ಬ್ರೇಕಿಂಗ್ ನ್ಯೂಸ್
23-07-21 06:03 pm Headline Karnataka News Network ಕ್ರೈಂ
ಮುಂಬೈ, ಜುಲೈ 23: ತಾಯಿಗೆ ಮಕ್ಕಳು ಹೆಗ್ಗಣ ಆಗಿದ್ದರೂ ಚಿನ್ನವಂತೆ. ಆದರೆ, ಮಕ್ಕಳಿಗೆ ಹಾಗೇನೂ ಇಲ್ವಲ್ಲ. ಇಲ್ಲೊಬ್ಬ 18 ವರ್ಷದ ಹುಡುಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಾಯಿಯನ್ನು ಮನೆಯೊಳಗೆ ಕೂಡಿಹಾಕಿ ಕುತ್ತಿಗೆ ಅಮುಕಿ ಕೊಲೆ ಮಾಡಿದ್ದಾನೆ. ಹೌದು.. ಮುಂಬೈನ ವಸಾಯಿ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಲಿವಾಡದಲ್ಲಿ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಗಂಡ ತೀರಿಕೊಂಡ ಬಳಿಕ 59 ವರ್ಷದ ಮಹಿಳೆ ಕುಡಿಯಲು ತೊಡಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರ ಇಬ್ಬರು ಮಕ್ಕಳು ಮತ್ತು ತಾಯಿ ನಡುವೆ ಕಂದಕ ತಂದಿಟ್ಟಿತ್ತು. ಮೊನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ತಾಯಿ, ಮಕ್ಕಳ ನಡುವೆ ಜಗಳ ಆಗಿತ್ತು.
ಎಂಟನೇ ಕ್ಲಾಸ್ ಓದುತ್ತಿದ್ದ 18 ವರ್ಷದ ಹುಡುಗ, ತನ್ನ ತಂಗಿಯನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದಾನೆ. ಆಕೆ ಹೊರ ನಡೆಯುತ್ತಿದ್ದಂತೆ, ಮನೆಯ ಬಾಗಿಲನ್ನು ಒಳಗಿಂದ ಲಾಕ್ ಮಾಡಿದ್ದ ಹುಡುಗ ತಾಯಿಯ ಕುತ್ತಿಗೆ ಬೆಲ್ಟ್ ನಲ್ಲಿ ಅದುಮಿದ್ದಾನೆ. ವಿಲವಿಲ ಒದ್ದಾಡಿ ಸಾಯುವ ತನಕವೂ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಸ್ವಲ್ಪ ಹೊತ್ತಿನ ಬಳಿಕ ತಂಗಿ ಮನೆಗೆ ಮರಳಿದ್ದು, ಅಲ್ಲಿನ ದೃಶ್ಯ ನೋಡಿ ಹೌಹಾರಿದ್ದಾಳೆ. ತಾಯಿಯನ್ನೇ ಕೊಲೆ ಮಾಡಿದ್ದು ನೋಡಿ ಸ್ಥಳೀಯರನ್ನು ಕರೆದಿದ್ದಾಳೆ. ಬಳಿಕ ವಸಾಯಿ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ತಾಯಿಯನ್ನು ಕೊಲೆಗೈದ ಬಳಿಕ ಅಲ್ಲಿಯೇ ಕುಳಿತಿದ್ದ ಮಗನನ್ನು ವಶಕ್ಕೆ ಪಡೆದಿದ್ದಾರೆ. ತಂದೆಯ ಉಳಿಸಿದ್ದ ಹಣವನ್ನು ತಾಯಿ ಕುಡಿತಕ್ಕೇ ಮುಗಿಸುತ್ತಿದ್ದಾಳೆಂದು ಕೊಲೆ ಮಾಡಿದ್ದಾಗಿ ಹುಡುಗ ಹೇಳಿದ್ದಾನಂತೆ.
28-06-25 12:14 pm
HK News Desk
ಹುಲಿ ದಾಳಿ ಮಾಡಿದ್ದ ಹಸುವಿಗೆ ವಿಷ ಹಾಕಿದ್ದ ಸ್ಥಳೀಯರ...
27-06-25 10:42 pm
Cm Siddaramaiah, Mangalore, Hate speech, Poli...
27-06-25 09:56 pm
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ' ಪದ ತ...
27-06-25 05:38 pm
Five Tigers Die Male Mahadeshwara Forest: ಮಲೆ...
27-06-25 02:46 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
27-06-25 10:59 pm
HK News Desk
Davanagere News, Crime, Aunty: 25 ವರ್ಷದ ಅಳಿಯನ...
27-06-25 07:50 pm
ಬೇಲಿಯೇ ಎದ್ದು ಹೊಲ ಮೇಯ್ದ ಕತೆ ; ಬ್ಯಾಂಕ್ ಮ್ಯಾನೇಜರ...
27-06-25 07:27 pm
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm