ಬ್ರೇಕಿಂಗ್ ನ್ಯೂಸ್
26-06-21 05:36 pm Mangalore Correspondent ಕ್ರೈಂ
ಉಡುಪಿ, ಜೂನ್ 26: ಇಲ್ಲಿನ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟ್ರಕ್ ಚಾಲಕನಿಗೆ ಅಲ್ಲಿನ ಸಿಬಂದಿಯೇ ಸೇರಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಸೈಕ್ಲಿಸ್ಟ್ ಆಗಿರುವ ವ್ಯಕ್ತಿಯೊಬ್ಬ ಮೊಬೈಲಿನಲ್ಲಿ ಚಿತ್ರೀಕರಿಸಿ, ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.
ಯಾರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ತಿಳಿದುಬಂದಿಲ್ಲ. ಆದರೆ, ಆತ ಇಂಗ್ಲಿಷ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾನೆ. ನಾನು ಸೈಕಲ್ ನಲ್ಲಿ ಸಾಗುತ್ತಿದ್ದಾಗ, ಟೋಲ್ ಸಿಬಂದಿ ಲಾರಿ ಚಾಲಕನಿಗೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದೇನೆ. ಆದರೆ, ಅಲ್ಲಿನ ಸಿಬಂದಿ ನನ್ನನ್ನು ಪ್ರಶ್ನೆ ಮಾಡಿದ್ದು, ಹಲ್ಲೆ ನಡೆಸಲು ಮುಂದಾಗಿದ್ದಾರೆ. ವಿಡಿಯೋ ಡಿಲೀಟ್ ಮಾಡುವಂತೆ ಹೇಳಿ ಧಮ್ಕಿ ಹಾಕಿದ್ದಾರೆ. ಇಲ್ಲದಿದ್ದರೆ ಸೈಕಲ್ ಕೊಡುವುದಿಲ್ಲ ಎಂದು ಹೇಳಿ, ಸೈಕಲನ್ನು ತೆಗೆದಿಟ್ಟಿದ್ದರು.
ಅಲ್ಲಿಯೇ ಸ್ವಲ್ಪ ದೂರದಲ್ಲಿ ಹೊಯ್ಸಳ ಪೊಲೀಸರು ನಿಂತುಕೊಂಡಿದ್ದರು. ನಮ್ಮ ಜಗಳವನ್ನು ನೋಡಿ, ಪೊಲೀಸರು ಅಲ್ಲಿಗೆ ಬಂದಿದ್ದು ನಾನು ಅವರಿಗೆ ಘಟನೆಯನ್ನು ವಿವರಿಸಿದ್ದೇನೆ. ಅಲ್ಲದೆ, ನಾನೊಬ್ಬ ಮಾಧ್ಯಮದ ವ್ಯಕ್ತಿಯೆಂದು ಹೇಳಿದರೂ, ಪೊಲೀಸರು ಸಹಾಯಕ್ಕೆ ಬರಲಿಲ್ಲ. ಪೊಲೀಸರ ಎದುರಲ್ಲೇ ನನಗೆ ಟೋಲ್ ಸಿಬಂದಿ, ನೀನು ಎಲ್ಲಿ ಬೇಕಾದ್ರೂ ಕಂಪ್ಲೇಂಟ್ ಮಾಡು. ಏನೂ ಆಗುವುದಿಲ್ಲ ಎಂದು ಆವಾಜ್ ಹಾಕಿದ್ದಾಗಿ ಬರೆದುಕೊಂಡಿದ್ದಾನೆ. ಅಲ್ಲದೆ, ಟೋಲ್ ಸಿಬಂದಿ ಯಾರು ಕೂಡ ಮಾಸ್ಕ್ ಧರಿಸಿರಲಿಲ್ಲ. ಉಡುಪಿ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಜರುಗಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾನೆ. ಆದರೆ, ಈ ವಿಡಿಯೋ ಮಾಡಿದ್ದು ಯಾರೆಂದು ಗೊತ್ತಾಗಿಲ್ಲ. ವಿಡಿಯೋದಲ್ಲಿ ಟ್ರಕ್ ಚಾಲಕನಿಗೆ ಹಲ್ಲೆ ನಡೆಸುವುದು ದಾಖಲಾಗಿದೆ. ವಿಡಿಯೋ ಆಧರಿಸಿ, ಪೊಲೀಸರು ಸುಮೊಟೋ ಕೇಸು ದಾಖಲಿಸಿ ಟೋಲ್ ಸಿಬಂದಿಯ ಮೇಲೆ ಕ್ರಮ ಜರುಗಿಸಬಹುದು.
Video:
Udupi Hejamadi toll gate staffs assault truck driver over tag issue video goes viralಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸಿಬಂದಿಯ ಗೂಂಡಾಗಿರಿ ; ಲಾರಿ ಚಾಲಕನಿಗೆ ಹಲ್ಲೆ ವಿಡಿಯೋ ವೈರಲ್
Posted by Headline Karnataka on Saturday, June 26, 2021
Udupi Hejamadi toll gate staffs assault truck driver over tag issue video goes viral. A cyclist who was said to be recording the video also was threatened by the staff for shooting the video.
23-03-25 11:01 pm
Bangalore Correspondent
Basavaraj Horatti: ಹನಿಟ್ರ್ಯಾಪ್ ಸದ್ದು ; ವಿಧಾನ...
23-03-25 09:50 pm
Honey trap, Karnataka, Rajanna: ರಾಜ್ಯ ರಾಜಕೀಯದ...
23-03-25 06:02 pm
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
23-03-25 10:44 pm
Mangalore Correspondent
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm