ಬ್ರೇಕಿಂಗ್ ನ್ಯೂಸ್
15-05-26 09:19 pm HK News Desk ಕ್ರೈಂ
ಮಂಗಳೂರು, ಮೇ 15ಚೈನ್ ಲಿಂಕ್ ನೆಟ್ವರ್ಕ್ ಬಿಸ್ನೆಸ್ ಹೆಸರಲ್ಲಿ ಜನರನ್ನು ಯಾಮಾರಿಸುವುದು, ಒಂದಷ್ಟು ದಿನಗಳ ಕಾಲ ಕಾಸಿನ ವ್ಯಾಪಾರ ಮಾಡಿ ಬಳಿಕ ಕಂಪನಿಯನ್ನೇ ಮುಚ್ಚಿ ನಾಪತ್ತೆಯಾಗುವುದು ಕರಾವಳಿ ಜಿಲ್ಲೆಗಳು ಸೇರಿದಂತೆ ಇಡೀ ದೇಶದಲ್ಲಿ ನಡೆಯುತ್ತಲೇ ಇದೆ. ಇಂಥದ್ದೇ ಮತ್ತೊಂದು ದೋಖಾ ಕಂಪನಿಯ ಮೋಸ ಈಗ ಬಯಲಾಗಿದ್ದು, ಕರಾವಳಿ ಜಿಲ್ಲೆಗಳ ಸಾವಿರಾರು ಜನರು ವಂಚನೆಗೆ ಬಿದ್ದು ಕೋಟ್ಯಂತರ ರೂಪಾಯಿ ಕಳಕೊಂಡಿದ್ದಾರೆಂಬ ಸುದ್ದಿ ಹಬ್ಬಿದೆ.
ಬಿಜಿ ವೆಲ್ತ್ ಷೇರಿಂಗ್ (BG Wealth Sharing) ಎನ್ನುವ ಹೆಸರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ, ಅದರ ಮೂಲಕ ಪರ್ಯಾಯ ರೂಪದಲ್ಲಿ ಹಣ ಗಳಿಕೆಯ ಬಗ್ಗೆ ನಂಬಿಸಲಾಗಿತ್ತು. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಕಳೆದೊಂದು ವರ್ಷದಲ್ಲಿ ಈ ನೆಟ್ವರ್ಕ್ ಬಿಸ್ನೆಸ್ ಭಾರೀ ಫೇಮಸ್ ಆಗಿದ್ದು ಹಣ ಇದ್ದವರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಈಗ ದಿಢೀರ್ ಎನ್ನುವಂತೆ ಕಂಪನಿ ಕಡೆಯಿಂದ ಸ್ಪಂದನೆ ಇಲ್ಲವಾಗಿದ್ದು, ಹಣ ಹೂಡಿಕೆ ಮಾಡಿದವರು ಕಂಗಾಲಾಗಿದ್ದಾರೆ.
ಮೇಲ್ನೋಟಕ್ಕೆ ಅಮೆರಿಕ, ಕೆನಡಾ ಮೂಲದ ಕಂಪನಿ ಎನ್ನಲಾಗುತ್ತಿದ್ದು, ಆಸ್ಟ್ರೇಲಿಯಾದಲ್ಲಿ ರಿಜಿಸ್ಟರ್ ಆಗಿ ಕ್ರಿಪ್ಟೋಕರೆನ್ಸಿ ಮೂಲಕ ವಹಿವಾಟು ನಡೆಸುತ್ತಿರುವುದಾಗಿ ಹೇಳಿಕೊಂಡು ಬಂದಿದೆ. ಚಿನ್ನ, ಕಚ್ಚಾತೈಲ, ಕ್ರಿಪ್ಟೋ ಕರೆನ್ಸಿಗಳ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಅವುಗಳ ಮೇಲಿನ ಹೂಡಿಕೆಯಿಂದ ಷೇರು ಮಾರ್ಕೆಟ್ ರೀತಿಯಲ್ಲೇ ಇಂತಿಷ್ಟು ಲಾಭ ನೀಡುತ್ತಿರುವುದಾಗಿ ಹೂಡಿಕೆದಾರರನ್ನು ನಂಬಿಸಲಾಗಿತ್ತು. ಉಡುಪಿ ಭಾಗದಲ್ಲಿ ಮೊದಲಿಗೆ ಪ್ರದೀಪ್ ಆಚಾರ್ಯ ಎಂಬವರು ಬಿಜಿ ವೆಲ್ತ್ ಷೇರಿಂಗ್ ಬಿಸ್ನೆಸ್ ಅನ್ನು ಪ್ರಚಾರ ಪಡಿಸಿದ್ದರು. ಆನಂತರ, ಉಡುಪಿ, ಮಂಗಳೂರು ಭಾಗದ ಓರಗೆಯ ಗೆಳೆಯರು ಕ್ರಿಪ್ಟೋ ಹೆಸರಲ್ಲಿ ಹೂಡಿಕೆ ಮಾಡುತ್ತ ಬಂದಿದ್ದರು.
ಡಾಲರ್ ಲೆಕ್ಕದಲ್ಲಿ ಹೂಡಿಕೆ ;
ಪೂರ್ತಿ ವಿದೇಶಿ ಕಂಪನಿಯಾಗಿದ್ದರಿಂದ ಡಾಲರ್ ಲೆಕ್ಕದಲ್ಲಿ ಇದರ ಹೂಡಿಕೆ, ಜೊತೆಗೆ ಎಲ್ಲವೂ ವಿದೇಶದಿಂದಲೇ ಕಂಟ್ರೋಲ್ ಇತ್ತು. ಕಂಪನಿ ಹೆಸರಲ್ಲಿ ಫೇಸ್ಬುಕ್ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಲಾಗಿದ್ದು, ಹೂಡಿಕೆ ಹೇಗೆ, ಲಾಭ ಗಳಿಕೆ ಹೇಗೆ ಎನ್ನುವ ಬಗ್ಗೆ ಮಾಹಿತಿಗಳನ್ನು ನೀಡಲಾಗಿತ್ತು. ಕನಿಷ್ಠ 300 ಡಾಲರ್ ಹೂಡಿಕೆ, ಹೆಚ್ಚು ಎಷ್ಟು ಬೇಕಾದರೂ ಮಾಡಬಹುದೆಂದು ತಿಳಿಸಲಾಗಿತ್ತು. 300 ಡಾಲರ್ ನಷ್ಟು ಹೂಡಿಕೆ ಮಾಡಿದರೆ ದಿನಕ್ಕೆ 3-4 ಡಾಲರ್ ಲಾಭ ಬರುತ್ತದೆ, ಇದರ ಜೊತೆಗೆ ಹೆಚ್ಚುವರಿ ಹೂಡಿಕೆದಾರರನ್ನು ಸೇರಿಸಿದರೆ ಹತ್ತು ಪರ್ಸೆಂಟ್ ಕಮಿಷನ್ ಬರುತ್ತದೆ ಎಂದು ತಿಳಿಸಲಾಗಿತ್ತು. ಇದೇ ಪ್ರಕಾರ, ಹೆಚ್ಚಿನವರಿಗೆ ರಿಟರ್ನ್ಸ್ ಬರುತ್ತಿತ್ತು ಎಂದು ಹೂಡಿಕೆ ಮಾಡಿದವರು ಹೇಳುತ್ತಾರೆ.


ಕುಳಿತಲ್ಲೇ ಲಾಭಕ್ಕೆ ಹೋಗಿ ಗುನ್ನಾ!
ಕ್ರಿಪ್ಟೋ ವ್ಯಾಲೆಟ್ ನಲ್ಲಿ ಹೂಡಿಕೆಯ ಮಾಹಿತಿ ಮತ್ತು ಷೇರು ಮಾರುಕಟ್ಟೆಯ ರೀತಿ ಏರಿಳಿತಗಳನ್ನು ಏಪ್ ನಲ್ಲಿ ತೋರಿಸುತ್ತಿದ್ದರು. ಒಬ್ಬ ಹೂಡಿಕೆ ಮಾಡಿದರೆ, ಆತನ ಹೆಸರಲ್ಲಿ ಹೊಸ ಕೋಡ್ ಏಕ್ಟಿವ್ ಮಾಡುತ್ತಿದ್ದರು. ದಿನವೂ ರಿಟರ್ನ್ಸ್ ಬರುತ್ತಿರುವುದನ್ನು ನೋಡಿ ಬೇರೆ ಬೇರೆ ನೆಟ್ವರ್ಕ್ ವ್ಯವವಹಾರದಲ್ಲಿ ತೊಡಗಿಸಿದ್ದವರು ಹೂಡಿಕೆ ಮಾಡಲಾರಂಭಿಸಿದ್ದರು. ಎಲ್ಲವೂ ಎಐ ಜನರೇಟೆಡ್ ಏಪ್ ನಲ್ಲಿ ವ್ಯವಹಾರ ನಡೆಯುತ್ತಿತ್ತು. ಭಾರತದ ರೂಪಾಯಿ ಕರೆನ್ಸಿಯನ್ನು ಡಾಲರಿಗೆ ಪರಿವರ್ತಿಸಿ ಕಂಪನಿಗೆ ಹೂಡಿಕೆ ಮಾಡುತ್ತಿದ್ದರೂ, ಇದನ್ನು ಯಾರು ನಿಯಂತ್ರಣ ಮಾಡುತ್ತಿದ್ದಾರೆ, ಇದು ನಿಜಕ್ಕೂ ಭಾರತದ ಕಾನೂನು ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿದೆಯಾ ಎನ್ನುವ ಬಗ್ಗೆ ಯಾರೂ ಚಿಂತಿಸಿರಲಿಲ್ಲ. ಕೆಲವರು ಅಪನಂಬಿಕೆಯಲ್ಲೇ ಹೂಡಿಕೆ ಮಾಡಿದ್ದರೆ, ಕೆಲವರು ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಬರುತ್ತದೆಯೆಂದು ಹೆಚ್ಚೆಚ್ಚು ಮೊತ್ತವನ್ನು ವ್ಯಾಲೆಟ್ ಗೆ ಹಾಕಿದ್ದರು.
ಈಗ ಕಟ್ಟಿದ ಹಣವನ್ನಾದರೂ ಹಿಂತಿರುಗಿಸಲು ಮನವಿ ಮಾಡಿದರೆ 20 ಶೇ. ಟ್ಯಾಕ್ಸ್, 12 ಶೇ. ಶುಲ್ಕ ಸೇರಿ 32 ಶೇ. ಹೆಚ್ಚುವರಿ ಮೊತ್ತವನ್ನು ಕಟ್ಟಲು ಸೂಚಿಸಲಾಗಿದೆಯಂತೆ. ಮಂಗಳೂರಿನ ವ್ಯಕ್ತಿಯೊಬ್ಬರು ಇದೇ ಪ್ರಕಾರ, 7 ಲಕ್ಷ ರೂ. ಟ್ಯಾಕ್ಸ್ ಕಟ್ಟಿದರೂ ತಾನು ಕಟ್ಟಿದ ಹಣ ಬಂದಿಲ್ಲ ಎಂದು ನೊಂದುಕೊಂಡಿದ್ದಾರೆ. ಇದೇ ರೀತಿ ಹಲವಾರು ಮಂದಿ ಹೂಡಿಕೆ ಮಾಡಿದ್ದು ಗರಿಷ್ಠ ಲಾಭಕ್ಕೆ ಹೋಗಿ ಗುನ್ನಾ ತೋಡಿಕೊಂಡಿದ್ದಾರೆ. ಪಕ್ಕಾ ವಿದೇಶಿ ಕಂಪನಿ ಮತ್ತು ಭಾರತಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲದಿರುವುದರಿಂದ ಪೊಲೀಸ್ ಕೇಸು ಕೊಡುವುದಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ.
ಗೂಗಲ್ ನಲ್ಲಿ ಮಾಹಿತಿ ಕೇಳಿದರೆ, ಅಮೆರಿಕದಲ್ಲಿ ಈ ಕಂಪನಿಯ ವೆಬ್ ಸೈಟ್ ಸೀಜ್ ಮಾಡಲಾಗಿದ್ದು, 150 ಮಿಲಿಯನ್ ಡಾಲರ್ ವಹಿವಾಟು ಆಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದಲ್ಲದೆ, 41 ಮಿಲಿಯನ್ ಡಾಲರ್ ಮೊತ್ತವನ್ನು ಅಮೆರಿಕದ ತನಿಖಾ ಏಜನ್ಸಿಗಳು ಸೀಜ್ ಮಾಡಿರುವುದಾಗಿ ಮಾಹಿತಿ ಇದೆ. ಈಗ ಹಾಕಿರುವ ಹಣ ಹಿಂತೆಗೆಯಲು 12 ಶೇ. ಶುಲ್ಕದ ಹೆಸರಲ್ಲಿ ಗ್ರಾಹಕರನ್ನು ಮತ್ತೊಮ್ಮೆ ಯಾಮಾರಿಸುವ ಯತ್ನ ಆಗುತ್ತಿರುವುದಾಗಿಯೂ ಅಮೆರಿಕದ ಮಾಧ್ಯಮಗಳು ಹೇಳುತ್ತಿವೆ.
Yet another alleged network-link investment scam has surfaced in the coastal districts, where thousands of investors are feared to have lost crores of rupees after investing in a foreign crypto-based platform called “BG Wealth Sharing.”
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am