ಬ್ರೇಕಿಂಗ್ ನ್ಯೂಸ್
19-06-21 01:05 pm Headline Karnataka News Network ಕ್ರೈಂ
Photo credits : News 18 Kannada
ಕೋಲಾರ, ಜೂನ್ 19: ನಿದ್ರೆ ಮಾಡುತ್ತಿದ್ದ ಅಪ್ಪನ ತಲೆ ಮೇಲೆ ರುಬ್ಬುವ ಗುಂಡು ಕಲ್ಲನ್ನು ಎತ್ತಿ ಹಾಕಿ ಮಗನೇ ಕೊಂದಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಅಂಬೇಡ್ಕರ್ ಪಾಳ್ಯದಲ್ಲಿ ನಡೆದಿದೆ.
65 ವರ್ಷದ ವೆಂಕಟೇಶ್ ಅವರನ್ನು ಪುತ್ರ ನವೀನ್ ಪ್ರಕಾಶ್ ಬೆಳಗ್ಗೆ 4 ಗಂಟೆ ಸಮಯದಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಬ್ಯಾಗ್ ಹಿಡಿದುಕೊಂಡು ಹೊರಗೆ ಹೋಗುತ್ತಿದ್ದ ಆರೋಪಿ ನವೀನ್ ಪ್ರಕಾಶ್ ನನ್ನ ಪಕ್ಕದ ಮನೆಯವರೇ ಹಿಡಿದು, ಕೈ ಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೃತ ವೆಂಕಟೇಶ್ ಅವರು ನಿವೃತ್ತ ಶಿಕ್ಷಕರಾಗಿದ್ದು, ಮಗ ಆರೋಪಿ ನವೀನ್ ಪ್ರಕಾಶ್ ಬಿ.ಟೆಕ್ ಓದಿ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಓಡಾಡಿಕೊಂಡಿದ್ದ.
ಬೆಳಗಿನ ಜಾವ ತಂದೆಯನ್ನೆ ಬರ್ಬರವಾಗಿ ಕೊಂದ ಬಳಿಕ ಪಾಪಿ ಮಗ ನವೀನ್ ಪ್ರಕಾಶ್ ವಿಕೃತವಾಗಿ ಸಂಭ್ರಮಿಸಿದ್ದಾರೆ. ಕಲ್ಲಿನ ಗುಂಡನ್ನು ತಲೆಯ ಮೇಲೆ ಹಾಕಿ ಕೊಲೆ ಮಾಡಿದ ನಂತರ ತಂದೆಯ ರಕ್ತವನ್ನು ಮೈ ಮೇಲೆ ಎರಚಿಕೊಂಡಿದ್ದಾನೆ. ಬಳಿಕ ಮುಖಕ್ಕೆ ರಕ್ತವನ್ನು ಬಳಿದುಕೊಂಡಿದ್ದು ಅಲ್ಲದೆ, ರಕ್ತವನ್ನ ಕುಡಿದುದ್ದಾಗಿ ಅಕ್ಕ ಪಕ್ಕದ ಮನೆಯವರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದರು. ನಂತರ ಮೃತ ವೆಂಕಟೇಶ್ ಅವರ ಅಂತ್ಯ ಸಂಸ್ಕಾರವನ್ನ ಸಂಬಂಧಿಕರು ನೆರವೇರಿಸಿದ್ದಾರೆ.
ಚನ್ನಾಗಿ ಓದಿಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ನವೀನ್, ಸದ್ಯ ಕೆಲಸಕ್ಕೆ ಹೋಗದೆ ಸುಮ್ಮನಿದ್ದ. 5 ವರ್ಷಗಳ ಹಿಂದೆ ಮದುವೆಯಾಗಿದ್ದ ನವೀನ್ 6 ತಿಂಗಳು ಮಾತ್ರ ಸಂಸಾರ ಮಾಡಿದ್ದ. ಈತನ ಕಾಟ ತಾಳಲಾರದೆ ಪತ್ನಿ ಈತನನ್ನು ತೊರೆದು ತವರು ಮನೆ ಸೇರಿದ್ದರು. ಈ ಬಗ್ಗೆ ತಂದೆ ಬುದ್ಧಿ ಮಾತು ಹೇಳಿದ್ದರಿಂದಲೇ ಕೆರಳಿದ ನವೀನ್ ಕೊಲೆ ಮಾಡಿದ್ದಾನೆ.
ತಂದೆ ಬುದ್ಧಿಮಾತು ಹೇಳಿದ್ದೇ ಮುಳುವಾಯಿತೇ ;
ಹೆಂಡತಿಯನ್ನು ಚನ್ನಾಗಿ ನೋಡಿಕೊಂಡಿಲ್ಲ ಎಂದು ತಂದೆ ಹಲವು ಬಾರಿ ಬೈದು ಜಗಳ ಮಾಡಿದ್ದಾರೆ. ನವೀನ್ ಸಹ ನನ್ನ ಸಂಸಾರವನ್ನ ನೀನು ಸರಿ ಮಾಡಲು ಪ್ರಯತ್ನವೇ ಪಟ್ಟಿಲ್ಲ, ನಿಮ್ಮಿಂದಲೇ ನನ್ನ ಹೆಂಡತಿ ಬಿಟ್ಟು ಹೋಗಿದ್ದಾಳೆ. ಎಲ್ಲರು ಹೆಂಡತಿ ವಿಚಾರವಾಗಿ ನನ್ನನ್ನೆ ಬೈಯ್ಯುತ್ತಾರೆ. ಇದಕ್ಕೆಲ್ಲಾ ನೀನೇ ಕಾರಣ ಎಂದು ಅಪ್ಪನೊಂದಿಗೆ ಜಗಳವಾಡಿದ್ದಾನೆ. ಸಂಬಂಧಿ ಲಾಯರ್ ಶಿವಣ್ಣ ಎನ್ನುವರು ನೀಡಿದ ಹೇಳಿಕೆ ಪ್ರಕಾರ, ನಿವೃತ್ತ ಶಿಕ್ಷಕ ವೆಂಕಟೇಶ್ ಅವರು ಸೌಮ್ಯ ಸ್ವಭಾವದವರಂತೆ. ಘಟನೆಯ ರಾತ್ರಿ 2 ಗಂಟೆ ವೇಳೆಯಲ್ಲಿ ನವೀನ್ ಪತ್ನಿ ಮೌನಿಕ ಹಾಗು ಅವರ ತಂದೆ, ನವೀನ್ ಜೊತೆಗೆ ಸುದೀರ್ಘವಾಗಿ ಮಾತನಾಡಿದ್ದಾನೆ. ನಿಮ್ಮಪ್ಪ ಬದುಕಿದ್ದರೆ ನನ್ನ ಮಗಳು ನಿನ್ನ ಮನೆಗೆ ಬರೋಲ್ಲ, ಎಂದು ಮೌನಿಕ ತಂದೆ ಹೇಳಿದ್ದಾರೆ. ಅದನ್ನೆ ನಂಬಿದ ನವೀನ್ ತನ್ನ ತಂದೆಯನ್ನೆ ಕೊಲೆ ಮಾಡಿದ್ದಾನೆಂದು ವಕೀಲ ಶಿವಣ್ಣ ಹೇಳಿಕೆ ನೀಡಿದ್ದಾರೆ.
Son kills father with grinder stone for advising him over married life in Kolar. He has been arrested by Kolar Police.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm