ಬ್ರೇಕಿಂಗ್ ನ್ಯೂಸ್
22-04-26 08:41 pm HK News Staffer ಕ್ರೈಂ
ಪಡುಬಿದ್ರೆ, ಎಪ್ರಿಲ್ 22: ಖಾಸಗಿ ಬಸ್ಸಿನ ಧಾವಂತಕ್ಕೆ ತಂದೆ - ಮಗಳು ಪ್ರಯಾಣಿಸುತ್ತಿದ್ದ ಸ್ಕೂಟರ್ ಸಿಲುಕಿದ್ದರಿಂದ ಎಂಟು ವರ್ಷದ ಪ್ರತಿಭಾನ್ವಿತ ಬಾಲಕಿ ದುರಂತ ಸಾವನ್ನಪ್ಪಿದ ಘಟನೆ ಪಡುಬಿದ್ರೆ ಬಳಿಯ ಕಾಪು ಪೇಟೆಯಲ್ಲಿ ನಡೆದಿದೆ.
ದುಬೈನಲ್ಲಿದ್ದು ಊರಿಗೆ ಮರಳಿದ್ದ ನಿತ್ಯಾನಂದ ಶೆಟ್ಟಿ ಮಗಳ ಜೊತೆಗೆ ಸ್ಕೂಟರಿನಲ್ಲಿ ಕಾಪು ಪೇಟೆಗೆ ಬಂದಿದ್ದರು. ಈ ವೇಳೆ, ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಬಂದ ಉಡುಪಿ- ಮಂಗಳೂರು ಎಕ್ಸ್ಪ್ರೆಸ್ ಬಸ್ ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಇದರಿಂದ ತಂದೆಯೊಂದಿಗೆ ಹಿಂಬದಿ ಕುಳಿತಿದ್ದ ಬಾಲಕಿ ಸ್ವಾತಿ ಶೆಟ್ಟಿ (8) ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾಳೆ. ನಿತ್ಯಾನಂದ ಶೆಟ್ಟಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದುಬೈಯಲ್ಲಿ ವಾಸವಿದ್ದ ನಿತ್ಯಾನಂದ ಶೆಟ್ಟಿ ಮುಂದೆ ಊರಿನಲ್ಲೇ ನೆಲೆಸುವುದಕ್ಕಾಗಿ ಸಿದ್ಧತೆಯಲ್ಲಿದ್ದರು. ಮಗಳು ಸ್ವಾತಿಯನ್ನು ಉಡುಪಿಯ ಖಾಸಗಿ ಶಾಲೆಯಲ್ಲಿ ಸೇರ್ಪಡೆಗೊಳಿಸಿದ್ದರು. ಪತ್ನಿ, ಮಗಳನ್ನು ಬಿಟ್ಟು ಎರಡು ದಿನದಲ್ಲಿ ನಿತ್ಯಾನಂದ ಶೆಟ್ಟಿ ಮಾತ್ರ ದುಬೈಗೆ ತೆರಳುವವರಿದ್ದರು. ಈ ನಡುವೆ, ಕಾಪು ಪೇಟೆಗೆ ಸ್ಕೂಟರ್ ನಲ್ಲಿ ಬಂದು ವಾಪಾಸಾಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ.
ನಿತ್ಯಾನಂದ ಶೆಟ್ಟಿ ಕಾಪು ಬಳಿಯ ಪೂವಣಿಗುತ್ತು ಮನೆ ನಿವಾಸಿಯಾಗಿದ್ದು ಅಲ್ಲಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿ ಅಪಘಾತ ನಡೆದಿದೆ. ಸ್ವಾತಿ ಶೆಟ್ಟಿ ಸಣ್ಣ ವಯಸ್ಸಿನಲ್ಲೇ ಪರಿಸರದಲ್ಲಿ ಆಕರ್ಷಕ ವ್ಯಕ್ತಿತ್ವ ಬೆಳೆಸಿಕೊಂಡಿದ್ದಳು. ಬಂಟರ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಂಧುಗಳ ಗಮನ ಸೆಳೆದಿದ್ದಳು. ಆದರೆ ದುರ್ವಿಧಿ ಬೇರೆಯದ್ದೇ ಬಗೆದಿದ್ದು ಅಪಘಾತದಲ್ಲಿ ಸಾವು ಕಂಡಿದ್ದು ಕುಟುಂಬಸ್ಥರು ಮತ್ತು ಪರಿಸರದ ಜನರಿಗೆ ಆಘಾತ ಮೂಡಿಸಿದೆ. ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಧಾವಂತದ ಚಾಲನೆಯಿಂದಾಗಿ ಘಟನೆ ನಡೆದಿದ್ದು ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am