ಬ್ರೇಕಿಂಗ್ ನ್ಯೂಸ್
05-07-21 11:10 pm Mangaluru Correspondent ಕ್ರೈಂ
ಪುತ್ತೂರು, ಜುಲೈ 5: ಹೈಟೆಕ್ ಹನಿಟ್ರ್ಯಾಪ್ ಪ್ರಕರಣ ಸಂಬಂಧಿಸಿ ಪುತ್ತೂರು ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತ ಯುವಕನಿಂದ ಹಣ ಕಿತ್ತುಕೊಂಡಿದ್ದ ಪುತ್ತೂರಿನ ಮಹಮ್ಮದ್ ಶಾಫಿ (34), ಸವಣೂರಿನ ಅಜರುದ್ದೀನ್(38), ನಝೀರ್ (32) ಎಂಬವರನ್ನು ಬಂಧಿಸಲಾಗಿದೆ.
ನೆಟ್ಟಣಿಗೆ ಮುಡ್ನೂರಿನ ಅಬ್ದುಲ್ ನಾಸೀರ್ ಎಂಬಾತನಿಗೆ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ವಿಡಿಯೋ ಕಾಲ್, ಚಾಟಿಂಗ್ ಮಾಡಿ ಹತ್ತಿರವಾಗಿದ್ದಳು. ಬಳಿಕ ವಿಡಿಯೋ ಕಾಲ್ ನಲ್ಲಿ ಅರೆ ನಗ್ನವಾಗಿ ತೋರಿಸುವಂತೆ ಹೇಳಿ, ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಯುವತಿಯ ಬಲೆಗೆ ಬಿದ್ದು ಆಕೆ ಹೇಳಿದಂತೆ ಕೇಳಿದ್ದ ಅಬ್ದುಲ್ ನಾಸೀರ್ ಹನಿಟ್ರ್ಯಾಪ್ ಒಳಗಾಗಿದ್ದ. ಬಳಿಕ ಆರೇಳು ಮಂದಿ ಯುವಕರು ಅಬ್ದುಲ್ ನಾಸಿರ್ ಹಿಂದೆ ಬಿದ್ದು ಹಣಕ್ಕಾಗಿ ಪೀಡಿಸಿದ್ದಾರೆ. 30 ಲಕ್ಷ ರೂ. ಹಣ ನೀಡದೇ ಇದ್ದರೆ ವಿಡಿಯೋವನ್ನು ಜಾಲತಾಣದಲ್ಲಿ ಹಾಕುವುದಾಗಿ ಹೇಳಿ, ಒತ್ತಡ ಹೇರಿದ್ದಾರೆ. ಅದರಂತೆ, ಮಾನಸಿಕ ಒತ್ತಡಕ್ಕೊಳಗಾದ ಅಬ್ದುಲ್ ನಾಸೀರ್ ಜಾಗ ಖರೀದಿಸಲೆಂದು ಕೂಡಿಟ್ಟಿದ್ದ 25 ಲಕ್ಷ ರೂ.ವನ್ನು ಆರೋಪಿಗಳಿಗೆ ಕೊಟ್ಟಿದ್ದ. ಆದರೆ, ಐದು ಲಕ್ಷ ಬಾಕಿ ಇರಿಸಿಕೊಂಡ ಹಣವನ್ನು ಪೀಕಿಸಿಕೊಳ್ಳಲು ನಜೀರ್ ಮತ್ತು ಅಜರ್ ಬಂದಿದ್ದು ಮತ್ತೆ ಅಬ್ದುಲ್ ನಾಸೀರ್ ನನ್ನು ಸತಾಯಿಸಿದ್ದಾರೆ.
ಇದರಿಂದ ಹಿಂಸೆಗೊಳಗಾಗಿದ್ದ ಅಬ್ದುಲ್ ನಾಸೀರ್ ಪುತ್ತೂರು ನಗರ ಠಾಣೆ ಪೊಲೀಸರಿಗೆ ತಿಳಿಸಿದ್ದ. ಪೊಲೀಸರು ಮೊದಲು ಯುವತಿಯನ್ನು ಬಂಧಿಸಿದ್ದು ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ಏಳು ಮಂದಿ ಆರೋಪಿಗಳ ಹೆಸರನ್ನು ಪೊಲೀಸರಿಗೆ ನೀಡಲಾಗಿತ್ತು. ಯುವತಿ ತನ್ನ ಹೆಸರನ್ನು ನತಾಶಾ ಎಂದು ಪರಿಚಯಿಸಿದ್ದಲ್ಲದೆ, ಕಾರ್ಕಳದವಳೆಂದು ಹೇಳಿ ಪ್ರೀತಿ ಪ್ರೇಮದ ನಾಟಕವಾಡಿದ್ದಳು. ಬಂಧನದ ಬಳಿಕ ಆಕೆ ಬಂಟ್ವಾಳದ ನಿವಾಸಿಯೆಂದು ತಿಳಿದುಬಂದಿತ್ತು.
ಆರೋಪಿಗಳ ಬಳಿಯಿಂದ ಏಳು ಲಕ್ಷ ರೂ. ನಗದು, ಒಂದು ಕಾರು, ಒಂದು ಆಟೋ ಮತ್ತು ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಸೋಶಿಯಲ್ ಮೀಡಿಯಾದಲ್ಲೇ ಹನಿಟ್ರ್ಯಾಪ್ ; ಲಕ್ಷಾಂತರ ಕಳಕೊಂಡ ಯುವಕ, ಬಲೆಗೆ ಬಿದ್ದ ಯುವತಿ !
Puttur Honey trap case three Absconding persons have been arrested by Police. Seven lakh cash, 5 lakh worth Car and 1 lakh worth Auto has been seized by the Police.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm