ಬ್ರೇಕಿಂಗ್ ನ್ಯೂಸ್
04-07-21 04:30 pm Satish, Bengaluru Correspondent ಕ್ರೈಂ
ಬೆಂಗಳೂರು, ಜುಲೈ 4: 5 ಕೆಜಿ ಚಿನ್ನ, 5 ಕೇಜಿ ಬೆಳ್ಳಿ, ಕೈತುಂಬಾ ಹಣವನ್ನು ವರದಕ್ಷಿಣೆಯಾಗಿ ಕೊಟ್ಟರೂ ಸಂತೃಪ್ತನಾಗದ ಭಂಡ ಪತಿಯ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಪತಿ ಮೇಲಾಗಿ ಪಿಡಬ್ಲ್ಯುಡಿ ಗುತ್ತಿಗೆದಾರನ ಪುತ್ರ. ಕೈಗೊಂದು ಕಾಲಿಗೊಂದು ಆಳು, ತಿಂದುಂಡು ಮಲಗುವಷ್ಟು ದುಡ್ಡು ಇದ್ದರೂ ತೃಪ್ತನಾಗದ ಪತಿ, ಮತ್ತೆ ಒಂದು ಕೋಟಿ ಹಣ ತರುವಂತೆ ಪೀಡಿಸಿದ್ದ. ಇದರಿಂದ ಬೇಸತ್ತ ಮಾರತ್ತಹಳ್ಳಿ ನಿವಾಸಿ 28 ವರ್ಷದ ಮಹಿಳೆ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ದೂರಿನನ್ವಯ ಪ್ರತಿಷ್ಠಿತ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿರುವ ಪತಿ ಬಾಲಾಜಿ(32) ಸೇರಿ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
2020 ನವೆಂಬರ್ನಲ್ಲಿ ಇವರ ಮದುವೆಯಾಗಿತ್ತು. ಬಾಲಾಜಿ ತಂದೆ ಕಲ್ಯಾಣನಗರದಲ್ಲಿ ಗುತ್ತಿಗೆದಾರ. ವಿವಾಹವಾದ 1 ತಿಂಗಳಲ್ಲೇ ಪತಿ ಮತ್ತೆ 1 ಕೋಟಿ ರೂ. ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದು, ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಮಹಿಳೆಯ ಪಾಲಕರು ಸಾಲ ಮಾಡಿ ಮದುವೆ ಸಂದರ್ಭದಲ್ಲಿ 80 ಲಕ್ಷ ರೂ. ಹಣ ಕೊಟ್ಟಿದ್ದರು. ಆನಂತರ ಮನೆ ಕಟ್ಟಲು ಹಣ ಬೇಕೆಂದು ಬಾಕಿ 20 ಲಕ್ಷ ರೂ. ತರುವಂತೆ ಪತಿ ಆಗಾಗ ಪೀಡಿಸುತ್ತಿದ್ದ. ಇದಕ್ಕೆ ಪತ್ನಿ ನಿರಾಕರಿಸಿದಾಗ ಹಲ್ಲೆ ನಡೆಸಿ, ದೈಹಿಕ ಕಿರುಕುಳ ಕೊಟ್ಟಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಕಳೆದ ಜನವರಿಯಲ್ಲಿ ಪೊಂಗಲ್ ಹಬ್ಬಕ್ಕೆ ಹಣ ತರಲಿಲ್ಲವೆಂದು ಪತ್ನಿಯನ್ನು ಮನೆಯಿಂದಲೇ ಹೊರ ಹಾಕಿದ್ದ. ಈ ಬಗ್ಗೆ ಪತ್ನಿ ತನ್ನ ಪಾಲಕರ ಬಳಿ ಅಳಲನ್ನು ತೋಡಿಕೊಂಡಿದ್ದಳು. ಮದುವೆಗೆ ಮಾಡಿದ ಸಾಲವನ್ನೇ ಇನ್ನೂ ತೀರಿಸದ ಕಾರಣ ಮತ್ತೆ ಹಣ ಕೊಡುವುದು ಎಲ್ಲಿಂದ ಎಂದು ಪಾಲಕರು ಕೈಎತ್ತಿದ್ದರು. ನಂತರ ಸಂಬಂಧಿಕರ ಒತ್ತಾಯದ ಮೇರೆಗೆ ಪತ್ನಿಯನ್ನು ಮನೆಗೆ ಸೇರಿಸಿಕೊಂಡಿದ್ದ ಬಾಲಾಜಿ, ರೂಮ್ನಲ್ಲಿ ಕೂಡಿ ಹಾಕಿ ಆಹಾರ ಕೊಡದೆ ಹಿಂಸೆ ನೀಡುತ್ತಿದ್ದ.
ಮಗಳ ರೋದನ ಕಂಡು ಮರುಗಿದ ಪಾಲಕರು ಈ ನಡುವೆ ಮತ್ತೆ 30 ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಆನಂತರ ಕೆಲವು ಸಮಯ ಸುಮ್ಮನಿದ್ದ ಪತಿ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಪತ್ನಿಯ ಚಿನ್ನಾಭರಣ, ವರದಕ್ಷಿಣೆ ಹಣ ಪಡೆದು ಇದೀಗ ವಿಚ್ಛೇದನ ಕೊಡುವಂತೆ ಪತ್ನಿಗೆ ದುಂಬಾಲು ಬಿದ್ದಿದ್ದಾನೆಂದು ದೂರಲಾಗಿದೆ. ಪತಿಯ ವರ್ತನೆಯಿಂದ ನೊಂದ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
Bangalore Wife lodges dowry case as Husband demands Rs 1 crore and brutally tortures. After the wife's family have tried to settle some amount husband now is asking for a divorce for which the wife has lodged a complaint.
28-03-25 12:19 pm
Bangalore Correspondent
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
28-03-25 04:15 pm
HK News Desk
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
Uber, Ola, Sahkar Taxi: ಓಲಾ, ಉಬರ್ ರೀತಿಯಲ್ಲೇ ಸ...
27-03-25 04:07 pm
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
28-03-25 11:52 am
Mangalore Correspondent
Mangalore Jail, Mobile Jammer: ಎತ್ತಿಗೆ ಜ್ವರ ಬ...
27-03-25 08:45 pm
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm