ಬ್ರೇಕಿಂಗ್ ನ್ಯೂಸ್
29-06-21 03:42 pm Mangalore Correspondent ಕ್ರೈಂ
ಮಂಗಳೂರು, ಜೂನ್ 29: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಮತ್ತಿಬ್ಬರು ನೈಜೀರಿಯಾ ಮೂಲದ ಪ್ರಜೆಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಕೊಣಾಜೆ ಪೊಲೀಸರು ಒಬ್ಬ ನೈಜೀರಿಯನ್ನು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಡ್ರಗ್ಸ್ ಪೂರೈಕೆಯಾಗುತ್ತಿದ್ದ ಮೂಲವನ್ನು ಪತ್ತೆ ಮಾಡಿದ್ದಾರೆ.
ಬೆಂಗಳೂರಿನ ಬಿದರಹಳ್ಳಿ ಎಂಬಲ್ಲಿ ಟೀಶರ್ಟ್ ವ್ಯವಹಾರದ ನೆಪದಲ್ಲಿ ಉಳಿದುಕೊಂಡಿದ್ದ ಪೌಲ್ ಒಹಮೋಬಿ ಮತ್ತು ಉಚೆಚುಕು ಮಲಾಕಿ ಎಲಕ್ವಾಚಿ ಎಂಬವರು ಬಂಧಿತರು. ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದ ಇವರು, ಆಬಳಿಕ ಉದ್ಯೋಗದ ನೆಪದಲ್ಲಿ ಇಲ್ಲಿಯೇ ಉಳಿದುಕೊಂಡಿದ್ದರು. ಇವರ ವೀಸಾ ಅವಧಿಯೂ ಮುಗಿದಿದ್ದು, ಅಕ್ರಮವಾಗಿ ವಾಸ ಮಾಡಿಕೊಂಡಿದ್ದರು. ಇವರು ಎಂಡಿಎಂಎ ಡ್ರಗ್ಸ್ ಅನ್ನು ಉಪ್ಪಳ ಮೂಲದ ಪೆಡ್ಲರ್ ರಮೀಜ್ ಗೆ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಜೂನ್ 3ರಂದು 170 ಗ್ರಾಮ್ ಎಂಡಿಎಂಎ ಡ್ರಗ್ಸ್ ಮತ್ತು ನಾಲ್ವರನ್ನು ಕೋಣಾಜೆ ಪೊಲೀಸರು ಬಂಧಿಸಿದ್ದರು. ಅಂದು ಉಪ್ಪಳ ನಿವಾಸಿಗಳಾದ ಅಬ್ದುಲ್ ಮುನಾಫ್, ಮಹಮ್ಮದ್ ಮುಜಾಂಬಿಲ್, ಅಹಮ್ಮದ್ ಮಶೂಕ್ ಎಂಬವರನ್ನು ಬಂಧಿಸಲಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮತ್ತೆ ದಾಳಿ ಮುಂದುವರಿಸಿದ ಪೊಲೀಸರು ಜೂನ್ 13ರಂದು ಅಲ್ತಾಫ್ ಮತ್ತು ಶಫೀಕ್ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಅದರಂತೆ, ಕಾಸರಗೋಡು ಜಿಲ್ಲೆಯ ಉಪ್ಪಳ ಕೇಂದ್ರೀಕರಿಸಿ ಗಾಂಜಾ ಮತ್ತು ಡ್ರಗ್ಸ್ ಇಡೀ ಕೇರಳಕ್ಕೆ ಪೂರೈಕೆ ಆಗುತ್ತಿರುವುದು ತಿಳಿದುಬಂದಿತ್ತು.
ಕಾರ್ಯಾಚರಣೆ ಮುಂದುವರಿಸಿದ್ದ ಪೊಲೀಸರ ತಂಡ ಡ್ರಗ್ಸ್ ಜಾಲದ ಕಿಂಗ್ ಪಿನ್ ಎನ್ನಲಾಗಿರುವ ಉಪ್ಪಳ ಮೂಲದ ರಮೀಜ್ ಮತ್ತು ಆತನ ಜೊತೆಗಿದ್ದ ಸ್ಟ್ಯಾನಿ ಚಿಮಾ ಎಂಬ ನೈಜೀರಿಯಾ ಮೂಲದ ಒಬ್ಬನನ್ನು ಬಂಧಿಸಿತ್ತು. ಇವರಿಬ್ಬರಿಗೆ ಗಾಂಜಾ ಎಲ್ಲಿಂದ ಪೂರೈಕೆ ಆಗುತ್ತಿತ್ತು ಎನ್ನುವ ಮೂಲವನ್ನು ಪತ್ತೆ ಮಾಡಲು ತೆರಳಿದ ಸಂದರ್ಭ ಮತ್ತಿಬ್ಬರು ನೈಜೀರಿಯನ್ ಪ್ರಜೆಗಳು ಈಗ ಸಿಕ್ಕಿಬಿದ್ದಿದ್ದಾರೆ. ಡ್ರಗ್ಸ್ ಜಾಲದಲ್ಲಿ ಮತ್ತಷ್ಟು ಮಂದಿ ಇರುವ ಸಾಧ್ಯತೆ ಇದ್ದು, ಅವರನ್ನೂ ಪತ್ತೆ ಮಾಡಲಾಗುವುದು. ಅಲ್ಲದೆ, ಇಡೀ ಪ್ರಕರಣದ ತನಿಖೆಯ ಉಸ್ತುವಾರಿಯನ್ನು ದಕ್ಷಿಣ ಎಸಿಪಿ ರಂಜಿತ್ ಕುಮಾರ್ ಬಂಡಾರು ಅವರಿಗೆ ವಹಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಡಿಸಿಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಡ್ರಗ್ಸ್ ಪ್ರಕರಣದ ಮೂಲ ಪತ್ತೆ ಮಾಡುವ ಕಾರ್ಯಾಚರಣೆ ನಡೆದಿದ್ದು, ಈ ಮೂಲಕ ಮಹತ್ತರ ಯಶಸ್ಸನ್ನು ಮಂಗಳೂರು ಪೊಲೀಸರು ಸಾಧಿಸಿದ್ದಾರೆ.
ಡ್ರಗ್ಸ್ ಪ್ರಕರಣ ; ನೈಜೀರಿಯನ್ ಪ್ರಜೆಯನ್ನು ಬಂಧಿಸಿದ ಕೋಣಾಜೆ ಪೊಲೀಸರು
Inside story: ಡ್ರಗ್ ಕಿಂಗ್ ಪಿನ್ ಪಾಬ್ಲೋ ಎಸ್ಕೋಬಾರ್ ಆಗಲು ಹೊರಟಿದ್ನಾ ಉಪ್ಪಳದ ರಮೀಜ್ ?
ಕೊಣಾಜೆ ; ಬೆಂಗಳೂರಿನಿಂದ ತರುತ್ತಿದ್ದ 4 ಲಕ್ಷ ಎಂಡಿಎಂಎ ಡ್ರಗ್ಸ್ ವಶಕ್ಕೆ, ಇಬ್ಬರ ಬಂಧನ
The Mangalore city Police arrested two Nigerian nationals from Bengaluru in connection to the recent drug racket case where seven people were arrested and 235 gram MDMA was seized under Konaje station limits, taking the arrests in the case to nine.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm