ಬ್ರೇಕಿಂಗ್ ನ್ಯೂಸ್
01-07-21 03:55 pm Bangalore Correspondent ಕ್ರೈಂ
Photo credits : News 18 Kannada
ಬೆಂಗಳೂರು, ಜುಲೈ 1: ದುಬಾರಿ ಕಾರುಗಳಲ್ಲಿ ಓಡಾಟ. ಐಷಾರಾಮಿ ಜೀವನ. ಮನೆ ಕಳ್ಳತನವೇ ವೃತ್ತಿ. ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ಮನೆ ಕಳ್ಳತನ ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದ ಕುಖ್ಯಾತ ಕಳ್ಳ ಕಂ ಅಂತಾರಾಜ್ಯ ಹೈಟೆಕ್ ಖದೀಮನನ್ನು ಸಿಸಿಬಿ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.
ಬಿಡದಿ ಮೂಲದ ನಿವಾಸಿ ಬಸವರಾಜ್ ಅಲಿಯಾಸ್ ಪ್ರಕಾಶ ಜಂಗ್ಲಿ(32) ಬಂಧಿತ ಆರೋಪಿ. ಈತನಿಂದ 80 ಲಕ್ಷ ರೂ. ಮೌಲ್ಯದ 1 ಕೇಜಿ 367 ಗ್ರಾಮ್ ಚಿನ್ನಾಭರಣ, 1.50 ಲಕ್ಷದ ರೂ. ನಗದು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಈವರೆಗೆ 10 ಮನೆಗಳವು ಪ್ರಕರಣಗಳಲ್ಲಿ ಜೈಲು ಸೇರಿದ್ದರೂ ಜಾಮೀನಿನ ಮೇಲೆ ಹೊರಬಂದು ಅದನ್ನೇ ಕಸುಬಾಗಿಸಿಕೊಂಡಿದ್ದ.
ಕಳ್ಳತನ ಮಾಡಲು ವಿವಿಧ ಕಾರುಗಳನ್ನು ಬಳಸುತ್ತಿದ್ದ ಆರೋಪಿ, ಕಳ್ಳತನದ ಬಳಿಕ ಕಾರಿನಲ್ಲಿ ತೆಲಂಗಾಣ, ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ. ಬೆಂಗಳೂರುನಗರ ಹಾಗೂ ಹೈದರಾಬಾದ್ಗಳಲ್ಲಿ ಮನೆ ಕಳವು ನಡೆಸುತ್ತಿದ್ದ. ಅದರಿಂದ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಬಿಡದಿ, ಕೊಡಿಗೇಹಳ್ಳಿ, ಸಿ.ಕೆ. ಅಚ್ಚುಕಟ್ಟು, ವಿಜಯನಗರ, ಗಿರಿನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಹೈದರಾಬಾದ್, ತಮಿಳುನಾಡಿನ ಹೊಸೂರು ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು.
ಚಾಣಾಕ್ಷ ಬುದ್ಧಿಯಿಂದಲೇ ಪೊಲೀಸರಿಗೆ ಚಳ್ಳೆಹಣ್ಣು
ಆರೋಪಿ ಬಸವರಾಜ್ ಮನೆ ಕಳ್ಳತನ ಮಾಡುವುದಕ್ಕಾಗಿಯೇ ಹೊಸ ಹೊಸ ಕಾರುಗಳನ್ನು ಉಪಯೋಗಿಸುತ್ತಿದ್ದ. ಕಾರು ಬಾಡಿಗೆ ಪಡೆದು ಬೆಂಗಳೂರು, ತಮಿಳುನಾಡು, ಹೈದರಾಬಾದ್ ನಲ್ಲಿ ಸುತ್ತಾಡುತ್ತಿದ್ದ. ಬೆಂಗಳೂರಿನಲ್ಲಿ ಕೇಸು ದಾಖಲಾಗಿ ಪೊಲೀಸರು ಆರೋಪಿಯನ್ನು ಹಿಡಿಯುವ ಪ್ರಯತ್ನದಲ್ಲಿರುವಾಗಲೇ ಹೈದರಾಬಾದ್ನಲ್ಲಿ ತಲೆಮರೆಸಿಕೊಳ್ತಿದ್ದ. ಈ ರೀತಿಯ ಚಾಳಿಯಿಂದಾಗಿ ಆರೋಪಿ ಬೆನ್ನುಬಿದ್ದ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸ್ತಿದ್ದ. ಈವರೆಗೆ ಹತ್ತು ಬಾರಿ ಬಂಧನವಾಗಿ ಜಾಮೀನಲ್ಲಿ ಬಿಡುಗಡೆಯಾಗಿದ್ದ ಬಸವರಾಜ್ ಜಂಗ್ಲಿ ಕಾನೂನಿನ ಲೋಪವನ್ನೇ ಹಿಡಿದುಕೊಂಡು ಪಾರಾಗುತ್ತಿದ್ದ.
ಬೇರೆ ಬೇರೆ ಕಾರುಗಳಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದುದರಿಂದ ಸಿಸಿಟಿವಿ ಸಾಕ್ಷ್ಯಗಳೂ ಕೈಹಿಡಿಯುತ್ತಿರಲಿಲ್ಲ. ಹೀಗಾಗಿ ಪ್ರತಿ ಬಾರಿ ಬಾಗಿಲು ಹಾಕ್ಕೊಂಡಿದ್ದ ಮನೆಗಳಿಂದ ಸೀಮಿತವಾಗಿ ಕದಿಯುವುದು ಮತ್ತು ಅಲ್ಲಿ ಯಾವುದೇ ಸಾಕ್ಷ್ಯ ಉಳಿಸಿಕೊಳ್ಳದೇ ಮುಂದಿನ ಬೇಟೆಗೆ ಇಳಿಯುತ್ತಿದ್ದ. ಎಲ್ಲವನ್ನೂ ಒಬ್ಬಂಟಿಯಾಗೇ ಮಾಡುತ್ತಿದ್ದರಿಂದ ಸುಳಿವು ಕಷ್ಟವಾಗಿತ್ತು. ಅಕಸ್ಮಾತ್ ಸಿಕ್ಕಿಬಿದ್ದರೂ, ಮನೆ ಕಳವು ಪ್ರಕರಣಗಳಲ್ಲಿ ಜಾಮೀನು ಕಷ್ಟವಾಗಲ್ಲ. ಅದಕ್ಕಾಗಿ ಲಾಯರನ್ನೂ ಇಟ್ಟುಕೊಳ್ತಿದ್ದ.
Bengaluru’s women protection wing of Central Crime Branch police today nabbed a house under-state thief from Hyderabad and seized the stolen gold jewelry worth Rs 80 lakh.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm