ಬ್ರೇಕಿಂಗ್ ನ್ಯೂಸ್
06-01-21 06:08 pm Mangalore Correspondent ಕ್ರೈಂ
Photo credits : DRA_MNG
ಮಂಗಳೂರು, ಜ.6: ದುಬೈನಿಂದ ಭಾರೀ ಪ್ರಮಾಣದ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ 12.30 ಕ್ಕೆ ಮಂಗಳೂರು ನಿಲ್ದಾಣಕ್ಕೆ ಆಗಮಿಸಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಇವರು ಆಗಮಿಸಿದ್ದರು. ಕಂದಾಯ ಇಲಾಖೆಯ ಗುಪ್ತಚರ ಅಧಿಕಾರಿಗಳು ತಪಾಸಣೆ ನಡೆಸಿದಾಗ ಇಬ್ಬರು ಯುವಕರ ಮೈಯಲ್ಲಿ ಚಿನ್ನದ ಅಂಶ ಇರುವುದು ಪತ್ತೆಯಾಗಿದೆ. ಬಂಧಿತರನ್ನು ಭಟ್ಕಳ ಮತ್ತು ಕಾಸರಗೋಡಿನ ನಿವಾಸಿಗಳು ಎಂದು ಪತ್ತೆ ಮಾಡಿದ್ದು ತಮ್ಮ ಹೆಸರು, ವಿಳಾಸವನ್ನು ಸರಿಯಾಗಿ ನೀಡಿಲ್ಲ ಎಂದು ಡಿಆರ್ ಐ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಪಾಸಣೆ ನಡೆಸಿದಾಗ, ಇಬ್ಬರು ಕೂಡ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಮೈಯೊಳಗೆ ಅಡಗಿಸಿಟ್ಟಿದ್ದು ಪತ್ತೆಯಾಗಿದೆ.

ಭಟ್ಕಳದ ವ್ಯಕ್ತಿ ತನ್ನ ಗುದ ದ್ವಾರದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಐದು ಉಂಡೆಗಳನ್ನಾಗಿಸಿ ತುರುಕಿಸಿದ್ದ. ಆತನಲ್ಲಿ ಒಟ್ಟು 809 ಗ್ರಾಂ ಭಾರದ ಐದು ಉಂಡೆಗಳಿದ್ದವು. ಅದನ್ನು ತಪಾಸಣೆಗೆ ಒಳಪಡಿಸಿದಾಗ 641 ಗ್ರಾಂ ಚಿನ್ನ ಪತ್ತೆಯಾಗಿದೆ.
ಕಾಸರಗೋಡಿನ ಯುವಕನ ಒಳಚಡ್ಡಿಯ ರಹಸ್ಯ ಜೇಬಿನಲ್ಲಿ ಚಿನ್ನ ಪತ್ತೆಯಾಗಿದೆ. ಜೇಬಿನಲ್ಲಿದ್ದ ಒಟ್ಟು 1008 ಗ್ರಾಂ ಭಾರದ ಪೇಸ್ಟ್ ನಲ್ಲಿ 646 ಗ್ರಾಂ ಚಿನ್ನ ಪತ್ತೆಯಾಗಿದೆ.
ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಆರೋಪಿಗಳು ಈ ತಂತ್ರ ಹೂಡಿದ್ದರು. ಇಬ್ಬರಲ್ಲಿ ಒಟ್ಟು 1.200 ಕೇಜಿ ಚಿನ್ನ ಸಿಕ್ಕಿದ್ದು 67 ಲಕ್ಷ ಮೌಲ್ಯದ್ದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಆರೋಪಿಗಳು ಭಟ್ಕಳ ಮತ್ತು ಕಾಸರಗೋಡಿನಲ್ಲಿ ಸಕ್ರಿಯವಾಗಿರುವ ಚಿನ್ನ ಸ್ಮಗ್ಲಿಂಗ್ ಗ್ಯಾಂಗ್ ಜೊತೆ ನಂಟು ಹೊಂದಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದುಬೈ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಲಿಂಕ್ ಇರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಲಾಕ್ಡೌನ್ ನಿರ್ಬಂಧಗಳನ್ನು ಲಾಭವಾಗಿಸ್ಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಅಧಿಕಾರಿಗಳು ಶಂಕಿಸಿದ್ದು ಲಾಕ್ಡೌನ್ ಬಳಿಕ ಕಳ್ಳ ಸಾಗಾಣಿಕೆ ಪ್ರಕರಣಗಳು ಹೆಚ್ಚಿರುವುದನ್ನು ಪತ್ತೆ ಮಾಡಿದ್ದಾರೆ.
Two Persons arrested at the Mangalore International Airport for allegedly trying to smuggle gold worth 67 lakhs into the country by hiding in rectum, a Customs official said Wednesday.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 09:38 pm
HK News Desk
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am