ಮೊಮ್ಮಗನಿಂದಲೇ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಅಜ್ಜಿಯ ಸುಲಿಗೆ ; 5 ಲಕ್ಷ ಮೌಲ್ಯದ ಬಳೆ ಕಿತ್ತುಕೊಂಡು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ! 

17-08-26 09:39 pm       HK News Desk   ಕ್ರೈಂ

ಮೊಮ್ಮಗನೇ ತನ್ನ ಅಜ್ಜಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಎಳೆದೊಯ್ದು ಸುಲಿಗೆ ಮಾಡಿ ಪೊಲೀಸರ ತನಿಖೆಯಲ್ಲಿ ಸಿಕ್ಕಿದ್ದ ಘಟನೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತೆಂಕಕಜೆಕಾರು ಎಂಬಲ್ಲಿ ನಡೆದಿದೆ. 

ಬಂಟ್ವಾಳ, ಆ.17 ಮೊಮ್ಮಗನೇ ತನ್ನ ಅಜ್ಜಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಎಳೆದೊಯ್ದು ಸುಲಿಗೆ ಮಾಡಿ ಪೊಲೀಸರ ತನಿಖೆಯಲ್ಲಿ ಸಿಕ್ಕಿದ್ದ ಘಟನೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತೆಂಕಕಜೆಕಾರು ಎಂಬಲ್ಲಿ ನಡೆದಿದೆ. 

ಗ್ರಾಮದ ಉದ್ದದ ಗುಡ್ಡೆ ಎಂಬಲ್ಲಿ ಪ್ರಕರಣದ ಪಿರ್ಯಾದಿದಾರರಾದ ಸಾದಿಕ್‌ ಎಂಬವರ ತಾಯಿ ಅವ್ವಮ್ಮ (82) ಎಂಬವರು ಆಗಸ್ಟ್ 14ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಯಾರೋ ಅಪರಿಚಿತ ವ್ಯಕ್ತಿಯೋರ್ವ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ಬಂದು  ಪಿರ್ಯಾದಿದಾರರ  ತಾಯಿಯ ಎರಡು ಕೈಯಲ್ಲಿದ್ದ ಸುಮಾರು 5,00,000/- ಮೌಲ್ಯದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿದ್ದು, ಈ ವೇಳೆ ಸದ್ರಿಯವರ ಕೈಗೆ ರಕ್ತಗಾಯವಾಗಿರುವ ಬಗ್ಗೆ ಸಾದಿಕ್‌ ಎಂಬವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ಠಾಣಾ ಅ.ಕ್ರ: 70/2026, ಕಲಂ: 309(6) BNS- 2023 ರಂತೆ ಪ್ರಕರಣ ದಾಖಲಾಗಿರುತ್ತದೆ.

ಸದ್ರಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಗಸ್ಟ್ 16 ರಂದು ಪ್ರಕರಣದ ಆಪಾದಿತನಾದ ಹಾಗೂ ಸದ್ರಿ ಅವ್ವಮ್ಮ (82) ಎಂಬವರ ಮೊಮ್ಮಗನಾದ ಬಂಟ್ವಾಳ ತೆಂಕಕಜೆಕಾರು ನಿವಾಸಿ  ಶಬೀರ್ (33) ಎಂಬಾತನನ್ನು ಬಂಧಿಸಿ ಆತನಿಂದ ಎರಡು ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಲಾಗಿದೆ. 

ಪತ್ತೆ ಕಾರ್ಯದಲ್ಲಿ ಬೆಳ್ತಂಗಡಿ ಪೊಲೀಸ್‌ ಉಪಾಧೀಕ್ಷಕ ಶ್ರೀಮತಿ ರೋಹಿಣಿ ಸಿ.ಕೆ ಅವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್‌, ಪುಂಜಾಲಕಟ್ಟೆ ಠಾಣಾ ಪಿ.ಎಸ್‌.ಐ ರಾಜೇಶ್‌ ಕೆ.ವಿ, ಸಿಬ್ಬಂದಿಗಳಾದ ಎಎಸ್ಐ ಬೆನ್ನಿಚ್ಚನ್‌, ಪ್ರವೀಣ್‌ ಮೂರುಗೋಳಿ, ರಾಜೇಶ್‌, ವಿಜಯ್‌ ಕುಮಾರ್‌, ರಾಹುಲ್‌ ರಾವ್‌, ನಾಗರಾಜ್‌, ರಜಿತ್‌, ಬಸವರಾಜ್‌, ಸತೀಶ್, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್‌ ಮತ್ತು ಸಂಪತ್‌ ಕರ್ತವ್ಯ ನಿರ್ವಹಿಸಿರುತ್ತಾರೆ.