ಬ್ರೇಕಿಂಗ್ ನ್ಯೂಸ್
04-07-21 09:22 pm Giridhar Shetty, Mangaluru ಕ್ರೈಂ
ಮಂಗಳೂರು, ಜುಲೈ 3: ಮಂಗಳೂರು ಪೊಲೀಸರು ಕೇವಲ ಎರಡು ತಿಂಗಳ ಅವಧಿಯಲ್ಲಿ 350 ಕೇಜಿಗೂ ಹೆಚ್ಚು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಇಷ್ಟೊಂದು ಭಾರೀ ಪ್ರಮಾಣದ ಗಾಂಜಾ ಎಲ್ಲಿಂದ ರವಾನೆಯಾಗುತ್ತಿದೆ, ಇದರ ಆದಾಯ ಮೂಲವೇನು ಎಂದು ಕೆದಕುತ್ತ ಸಾಗಿದರೆ, ಅಚ್ಚರಿಯ ಮಾಹಿತಿಗಳು ಲಭ್ಯವಾಗುತ್ತವೆ. ಆಂಧ್ರಪ್ರದೇಶ, ಛತ್ತೀಸಗಢ, ಒಡಿಶಾ ರಾಜ್ಯದ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಗಾಂಜಾವನ್ನು ಬೆಳೆಯಲಾಗುತ್ತಿದ್ದು, ಇಡೀ ದೇಶಾದ್ಯಂತ ಅಲ್ಲಿಂದಲೇ ಸರಬರಾಜು ಆಗುತ್ತಿದೆ. ಅಷ್ಟೇ ಅಲ್ಲಾ, ಇದರ ಪೂರ್ತಿ ನಿಯಂತ್ರಣವನ್ನು ಆಂಧ್ರಪ್ರದೇಶದ ಮಾವೋಯಿಸ್ಟ್ ಸಿಪಿಐ ನಕ್ಸಲರೇ ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಬಗ್ಗೆ ಮಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಖಚಿತ ಮಾಹಿತಿಗಳನ್ನು ನೀಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ನಕ್ಸಲ್ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು, ಅದನ್ನು ವ್ಯವಸ್ಥಿತವಾಗಿ ದೇಶದ ವಿವಿಧ ನಗರಗಳಿಗೆ ಪೂರೈಕೆ ಮಾಡುವುದಲ್ಲದೆ ಅದರಿಂದ ಬಂದ ಹಣದಲ್ಲೇ ಶಸ್ತ್ರಾಸ್ತ್ರ, ಇನ್ನಿತರ ಸಂಪರ್ಕ ಸಾಧನಗಳ ಖರೀದಿ ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುತ್ತಾರೆ.
ಗಾಂಜಾ ಬೆಳೆಯೇ ನಕ್ಸಲರಿಗೆ ಆದಾಯ !
ದೇಶದಲ್ಲಿ ನಿಷೇಧ ಆಗಿರುವ ಮಾವೋಯಿಸ್ಟ್ ನಕ್ಸಲರ ಪಾಲಿಗೆ ಗಾಂಜಾ ಬೆಳೆಯೇ ಪ್ರಮುಖ ಆದಾಯ ಮೂಲ ಎನ್ನುವುದು ಪೊಲೀಸ್ ಇಲಾಖೆಯ ಒಳಗಿಂದಲೇ ತಿಳಿದುಬರುವ ಖಚಿತ ಮಾಹಿತಿ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆ ಒಂದರಲ್ಲೇ ಅಲ್ಲಿನ ಬುಡಕಟ್ಟು ಜನರು ಕಳೆದ ಎರಡು ದಶಕಗಳಿಂದ ಗಾಂಜಾವನ್ನು ತಮ್ಮ ಇತರೇ ಕೃಷಿ ಬೆಳೆಗಳ ನಡುವೆ ಬೆಳೆಸುತ್ತಿದ್ದಾರೆ. ಆರಂಭದಲ್ಲಿ ಕೆಲವೇ ಭಾಗದಲ್ಲಿದ್ದ ಗಾಂಜಾ ಬೆಳೆ ಎರಡು ದಶಕದಲ್ಲಿ ವಿಶಾಖಪಟ್ಟಣ ಜಿಲ್ಲೆಯ 11 ಮಂಡಲಗಳ ವ್ಯಾಪ್ತಿಯಲ್ಲಿ ಹರಡಿದ್ದು, ಅದಕ್ಕೆ ಮಾವೋ ನಕ್ಸಲರ ಪ್ರೋತ್ಸಾಹವೇ ಕಾರಣ ಎನ್ನಲಾಗುತ್ತಿದೆ.
ಪೊಲೀಸರು ಅಥವಾ ಕಾನೂನು ಪಾಲಕರು ತಲುಪದ ಹಳ್ಳಿ ಪ್ರದೇಶದ ಬೆಟ್ಟ ಗುಡ್ಡಗಳಲ್ಲಿ ಶುಂಠಿ ಇನ್ನಿತರ ಸಮಾನಾಂತರ ಬೆಳೆಗಳ ನಡುವೆ ಗಾಂಜಾವನ್ನು ಬೆಳೆಸಲಾಗುತ್ತಿದೆ. ವಿಶೇಷ ಅಂದ್ರೆ, ಈ ಗಾಂಜಾ ಬೆಳೆಯ ಸಂಪೂರ್ಣ ನಿಯಂತ್ರಣ ನಕ್ಸಲರ ಕೈಯಲ್ಲೇ ಇರುತ್ತದೆ. ಅಲ್ಲಿನ ಬುಡಕಟ್ಟು ಜನರಿಗೆ ಮತ್ತು ನಕ್ಸಲರಿಗೆ ಗಾಂಜಾ ಬೆಳೆಯೇ ಪ್ರಮುಖ ಆದಾಯ ಮೂಲ ಆಗಿರುವುದರಿಂದ ಈ ವಿಚಾರ ಮುಖ್ಯ ವಾಹಿನಿಗೆ ಬರದಂತೆ ವ್ಯವಸ್ಥಿತವಾಗಿ ನಡೆಸಲಾಗುತ್ತದೆ.
ಆಂಧ್ರಪ್ರದೇಶದ ಅಬಕಾರಿ ಮೂಲಗಳ ಪ್ರಕಾರ, ವಿಶಾಖಪಟ್ಟಣ ಜಿಲ್ಲೆಯ 11 ಮಂಡಲಗಳ ವ್ಯಾಪ್ತಿಯ 150 ರಷ್ಟು ಗ್ರಾಮಗಳಲ್ಲಿ ಗಾಂಜಾ ಬೆಳೆ ಇದೆಯಂತೆ. ಏನಿಲ್ಲ ಅಂದ್ರೂ ಈ ಭಾಗದಲ್ಲಿ ಐದರಿಂದ ಏಳು ಸಾವಿರ ಎಕ್ರೆ ಪ್ರದೇಶದಲ್ಲಿ ಗಾಂಜಾ ಸದ್ದಿಲ್ಲದೆ ಬೆಳೆಯುತ್ತಿದ್ದು, ವ್ಯವಸ್ಥಿತವಾಗಿ ಮಾರುಕಟ್ಟೆ ಸೇರುತ್ತಿದೆ. ಗಾಂಜಾ ಬೆಳೆಯುವ ತಳಿಯಿಂದ ಹಿಡಿದು ಮಾರುಕಟ್ಟೆಗೆ ಸಾಗಿಸುವ ವರೆಗೂ ಎಲ್ಲವೂ ಮಾವೋಯಿಸ್ಟ್ ನಕ್ಸಲರದ್ದೇ ಅಧಿಪತ್ಯ.
ಒಂದು ಗಿಡಕ್ಕೆ ನೂರು ರೂ.ನಂತೆ ವಸೂಲಿ
ಆಂಧ್ರಪ್ರದೇಶದಲ್ಲಿ ನಕ್ಸಲ್ ವಿರೋಧಿ ದಳದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಒಬ್ಬ ರೈತ ಹೆಚ್ಚೆಂದರೆ ಎಕ್ರೆಯಲ್ಲಿ ನೂರು ಗಿಡಗಳನ್ನು ಮಾತ್ರ ಬೆಳೆಯುವಂತೆ ನಕ್ಸಲರ ಸೂಚನೆ ಇರುತ್ತದೆ. ಹೆಚ್ಚು ಬೆಳೆದು ಪೊಲೀಸರ ಕೈಗೆ ಸಿಕ್ಕಿಬೀಳಬಾರದು ಎಂಬ ದೂರದೃಷ್ಟಿಯನ್ನು ನಕ್ಸಲರೇ ರೈತರಲ್ಲಿ ತುಂಬುತ್ತಾರೆ. ಅಲ್ಲದೆ, ಗಾಂಜಾ ಗಿಡವನ್ನು ತಾವೇ ಪೂರೈಕೆ ಮಾಡುವುದರಿಂದ ನೆಡುವಾಗಲೇ ನೂರು ರೂ.ನಂತೆ ನಕ್ಸಲರು ರೈತನಿಂದ ವಸೂಲಿ ಮಾಡುತ್ತಾರೆ. ಗಿಡ ನೆಡುವ ಒಂದು ಗುಂಡಿಗೆ ನೂರರಂತೆ, ಎಕ್ರೆಯಲ್ಲಿ ಸಾವಿರ ಗಿಡ ಬೆಳೆದರೆ ಒಂದು ಲಕ್ಷ ರೂಪಾಯಿ ನಕ್ಸಲರಿಗೆ ಆರಂಭದಲ್ಲೇ ಸಿಗುತ್ತದೆ. ಅಂದಾಜು 5 ಸಾವಿರ ಎಕ್ರೆಯಲ್ಲಿ ಗಾಂಜಾ ಬೆಳೆಯುತ್ತಾರೆಂಬ ಲೆಕ್ಕಾಚಾರ ಇದ್ದು, ಅದರ ಪ್ರಕಾರ ಗಿಡ ನೆಡುವಾಗಲೇ 50 ಕೋಟಿ ರೂಪಾಯಿ ನಕ್ಸಲರ ಜೇಬು ಸೇರುತ್ತದೆ.
ಗಾಂಜಾ ಬೆಳೆಯ ಆದಾಯ ಎಷ್ಟು ಗೊತ್ತಾ ?
ಮೂಲಗಳ ಪ್ರಕಾರ, ಸರಾಸರಿ ಒಂದು ಗಿಡ ಬೆಳೆದು ನಿಂತಾಗ ಒಂದು ಕೇಜಿ ತೂಗುತ್ತದೆ. ಎಕ್ರೆಯಲ್ಲಿ ಒಂದು ಸಾವಿರ ಗಿಡ ಬೆಳೆದರೆ, ಒಂದು ಸಾವಿರ ಕೇಜಿಯಾಗುತ್ತದೆ. ವಿಶಾಖಪಟ್ಟಣ ಜಿಲ್ಲೆಯಲ್ಲೇ ಐದು ಸಾವಿರ ಎಕ್ರೆ ವ್ಯಾಪ್ತಿಯಲ್ಲಿ ಬೆಳೆಯುತ್ತಾರೆಂಬ ಅಂದಾಜಿದ್ದು ಅದರಂತೆ, ಐದು ಸಾವಿರ ಟನ್ ಗಾಂಜಾ ಮಾರುಕಟ್ಟೆ ಸೇರುತ್ತದೆ. ವರ್ಷದಲ್ಲಿ ಎರಡು ಬಾರಿ ಈ ರೀತಿ ಗಾಂಜಾ ಬೆಳೆಯುತ್ತಿದ್ದು, ವಾರ್ಷಿಕವಾಗಿ ಹತ್ತು ಸಾವಿರ ಟನ್ ಬೆಳೆಯ ದೊಡ್ಡ ಮಾರುಕಟ್ಟೆ ಇದರದ್ದು. ಇದೇ ಬೆಳೆಯನ್ನು ಕೇಜಿಗೆ ಎರಡು ಸಾವಿರ ರೂ.ನಂತೆ ದಲ್ಲಾಳಿಗಳು ರೈತರಿಂದ ಪಡೆದು, ಅದನ್ನು ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ಹೀಗೆ ಪ್ರಮುಖ ನಗರಗಳಿಗೆ ಸರಬರಾಜು ಮಾಡುತ್ತಾರೆ. ನಗರ ಪ್ರದೇಶಗಳಲ್ಲಿ ಇದರ ಮೌಲ್ಯ ಕೇಜಿಗೆ ಏಳು ಸಾವಿರದಿಂದ 15 ಸಾವಿರದ ವರೆಗೂ ಇರುವುದಂತೆ. ಈ ಮೂಲಕ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಹಿವಾಟಿನ ಆದಾಯ ಕೇವಲ ಮಾವೋವಾದಿ ನಕ್ಸಲರಿಗೇ ಸೇರುತ್ತದೆ ಅನ್ನುವುದು ಪೊಲೀಸ್ ಇಲಾಖೆಯಿಂದಲೇ ಕೇಳಿಬರುತ್ತಿರುವ ಸತ್ಯ.
Cultivation of ganja has become the mainstay for tribal people in the Visakhapatnam Agency reveals Mangalore Police. From a small beginning in some villages in the interior parts of the Agency, it has now spread to nine of the 11 mandals, and it is being grown reportedly under the patronage of the banned CPI (Maoist). The Left Wing Extremist group on the Andhra Odisha Border, which touches the nine mandals, are mixing revolution and ganja with dexterity.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm