ಬ್ರೇಕಿಂಗ್ ನ್ಯೂಸ್
08-06-26 03:14 pm HK News Staffer ಕ್ರೈಂ
ಬೆಂಗಳೂರು, ಜೂನ್ 8: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 5 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿದ ಆರೋಪದಲ್ಲಿ ತಂದೆ -ಮಗಳನ್ನು ಬೆಂಗಳೂರು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳು ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದರಲ್ಲದೆ, ಟ್ರೇನಿಂಗ್ ಹೆಸರಲ್ಲಿ ಶುಲ್ಕ ಪಡೆಯುತ್ತಿದ್ದರು. ಕೆಲವರಿಗೆ ಆಕಾಂಕ್ಷಿಗಳ ವಿಶ್ವಾಸ ಗಳಿಸಲು ನಾಲ್ಕು ತಿಂಗಳ ಸಂಬಳವನ್ನು ಸಹ ನೀಡಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಎಂಬಿಎ ಪದವೀಧರೆಯಾದ ಶಂಶಾದ್ ಬೇಗಂ ಮತ್ತು ಆಕೆಯ ತಂದೆ ಎಂಎ ಮನ್ಸೂರ್ ಅಹ್ಮದ್ ಎಂದು ಗುರುತಿಸಲಾಗಿದೆ.
ಸಂಗಮೇಶ್ ರಾಚಯ್ಯ ವಸ್ತ್ರದ್ ಎಂಬವರು 2025ರ ನವೆಂಬರ್ 17ರಂದು ಸಿಸಿಬಿಗೆ ದೂರು ದಾಖಲಿಸಿದ್ದು, ತಂದೆ- ಮಗಳು ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ ಎಂದಿದ್ದಾರೆ. ನಿರುದ್ಯೋಗಿ ಮತ್ತು ವಿದ್ಯಾವಂತ ಯುವಕರಿಗೆ ತಮ್ಮ ಪ್ರಭಾವದ ಮೂಲಕ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದರು. ರೈಲ್ವೇ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಳ ಭರವಸೆ ನೀಡಿದ್ದರು. ಆದರೆ, ಹಣ ಸಂಗ್ರಹಿಸಿ ಯುವಕರಿಗೆ ವಂಚನೆ ಮಾಡಿದ್ದಾರೆ. ಉತ್ತರ ಕರ್ನಾಟಕದ 40ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಂದ ₹5.3 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. 2023 ಮತ್ತು 2025ರ ನಡುವೆ ನಡೆದಿದೆ ಎನ್ನಲಾದ ಹಣಕಾಸಿನ ವಹಿವಾಟುಗಳನ್ನು ಸಿಸಿಬಿ ಪೊಲೀಸರು ಪರಿಶೀಲಿಸಿದ್ದಾರೆ.
ವಿಜಯಪುರದಲ ಮೂಲದ ಒಬ್ಬರಿಗೆ ಮಾತ್ರ 2.5 ಕೋಟಿಗೂ ಹೆಚ್ಚು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳು ನಕಲಿ ನೇಮಕಾತಿ ಪತ್ರಗಳನ್ನು ನೀಡಿ, ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದರು ಎಂದು ತಿಳಿದುಬಂದಿದೆ. ಪ್ರತಿಯೊಬ್ಬರಿಂದ 5 ಲಕ್ಷದಿಂದ ರೂ. 10 ಲಕ್ಷ ವರೆಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ತನಿಖೆಯ ನಂತರ, ಪೊಲೀಸರು ಜೂನ್ 4 ರಂದು ಇಬ್ಬರನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಂಚನೆಯಲ್ಲಿ ಭಾಗಿಯಾಗಿರಬಹುದಾದ ಇತರ ಕುಟುಂಬ ಸದಸ್ಯರು ಮತ್ತು ಸಹಚರರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
31-07-26 01:22 pm
HK News Staffer
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ; ಸಂಸದ ಶಶಿಕಾಂತ...
29-07-26 01:52 pm
31-07-26 01:26 pm
HK News Staffer
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
31-07-26 10:58 pm
HK News Staffer
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
ಎಡಪದವು ಬಳಿ ಹೊಸ ಚತುಷ್ಪಥ ಹೆದ್ದಾರಿ ಕುಸಿತ ; 35 ಅಡ...
30-07-26 04:06 pm
31-07-26 10:53 pm
HK News Staffer
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm
Kundapura Murder, Latest Update: ಹಣಕಾಸು ದ್ವೇಷ...
31-07-26 08:30 pm
ಜೀವಾವಧಿ ಶಿಕ್ಷೆಗೀಡಾಗಿದ್ದ ವಿನಯ್ ಕುಲಕರ್ಣಿಗೆ ಹೈಕೋ...
31-07-26 06:01 pm
ಕಾವೂರಿನಲ್ಲಿ ಮದರಂಗಿ ಶಾಸ್ತ್ರದಲ್ಲಿ ತಲವಾರು ಏಟು ;...
31-07-26 02:21 pm