್ರಾಹಿಂ ಅವರ ಹಿರಿಯ ಮಗಳು ರಿಜ್ವಾನಾ(25) ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಗಂಡ ದುಬೈನಲ್ಲಿರುವ ಕಾರಣ ತಂದೆಯ ಮನೆಯಲ್ಲಿಯೇ ಉಳಿದಿದ್ದಳು. ಆಕೆಯ ತಂಗಿ ರಾಝ್ವಿನಾಳಿಗೆ ಕಳೆದ ಮಾರ್ಚ್ ತಿಂಗಳಲ್ಲಿ ಮದುವೆಯಾಗಿದ್ದು, ಆಕೆಯ ಒಡವೆಗಳನ್ನು ತಂದೆಯ ಮನೆಯಲ್ಲಿಯೇ ಇರಿಸಿದ್ದಳು. ಒಡವೆಗಳಿದ್ದ ಕಪಾಟಿನ ಕೀ ಹಿರಿಯ ಮಗಳಾದ ರಿಜ್ವಾನಾ ಬಳಿ ಇತ್ತು. ಇತ್ತೀಚೆಗೆ ತಂದೆ ಇಬ್ರಾಹಿಂ ತನಗೆ ಹಣದ ಅವಶ್ಯಕತೆ ಇದ್ದ ಕಾರಣ ಒಡವೆಗಳನ್ನು ಅಡವಿರಿಸಲೆಂದು ಜುಲೈ 26ರಂದು ಕಪಾಟಿನ ಕೀ ಕೇಳಿದ್ದರು. ತಂದೆ ಕೀ ಕೇಳಿದ್ದಕ್ಕೆ ರಿಜ್ವಾನಾ ಕೊಡಲು ನಿರಾಕರಿಸಿದ್ದಳು. ಆನಂತರ ಶಾಲೆಗೆಂದು ಮನೆಯಿಂದ ತೆರಳಿದ್ದಳು.

ಆದರೆ, ತಾನು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಚೊಕ್ಕಬೆಟ್ಟಿನ ಜಾಮಿಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋದವಳು ವಾಪಾಸ್ ಮನೆಗೆ ಬರಲಿಲ್ಲ. ಆಕೆಯ ಮೊಬೈಲ್ ಪೋನ್ ಕೂಡ ಸ್ವಿಚ್ ಆಫ್ ಆಗಿದ್ದು ನಾಪತ್ತೆಯಾಗಿದ್ದಳು. ಮರುದಿನ ತಂದೆ ಸಂಶಯ ಬಂದು ಕಪಾಟಿನ ಬಾಗಿಲು ಒಡೆದು ನೋಡಿದ್ದು ಒಡವೆಗಳು ಕಾಣೆಯಾಗಿದ್ದವು.
ರಿಜ್ವಾನಾಗೆ ಗಂಡ ವಿದೇಶದಲ್ಲಿದ್ದರೂ, ಕೃಷ್ಣಾಪುರದ ಬಶೀರ್ ಎಂಬಾತನೊಂದಿಗೆ ಪ್ರೀತಿಯ ನೆಪದಲ್ಲಿ ಸಲುಗೆಯಿತ್ತು ಎನ್ನಲಾಗಿದೆ. ಒಡವೆಗಳ ಜೊತೆ ಆತನೊಂದಿಗೆ ಪರಾರಿಯಾಗಿರುವ ಬಗ್ಗೆ ಸಂಶಯಪಡಿಸಿ ಆಕೆಯ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Mangalore Woman flees with her boyfriend by stealing jewellery of her younger sister. A case has been registered at the surathkal police station.
10-08-26 07:54 pm
HK News Staffer
ಕೋರ್ಟ್ ಆದೇಶ ಉಲ್ಲಂಘಿಸಿ ನಾಗೇಂದ್ರ ದೆಹಲಿಗೆ ; ಸಚಿವ...
10-08-26 02:38 pm
ಬೆಂಗಳೂರಿನ ಪ್ರತಿಷ್ಠಿತ SKY ಹೋಟೆಲ್ ಮೇಲೆ ದಾಳಿ ; 1...
10-08-26 01:11 pm
ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿ...
07-08-26 10:42 pm
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
10-08-26 11:00 pm
HK News Desk
ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ; ‘ಸಂಧ್ಯ...
08-08-26 12:17 pm
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
10-08-26 08:49 pm
HK News Staffer
Leopard Bajpe, Mangalore: ಬಜ್ಪೆಯಲ್ಲಿ ಮನೆ ಅಂಗಳ...
10-08-26 07:22 pm
ಬಾರ್ ಮುಂದೆ ತಲವಾರು ಝಳಪಿಸಿ ದಾಂಧಲೆ ; ಪುಡಿ ರೌಡಿ ಶ...
10-08-26 11:09 am
ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್...
09-08-26 04:47 pm
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm