ಬ್ರೇಕಿಂಗ್ ನ್ಯೂಸ್
11-04-26 03:09 pm Mangalore Correspondent ಕ್ರೈಂ
ಮಂಗಳೂರು, ಎಪ್ರಿಲ್ 11: ಯುವಕನೊಬ್ಬ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಯುವತಿಯ ಪ್ರೇಮಪಾಶಕ್ಕೆ ಬಿದ್ದು ಕೊನೆಗೆ ಅದೇ ಹುಚ್ಚಿನಲ್ಲಿ ಹುಡುಗಿಯ ದುರುಳತನಕ್ಕೆ ಬಲಿಯಾದ ಘಟನೆ ನಡೆದಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರೇಮದ ನಾಟಕವಾಡಿದ ಯುವತಿ ಮತ್ತು ಆಕೆಯ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾರ್ಚ್ 21ರ ಮಧ್ಯರಾತ್ರಿ ಕುಟುಂಬಸ್ಥರೆಲ್ಲ ಈದ್ ಸಂಭ್ರಮದಲ್ಲಿದ್ದರೆ, ಮಂಗಳೂರಿನ ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್(22) ಎಂಬ ಯುವಕ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದ. ಮೊದಲಿಗೆ ಆತ್ಮಹತ್ಯೆಯೆಂದಷ್ಟೇ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಯುವಕನ ಮೊಬೈಲ್ ಚಾಟಿಂಗ್ ನೋಡುತ್ತಲೇ ಕುಟುಂಬಸ್ಥರಿಗೆ ಶಾಕಿಂಗ್ ಪ್ರೇಮ ಪ್ರಕರಣ ಗೊತ್ತಾಗಿದೆ.
ಮಹಮ್ಮದ್ ಆಶಿಕ್ ತನ್ನ ಕಾಲೇಜು ಸಹಪಾಠಿ ಉಳ್ಳಾಲ ಮೂಲದ ಸಮೀಮಾ ಎಂಬ ಸುಂದರಾಂಗಿ ಯುವತಿಯನ್ನು ಪ್ರೀತಿಸುತ್ತಿದ್ದು, ಇಬ್ಬರೂ ಸಾಕಷ್ಟು ಸುತ್ತಾಟವನ್ನೂ ನಡೆಸಿದ್ದಾರೆ. ಪದವಿ ಪೂರೈಸಿದ ಬಳಿಕ ಆಶಿಕ್ ತನ್ನ ಮಾವನ ಜೊತೆಗೆ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರೂ ಸಮೀಮಾ ಜೊತೆಗೆ ಸುತ್ತಾಡುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಸಮೀಮಾ ಆಶಿಕ್ ನಿಂದ ದೂರವಾಗತೊಡಗಿದ್ದು ಇನ್ನೊಬ್ಬ ಹುಡುಗನ ಸಖ್ಯ ಬೆಳೆಸಿಕೊಂಡಿದ್ದಳು. ಇದರ ಬಗ್ಗೆ ಆಶಿಕ್ ಮತ್ತು ಸಮೀಮಾ ಮಧ್ಯೆ ವೈಮನಸ್ಸು ಉಂಟಾಗಿ ವಾಗ್ಯುದ್ಧ ಆಗುತ್ತಲೇ ಇತ್ತು.
ಈದ್ ದಿನವೇ ಸಾವು ತಂದುಕೊಂಡ !
ಮಾರ್ಚ್ 21ರಂದು ಆಶಿಕ್ ತಂದೆ ಮಹಮ್ಮದ್ ಹನೀಫ್ ಮತ್ತು ಎಲ್ಲ ಕುಟುಂಬಸ್ಥರು ಸೇರಿ ಈದ್ ಹಬ್ಬದ ಸಂಭ್ರಮಕ್ಕಾಗಿ ಕಾಸರಗೋಡಿಗೆ ತೆರಳಿದ್ದರು. ಆನಂತರ, ರಾತ್ರಿ ಒಂದು ಗಂಟೆ ವೇಳೆಗೆ ಮರಳಿದ್ದು ಹನೀಫ್, ಪತ್ನಿ ಮತ್ತು ಮಗಳು ಕಾವೂರಿನ ಭಾವನ ಮನೆಯಲ್ಲೇ ಉಳಿದುಕೊಂಡಿದ್ದರೆ, ಮಗ ಆಶಿಕ್ ಮೂಡುಶೆಡ್ಡೆಯ ತನ್ನ ಮನೆಗೆ ತೆರಳಿದ್ದ. ಅದೇ ಸಂದರ್ಭದಲ್ಲಿ ನಾವು ಬೆಂಗಳೂರಿಗೆ ಸ್ನೇಹಿತರೊಂದಿಗೆ ಹೋಗಲಿಕ್ಕಿದೆ ಎಂದೂ ಆಶಿಕ್ ಹೇಳಿದ್ದ. ರಾತ್ರಿ ಬೇಡ, ಬೆಳಗ್ಗೆ ಬೇಗ ಎದ್ದು ಹೋಗುವಂತೆ ಹಿರಿಯರು ಸಲಹೆ ಮಾಡಿದ್ದರು. ಆಯ್ತು ಎಂದು ಒಪ್ಪಿಕೊಂಡು ಆಶಿಕ್ ಮನೆಗೆ ತೆರಳಿದ್ದ.
ತಡರಾತ್ರಿ 2 ಗಂಟೆ ವೇಳೆಗೆ ಆಶಿಕ್ ಜೊತೆಗೆ ಬೆಂಗಳೂರಿಗೆ ಹೋಗಲಿಕ್ಕಿದ್ದ ಸ್ನೇಹಿತ ನಿಯಾಬ್ ಹಲವು ಬಾರಿ ಕರೆ ಮಾಡಿದ್ದ. ರಿಸೀವ್ ಮಾಡದೇ ಇದ್ದುದರಿಂದ ಆಶಿಕ್ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದು ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಹೇಳಿ ಮನೆಗೆ ಹೋಗಿ ಚೆಕ್ ಮಾಡುವಂತೆ ತಿಳಿಸಿದ್ದ. ಬಳಿಕ ಮನೆಯವರು ಬಂದು ನೋಡಿದರೆ ಮನೆ ಒಳಗಿಂದ ಲಾಕ್ ಆಗಿತ್ತು. ಒಳಗೆ ನೋಡಿದಾಗ, ಆಶಿಕ್ ತನ್ನ ಲುಂಗಿಯನ್ನೇ ಫ್ಯಾನಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿತ್ತು.
ಎರಡು ದಿನ ಕಳೆದು ಆಶಿಕ್ ಮೊಬೈಲ್ ಚೆಕ್ ಮಾಡಿದಾಗ ಆಘಾತಕಾರಿ ಮಾಹಿತಿಗಳು ಹೊರಬಬಂದಿದ್ದವು. ಸಮೀಮಾ ಜೊತೆಗಿನ ಲವ್ ಮ್ಯಾಟರ್ ಎರಡು ಮನೆಯವರಿಗೂ ಗೊತ್ತಿತ್ತು. ಆದರೆ ಸಾವನ್ನಪ್ಪಿದ ದಿನ ಸಮೀಮಾ ಜೊತೆಗೆ ವಿಡಿಯೋ ಕರೆ ಮಾಡಿರುವುದು, ಸಾಕಷ್ಟು ಮಾತುಕತೆ ನಡೆಸಿರುವುದು ಮೊಬೈಲಿನಲ್ಲಿ ದಾಖಲಾಗಿತ್ತು. ಈ ವೇಳೆ, ಸಮೀಮಾ ಅಶ್ಲೀಲ ಮತ್ತು ಕೆಟ್ಟದಾಗಿ ಆಶಿಕ್ ಬಗ್ಗೆ ಮಾತನಾಡಿರುವುದು ದಾಖಲಾಗಿದೆ. ಇದರಂತೆ, ಆಶಿಕ್ ತಂದೆ ಮಹಮ್ಮದ್ ಹನೀಫ್ ಕಾವೂರು ಠಾಣೆಗೆ ದೂರು ನೀಡಿದ್ದು ಮಗನ ಸಾವಿಗೆ ಸಮೀಮಾಳ ಕಿರುಕುಳವೇ ಕಾರಣವೆಂದು ಆರೋಪಿಸಿದ್ದಾರೆ.
ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂದು ತುಂಬಾ ನೊಂದುಕೊಂಡು ಆಶಿಕ್ ಮಾತನಾಡಿದ್ದರೆ, ಇದಕ್ಕೆ ಪ್ರತಿಯಾಗಿ ಸಮೀಮಾ ನೀನು ಎಲ್ಲಿಯಾದರೂ ಹೋಗಿ ಸಾಯಿ, ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಹೇಳಿರುವುದಲ್ಲದೆ, ಅಶ್ಲೀಲ ಮತ್ತು ಹೇಳಲು ನಾಚಿಕೆಪಡುವಂತಹ ಭಾಷೆಯಲ್ಲಿ ನಿಂದಿಸಿದ್ದಾಳೆ. ಇದೇ ನೋವಿನಲ್ಲಿ ಆಶಿಕ್ ಸಾವಿಗೆ ಶರಣಾಗಿದ್ದು, ಇದಕ್ಕೆ ಆಕೆಯ ಪ್ರಚೋದನೆಯೇ ಕಾರಣ ಎಂದು ದೂರಿನಲ್ಲಿ ಮಹಮ್ಮದ್ ಹನೀಫ್ ತಿಳಿಸಿದ್ದಾರೆ. ಕಾವೂರು ಠಾಣೆಯಲ್ಲಿ ಸಮೀಮಾ, ಆಕೆಯ ತಾಯಿ ಮತ್ತು ಮತ್ತೊಬ್ಬ ಅಪರಿಚಿತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am