ಬ್ರೇಕಿಂಗ್ ನ್ಯೂಸ್
29-06-21 04:54 pm Mangalore Correspondent ಕ್ರೈಂ
ಮಂಗಳೂರು, ಜೂನ್ 29: ಕಣಚೂರು ಮೆಡಿಕಲ್ ಕಾಲೇಜಿಗೆಂದು ಮೂಲ್ಕಿ ಬಳಿಯ ಕಾರ್ನಾಡು, ಲಿಂಗಪ್ಪಯ್ಯ ಕಾಡು ಎಂಬಲ್ಲಿಂದ 50ಕ್ಕೂ ಹೆಚ್ಚು ಮಹಿಳೆಯರನ್ನು ಬಸ್ಸಿನಲ್ಲಿ ತುಂಬಿಸಿಕೊಂಡು ತೆರಳುತ್ತಿದ್ದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 27ರಂದು ರಾತ್ರಿ 8 ಗಂಟೆ ಸುಮಾರಿಗೆ ಕಣಚೂರು ಮೆಡಿಕಲ್ ಕಾಲೇಜಿನ ಬಸ್ಸಿನಲ್ಲಿ 50ಕ್ಕೂ ಹೆಚ್ಚು ಮಹಿಳೆಯರನ್ನು ತುಂಬಿಸಿ ಒಯ್ಯುತ್ತಿರುವುದನ್ನು ತಿಳಿದು ಸ್ಥಳೀಯರು ಆಕ್ಷೇಪಿಸಿದ್ದಾರೆ. ಬಸ್ಸಿನಲ್ಲಿ ಕಣಚೂರು ಮೆಡಿಕಲ್ ಕಾಲೇಜಿನ ಚಾಲಕ ಮತ್ತು ಒಬ್ಬರು ನರ್ಸ್ ಮಾತ್ರ ಇದ್ದು, ಅವರು ಕೊರೊನಾ ಲಸಿಕೆ ಹಾಕಿಸುವುದಕ್ಕಾಗಿ ಒಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಕಣಚೂರು ಮೆಡಿಕಲ್ ಕಾಲೇಜಿನ ಮ್ಯಾನೇಜರ್ ನವಾಜ್ ಇವರನ್ನು ಕರೆತರುವಂತೆ ತಿಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಆದರೆ, ರಾತ್ರಿ ವೇಳೆಗೆ ಇಷ್ಟೊಂದು ಮಂದಿಯನ್ನು ಲಸಿಕೆ ಹಾಕಿಸಲು ಒಯ್ಯುವ ಅಗತ್ಯವಿಲ್ಲ. ಅದರಲ್ಲೂ ಮುಲ್ಕಿಯ ಜನರನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯ ಏನಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಬಳಿಕ ಸ್ಥಳೀಯ ಪಂಚಾಯತ್ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆಸಿ, ಲಸಿಕೆ ನೆಪದಲ್ಲಿ ಇಷ್ಟೊಂದು ಜನರನ್ನು ಯಾವುದೇ ಅಂತರ ಇಲ್ಲದೆ, ಲಾಕ್ಡೌನ್ ಸಂದರ್ಭದಲ್ಲಿ ಒಯ್ಯುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಮೂಲ್ಕಿ ಪೊಲೀಸರಿಗೆ ಮಾಹಿತಿ ದೊರೆತು ಸ್ಥಳಕ್ಕೆ ತೆರಳಿದ್ದಾರೆ. ಕಾಲೇಜಿನ ಪರವಾಗಿ ಬಸ್ಸಿನಲ್ಲಿದ್ದ ಇಬ್ಬರು ಸಿಬಂದಿ ಸರಿಯಾದ ಮಾಹಿತಿ ನೀಡಲು ವಿಫಲರಾಗಿದ್ದರಿಂದ ಜನರನ್ನು ಬಸ್ಸಿನಿಂದ ಇಳಿಸಲಾಗಿದೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆ ಮತ್ತು ಲಸಿಕೆ ನೆಪದಲ್ಲಿ ಜನರನ್ನು ಇನ್ನಿತರ ಉದ್ದೇಶಕ್ಕೆ ಕರೆದೊಯ್ಯುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಬೆಡ್ ಭರ್ತಿ ದಂಧೆಯ ಕರಾಳ ಛಾಯೆ !
ಮೆಡಿಕಲ್ ಕಾಲೇಜುಗಳಿಗೆ ಆಯಾ ಸಂದರ್ಭಗಳಲ್ಲಿ ಉನ್ನತ ಮಟ್ಟದ ಇಲಾಖಾಧಿಕಾರಿಗಳು ಪರಿಶೀಲನೆಗೆ ಬರುತ್ತಾರೆ. ಈ ವೇಳೆ, ಬೆಡ್ ನಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇದ್ದರೆ, ಗ್ರೇಡ್ ಅಂಕ, ನ್ಯಾಕ್ ಶ್ರೇಯಾಂಕ ಲಭಿಸುವುದಿಲ್ಲ. ಅಲ್ಲದೆ, ರೋಗಿಗಳೇ ಇಲ್ಲದಿದ್ದರೆ ಮೆಡಿಕಲ್ ಕಾಲೇಜಿಗೆ ಆಸ್ಪತ್ರೆ ನಡೆಸುವ ಅರ್ಹತೆ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಕೆಲವು ಮೆಡಿಕಲ್ ಕಾಲೇಜುಗಳು ಇಲಾಖಾ ಅಧಿಕಾರಿಗಳು ಪರಿಶೀಲನೆಗೆ ಬರುವ ಸಂದರ್ಭದಲ್ಲಿ ಬೆಡ್ ಭರ್ತಿ ಆಗಿರುವುದನ್ನು ತೋರಿಸಲು ಕೃತಕವಾಗಿ ಬೆಡ್ ತುಂಬುವ ಕೆಲಸ ಮಾಡುತ್ತಾರೆಂಬ ಆರೋಪಗಳಿವೆ.
ಕಣಚೂರು ಮೆಡಿಕಲ್ ಕಾಲೇಜಿಗೆ ಈ ರೀತಿ ಕೂಲಿಯಾಳು ಮಹಿಳೆಯರನ್ನು ಒಟ್ಟು ಸೇರಿಸಿ, ಕೊಂಡೊಯ್ಯುತ್ತಿದ್ದ ಹುನ್ನಾರದ ಹಿಂದೆ ಇದೇ ರೀತಿಯ ಬೆಡ್ ಭರ್ತಿ ಮಾಡುವ ಉದ್ದೇಶ ಇತ್ತೇ ಎನ್ನುವ ಸಂಶಯ ಎದ್ದಿದೆ. ಲಸಿಕೆ ನೀಡುವ ನೆಪದಲ್ಲಿ ಮಹಿಳೆಯರನ್ನು ಒಯ್ದು ಬೆಡ್ಡಿನಲ್ಲಿ ಮಲಗಿಸಿ, ಇನ್ ಸ್ಪೆಕ್ಷನ್ ಮಾಡುವ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಹಿಡನ್ ಅಜೆಂಡಾ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ.
Locals and gram panchayat (GP) representatives of Nagabanahalli in Mulky raised objections over a bus from Kanachur medical institution taking 40 women in it in the night on Monday, June 28. Police commissioner N Shashi Kumar, addressing media on Tuesday, June 29, said, “Suspecting foul play, the locals objected and based on their complaint, the probe has been ordered and investigation in on.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm