ಬ್ರೇಕಿಂಗ್ ನ್ಯೂಸ್
29-07-21 10:13 pm Headline Karnataka News Network ಕ್ರೈಂ
ಕಾಸರಗೋಡು, ಜುಲೈ 29: ಡ್ರಗ್ ವ್ಯಸನಿಗಳ ತಂಡವೊಂದು ಯುವಕನನ್ನು ಅಪಹರಿಸಿ ಕರ್ನಾಟಕದ ಹಾಸನದತ್ತ ಪರಾರಿಯಾಗಿತ್ತು. ಬೆನ್ನತ್ತಿದ್ದ ಕಾಸರಗೋಡು ಪೊಲೀಸರು ಮಿಂಚಿನ ಕಾರ್ಯಾಚರಣೆಯಲ್ಲಿ ಅಪಹೃತ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಆರೋಪಿಗಳು ಪರಾರಿಯಾಗಿದ್ದಾರೆ.
ಮಲಪ್ಪುರಂ ಜಿಲ್ಲೆಯ ಮೂಲದ ಮೂವರು ವ್ಯಕ್ತಿಗಳು ಕಾಸರಗೋಡು ಜಿಲ್ಲೆಯ ಉದುಮದಲ್ಲಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಅನ್ವರ್, ನಝರ್ ಮತ್ತು ಇನ್ನೊಬ್ಬ ಒಂದೇ ಕೊಠಡಿಯಲ್ಲಿದ್ದರು. ಫರ್ಟಿಲೈಸರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಕಾಸರಗೋಡು ಜಿಲ್ಲೆಯಲ್ಲಿ ಸೆಲೂನ್ ಅಂಗಡಿಗಳಿಂದ ಕೂದಲು ಸಂಗ್ರಹಿಸುವುದಕ್ಕಾಗಿ ಆಗಮಿಸಿದ್ದರು. ಮಂಗಳವಾರ ರಾತ್ರಿ 8.45ರ ಸುಮಾರಿಗೆ ಲಾಡ್ಜ್ ಕೊಠಡಿಗೆ ಏಳು ಮಂದಿಯಿದ್ದ ತಂಡ ನುಗ್ಗಿದ್ದು, ಮೂವರ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ, ಹಣಕ್ಕಾಗಿ ಕೊಠಡಿಯನ್ನು ತಡಕಾಡಿದೆ. ಅವರಲ್ಲಿ ಯಾವುದೇ ಹಣ ಸಿಗದೇ ಇದ್ದುದರಿಂದ ಧಮ್ಕಿ ಹಾಕಿ ಮರಳಿದ್ದರು.
ಬುಧವಾರ ಮಧ್ಯಾಹ್ನ ಮತ್ತೆ ಅದೇ ತಂಡ ಕೊಠಡಿಗೆ ನುಗ್ಗಿದ್ದು, ಆ ಪೈಕಿ ಅನ್ವರ್ ಎಂಬಾತನನ್ನು ಕಾರಿನಲ್ಲಿ ಅಪಹರಿಸಿದ್ದರು. ಅನ್ವರ್ ಕೈಯಲ್ಲಿ ಏನೋ ಬ್ಯಾಗ್ ಹಿಡಿದುಕೊಂಡಿದ್ದನ್ನು ನೋಡಿ ಹಣ ಎಂದುಕೊಂಡಿದ್ದ ಆಗಂತುಕರು ಆತನನ್ನೇ ಅಪಹರಿಸಿದ್ದರು ಎನ್ನಲಾಗಿದೆ. ಬಳಿಕ ಬ್ಯಾಗ್ ತೆರೆದು ನೋಡಿದಾಗ, ಅದರಲ್ಲಿ ಹಣ ಇರದಿರುವುದನ್ನು ಕಂಡು ಅನ್ವರನ್ನು ಕಿಡ್ನಾಪ್ ಮಾಡಿದ್ದು ಆತನ ಕುಟುಂಬಸ್ಥರಿಗೆ ಕರೆ ಮಾಡಿ ಎರಡು ಲಕ್ಷ ರೂ. ನೀಡುವಂತೆ ಒತ್ತಡ ಹಾಕಿದ್ದಾರೆ.
ಈ ಬಗ್ಗೆ ಕುಟುಂಬಸ್ಥರು ಮತ್ತು ಅನ್ವರ್ ಜೊತೆಗಿದ್ದವರು ಪೊಲೀಸರಿಗೆ ತಿಳಿಸಿದ್ದರು. ಹ್ಯುಂಡೈ ಕಾರಿನಲ್ಲಿ ಅನ್ವರನ್ನು ಅಪಹರಿಸಿದ್ದ ಬಗ್ಗೆ ಮಾಹಿತಿ ನೀಡಿದ್ದರಿಂದ ಕೂಡಲೇ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಬುಧವಾರ ಸಂಜೆ ಕಾರು ಪುತ್ತೂರು ಮೂಲಕ ಹಾಸನದತ್ತ ತೆರಳುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಕಾಸರಗೋಡು ಪೊಲೀಸರು ಹಾಸನ ಮತ್ತು ಸಕಲೇಶಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕ್ರೆಟಾ ಕಾರಿನ ನಂಬರ್ ನೀಡಿ, ಬಂದಲ್ಲಿ ತಡೆಯುವಂತೆ ಸೂಚನೆ ನೀಡಿದ್ದರಿಂದ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಹಾಸನದಲ್ಲಿ ಪೊಲೀಸರು ರಸ್ತೆ ತಡೆದು ತಪಾಸಣೆ ನಡೆಸುತ್ತಿದ್ದಾಗ, ಕ್ರೆಟಾ ಕಾರು ಬಂದಿದ್ದು ಕೂಡಲೇ ಅದನ್ನು ಹಿಡಿಯಲು ಮುಂದಾಗಿದ್ದಾರೆ.
ಆದರೆ, ಕಾರು ಚಾಲಕ ಪೊಲೀಸರನ್ನು ನೋಡುತ್ತಲೇ ಕಾರನ್ನು ಯು ಟರ್ನ್ ಹೊಡೆಸಿದ್ದಾನೆ. ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರು ಒಂದು ಕಡೆಯಿಂದ ಕಾರನ್ನು ನಿಲ್ಲಿಸಲು ಪ್ರಯತ್ನ ಪಡುತ್ತಿರುವಾಗಲೇ ಹಿಂದಿನ ಸೀಟಲ್ಲಿದ್ದ ಅನ್ವರ್ ಡೋರ್ ತೆಗೆದು ಹೊರಕ್ಕೆ ಹಾರಿದ್ದಾನೆ. ಕಾರು ಟರ್ನ್ ಪಡೆಯುವಾಗ ಅನ್ವರ್ ಹೊರಕ್ಕೆ ಬಿದ್ದಿದ್ದರೆ, ಕಾರನ್ನು ನಿಲ್ಲಿಸದೆ ಆರೋಪಿಗಳು ಪರಾರಿಯಾಗಿದ್ದಾರೆ.
A hair collector, who was kidnapped by suspected drug addicts in Udma, Kerala was rescued after a 16-hour chase from Hassan in Karnataka, said Bekal DySP Sunil Kumar C K. The victim is Anwar of Kondotty in Malappuram district. Anwar, Nazar Neyan and their boss were staying at a lodge at Pallam in Udma.
09-04-25 09:31 pm
HK News Desk
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
Karwar Sp Narayana, Bhatkal News: ಭಟ್ಕಳ ; ವಿಚ...
09-04-25 11:25 am
10-04-25 01:25 pm
HK News Desk
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
ರಾಜ್ಯದ ಬಳಿಕ ಕೇಂದ್ರ ಸರ್ಕಾರದಿಂದಲೂ ಜನರಿಗೆ ಬೆಲೆ ಏ...
07-04-25 10:01 pm
09-04-25 10:57 pm
Mangalore Correspondent
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
PUC Results 2025, Mangalore Udupi topper: ಪಿಯ...
08-04-25 03:00 pm
Praveen Nettaru, Shafi Bellare, SDPI, Mangalo...
07-04-25 07:01 pm
10-04-25 02:57 pm
Mangalore Correspondent
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm
Fake Note, Dandeli: ದಾಂಡೇಲಿ ; ಖಾಲಿ ಮನೆಯಲ್ಲಿ 1...
08-04-25 10:01 pm