ಬ್ರೇಕಿಂಗ್ ನ್ಯೂಸ್
05-02-21 10:34 pm Mangaluru Correspondent ಕ್ರೈಂ
ಸುಳ್ಯ, ಫೆ.5: ಹಂದಿ ಬೇಟೆಗೆಂದು ಶಿಕಾರಿ ತೆರಳಿದ್ದ ವೇಳೆ ಕಾಡು ಪ್ರಾಣಿಗೆಂದು ಹಾರಿಸಿದ್ದ ಗುಂಡು ಜೊತೆಗಾರನಿಗೇ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಅರಂತೋಡು ಬಳಿಯ ಅರಣ್ಯ ವಿಭಾಗದ ಪೂಮಲೆ ಬೆಟ್ಟದಲ್ಲಿ ನಾಲ್ವರು ಶಿಕಾರಿಗೆ ತೆರಳಿದ್ದರು. ಕಾಡಿಗೆ ತಲುಪಿದ ಬಳಿಕ ಹಂದಿಯನ್ನು ಅಟ್ಟಿಸಲೆಂದು ನಾಲ್ಕು ಕಡೆಗೆ ತೆರಳಿದ್ದು ಈ ಪೈಕಿ ಸತ್ಯಮೂರ್ತಿ ಎಂಬಾತನ ಮೇಲೆ ಗುಂಡೇಟು ಬಿದ್ದಿದೆ. ಕಾಡು ಹಂದಿಯೆಂದು ಶಬ್ದ ಕೇಳಿಬಂದಿದ್ದ ಕಡೆಗೆ ಗುಂಡು ಹಾರಿಸಿದ್ದು ಅಲ್ಲಿ ಕುಳಿತಿದ್ದ ಸತ್ಯಮೂರ್ತಿ ಮೇಲೆ ಹಲವು ಸುತ್ತುಗಳ ಗುಂಡು ಬಿದ್ದಿತ್ತು. ನಾಡಕೋವಿಯ ಗುಂಡು ಎದೆ, ತಲೆಯ ಭಾಗಕ್ಕೆ ಗುಂಡು ಬೀಳದ ಕಾರಣ ಆತ ಸಾವಿನಿಂದ ಬಚಾವಾಗಿದ್ದಾನೆ. ಕೂಡಲೇ ಅಲ್ಲಿಂದ ಎತ್ತಿಕೊಂಡು ಬಂದು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಸಂಬಂಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಧಾಕೃಷ್ಣ (48) ಗಣೇಶ್ (35) ಮತ್ತು ಮೋನಪ್ಪ (50) ಬಂಧಿತರು. ಬೇಟೆಗೆ ತೆರಳಿದ್ದ ನಾಲ್ವರು ಕೂಡ ಅರಂತೋಡು ನಿವಾಸಿಗಳಾಗಿದ್ದಾರೆ.
Dakshina Kannada Police have arrested three persons in connection with alleged misfire during hunting.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm