ಬ್ರೇಕಿಂಗ್ ನ್ಯೂಸ್
27-07-21 11:04 pm Mangaluru Correspondent ಕ್ರೈಂ
ಉಳ್ಳಾಲ, ಜು.27: ಮಂಜೇಶ್ವರದ ಹೊಸಂಗಡಿಯಲ್ಲಿರುವ ರಾಜಧಾನಿ ಜುವೆಲ್ಲರ್ಸ್ ನಲ್ಲಿ ದರೋಡೆ ನಡೆಸಿದ್ದ ಇನ್ನೋವಾ ಕಾರು ಮತ್ತು 7 ಮುಕ್ಕಾಲು ಕೇಜಿ ಬೆಳ್ಳಿ ಮತ್ತು ನಗದನ್ನು ಉಳ್ಳಾಲ ಪೊಲೀಸರು ವಶಪಡಿಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ನಿನ್ನೆ ಮುಂಜಾನೆ 2 ಗಂಟೆ ಸುಮಾರಿಗೆ ಹೊಸಂಗಡಿಯ ರಾಜಧಾನಿ ಜುವೆಲ್ಲರಿ ಮಳಿಗೆಯಲ್ಲಿ ದರೋಡೆ ನಡೆದಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಮತ್ತು ನಗದನ್ನು ಕದ್ದೊಯ್ದಿದ್ದರು. ದರೋಡೆಗೆ ಬಳಸಲಾಗಿದ್ದ ಇನ್ನೋವಾ ಕಾರು ಸುರತ್ಕಲ್ ಮೂಲದ ಮಸ್ತಫ ಎಂಬವರದ್ದಾಗಿತ್ತು. ಆರೋಪಿಗಳು ಮುಸ್ತಾಫ ಅವರಲ್ಲಿ ಉಳ್ಳಾಲ ದರ್ಗಾ ಮತ್ತು ಬಾಬಾ ಬುಡನ್ ಗಿರಿಗೆ ತೆರಳಲೆಂದು ಇನ್ನೋವಾ ಕಾರನ್ನು ಬಾಡಿಗೆಗೆ ಪಡೆದಿದ್ದರಂತೆ. ಆದರೆ ಕಾರು ಉಳ್ಳಾಲಕ್ಕೆ ತೆರಳದೆ ಕೇರಳಕ್ಕೆ ಚಲಿಸುತ್ತಿರುವುದನ್ನು ಕಾರು ಮಾಲೀಕ ಮುಸ್ತಾಫ ಅವರು ಜಿಪಿ ಆರ್ ಎಸ್ ನಿಂದ ಖಚಿತ ಪಡಿಸಿದ್ದರು. ಕೂಡಲೇ ಮುಸ್ತಾಫ ಅವರು ಆದಿತ್ಯವಾರ ರಾತ್ರಿಯೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮುಸ್ತಾಫ ಅವರ ಮಾಹಿತಿಯನ್ವಯ ನಿನ್ನೆ ಮುಂಜಾನೆ ತಲಪಾಡಿ ದೇವಿಪುರದಲ್ಲಿ ಗಸ್ತಿನಲ್ಲಿದ್ದ ಉಳ್ಳಾಲ ಪಿಎಸ್ಐ ಪ್ರದೀಪ್ ಮತ್ತು ತಂಡದವರು ಹೊಸಂಗಡಿಯಲ್ಲಿ ದರೋಡೆ ಮಾಡಿ ಬರುತ್ತಿದ್ದ ಇನ್ನೋವಾ ಕಾರನ್ನು ತಡೆದಿದ್ದು ಕಾರಲ್ಲಿದ್ದ ಏಳು ಮಂದಿ ದರೋಡೆಕೋರರು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಪ್ರತಿದಾಳಿಗೆ ಪೊಲೀಸರು ಮುಂದಾದಾಗ ದರೋಡೆಕೋರರು ತಪ್ಪಿಸಿಕೊಂಡಿದ್ದಾರೆ. ಉಳ್ಳಾಲ ಪೊಲೀಸರು ದರೋಡೆಗೆ ಬಳಸಿದ ಇನ್ನೋವಾ ಕಾರು, ಏಳು ಮುಕ್ಕಾಲು ಕೇಜಿ ಬೆಳ್ಳಿ ಆಭರಣ, 1.90 ಲಕ್ಷ ರೂ. ನಗದು, ಜುವೆಲ್ಲರಿಯ ಡಿವಿಆರ್, ಖಾರದ ಪುಡಿ, ಕಬ್ಬಿಣದ ರಾಡ್, ಗ್ಯಾಸ್ ಕಟ್ಟರನ್ನು ವಶ ಪಡಿಸಿದ್ದಾರೆ.
ಹೊಸಂಗಡಿ ಜಂಕ್ಷನ್ನಲ್ಲಿರುವ ರಾಜಧಾನಿ ಜುವೆಲ್ಲರಿಯ ಹೊರಗಿದ್ದ ಕಾವಲುಗಾರನನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ, ಏಳು ಮಂದಿಯ ಆರೋಪಿಗಳ ತಂಡ ಶಟರ್ ಒಡೆದು ಜುವೆಲ್ಲರಿಗೆ ನುಗ್ಗಿದ್ದರು. ಆದರೆ ಜುವೆಲ್ಲರಿ ಒಳಗೆ ಗ್ಲಾಸ್ ಕಪಾಟನ್ನು ಒಡೆಯಲಾಗದೆ ಚಿನ್ನಾಭರಣ ಕಳವು ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಬೆಳ್ಳಿ ಆಭರಣ ಸೇರಿದಂತೆ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಭಾರೀ ಮಳೆಯ ನಡುವೆ ರಾತ್ರಿ 2ರಿಂದ 3 ಗಂಟೆ ನಡುವೆ ನಡೆದಿದ್ದ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಈ ನಡುವೆ, ಕಾರು ಮಾಲೀಕನ ಸೂಚನೆಯಂತೆ ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ಉಳ್ಳಾಲ ಮತ್ತು ಕಾಸರಗೋಡು ಮೂಲದ ಖದೀಮರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
The Ullal police have tried to stop the Innova car in which burglars were escaping looting a jewellery store in Kasaragod when the cops tried to stop them but they attacked the police and ran away. Bu the Police have seized the Car, cash and silver items. In a major burglary, a gang made away with ornaments worth Rs 16 lakh from a jewellery store in Kasaragod district’s Hosangadi. The robbery happened at the Rajadhani jewellery store in the wee hours of Monday, July 26. As per reports, some cash and silver ornaments were stolen from the shop.
29-03-25 09:19 pm
HK News Desk
Mysuru three drowned, Lake, Ugadi: ಮೈಸೂರು ; ಹ...
29-03-25 03:13 pm
Naxal Karanataka, Anti Naxal Force: ನಕ್ಸಲ್ ನಿ...
28-03-25 10:47 pm
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
29-03-25 04:40 pm
HK News Desk
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ...
28-03-25 04:15 pm
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
29-03-25 11:04 pm
Mangalore Correspondent
MLC Ivan D'Souza, Mangalore: 7ನೇ ವೇತನ ಆಯೋಗ ;...
29-03-25 10:07 pm
Udupi Love Jihad, Kidnap, Crime: ಇಂಜಿನಿಯರಿಂಗ್...
29-03-25 05:20 pm
Kundapura accident: ಬಳ್ಕೂರಿನಲ್ಲಿ ಸ್ಕೂಟರಿಗೆ ಕಾ...
28-03-25 11:16 pm
Mangalore University, Rajendra Kumar, Rohan M...
28-03-25 07:38 pm
30-03-25 08:59 am
Mangaluru Correspondent
ಆಂಧ್ರದಲ್ಲಿ ಪ್ಯಾಸ್ಟರ್ ಪ್ರವೀಣ್ ಕುಮಾರ್ ಸಂಶಯಾಸ್ಪದ...
29-03-25 10:33 pm
Bajrang Dal, Arrest, Cow Transport, Mangalore...
29-03-25 04:02 pm
Mangalore Nandigudde Prostitution case: ನಂದಿಗ...
28-03-25 09:25 pm
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm