ಬ್ರೇಕಿಂಗ್ ನ್ಯೂಸ್
07-04-26 10:15 pm HK News Staffer ಕ್ರೈಂ
ಮಂಗಳೂರು, ಎಪ್ರಿಲ್ 7: ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಕುಖ್ಯಾತ ರೌಡಿ ಮನೋಜ್ ಕೋಡಿಕೆರೆ ಮತ್ತು ಚೇತನ್ ಪಡೀಲ್ ಬಂಧನಕ್ಕಾಗಿ ಉಡುಪಿ ಪೊಲೀಸರು ಬಲೆ ಬೀಸಿದ್ದಾರೆ. ಕೆ-ಕೋಕಾ ಕಾಯ್ದೆಯಡಿ ಇವರ ಮೇಲೆ ಕೇಸು ದಾಖಲಿಸಿರುವ ಪೊಲೀಸರು ಇಬ್ಬರ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಸುರತ್ಕಲ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಮನೋಜ್ ಕೋಡಿಕೆರೆ ಹಾಗೂ ಚೇತನ್ ಪಡೀಲ್ ವಿರುದ್ಧ ಇತ್ತೀಚೆಗೆ ಉಡುಪಿ ಜಿಲ್ಲೆಯ ಕೋಟ ಪೊಲೀಸರು ಅಪಹರಣ ಮತ್ತು ಹಫ್ತಾ ವಸೂಲಿ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದ್ದರೂ, ಸೂತ್ರಧಾರರು ಎನ್ನಲಾದ ಮನೋಜ್ ಮತ್ತು ಚೇತನ್ ಪಡೀಲ್ ತಲೆಮರೆಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಕೆ-ಕೋಕಾ ಅಡಿ ಕೇಸು ದಾಖಲಿಸಲಾಗಿತ್ತು. ಮನೋಜ್ ವಿರುದ್ಧ 20 ಕೇಸುಗಳಿದ್ದರೆ, ಚೇತನ್ ಪಡೀಲ್ 13 ಕೇಸುಗಳನ್ನು ಎದುರಿಸುತ್ತಿದ್ದಾನೆ.
ಕೋಟ ಠಾಣೆಯಲ್ಲಿ ಸಿದ್ದಾಪುರ ನಿವಾಸಿ ಉದ್ಯಮಿ ಮೋಹನದಾಸ ಶೆಟ್ಟಿ ಎಂಬವರು ತನ್ನ ಮಗನನ್ನು ಕಿಡ್ನಾಪ್ ಮಾಡಿ 50 ಲಕ್ಷ ಹಣಕ್ಕೆ ಬೇಡಿಕೆ ಇರಿಸಿದ್ದಾರೆಂದು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು. ದೂರಿನ ಪ್ರಕಾರ, ಮೋಹನ್ ದಾಸ್ ಶೆಟ್ಟಿಯವರ ಪುತ್ರ ತೇಜಸ್ 2025ರ ನವೆಂಬರ್ 19ರಂದು ಸಾಸ್ತಾನ ಟೋಲ್ ಗೇಟ್ ಬಳಿಯಿಂದ ಕಿಡ್ನಾಪ್ ಆಗಿದ್ದ. ತನ್ನ ಸ್ನೇಹಿತ ಪ್ರಜ್ವಲ್ ಗೆ ವಾಟ್ಸಪ್ ಕರೆ ಮಾಡಿದ್ದ ತೇಜಸ್ ತನ್ನನ್ನು ಸಾಸ್ತಾನ ಟೋಲ್ ಗೇಟ್ ಬಳಿಯಲ್ಲಿ ಯಾರೋ ಅಪರಿಚಿತರು ಕಿಡ್ನಾಪ್ ಮಾಡಿದ್ದಾರೆ ಎಂದು ಹೇಳಿದ್ದ. ಸಾಸ್ತಾನದಲ್ಲಿ ಆತನ ಫಾರ್ಚುನರ್ ಕಾರು ಪತ್ತೆಯಾಗಿದ್ದು, ಅದರ ಅಡಿಯಲ್ಲಿ ಕಾರಿನ ಕೀ ಪತ್ತೆಯಾಗಿತ್ತು.

ಪ್ರಜ್ವಲನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಕರೆ ಮಾಡಿದ್ದ ತೇಜಸ್ ತನ್ನನ್ನು ಮನೋಜ್ ಕೋಡಿಕೆರೆ ತಂಡದ 3-4 ಮಂದಿ ಅಪರಿಚಿತರು ಕಿಡ್ನಾಪ್ ಮಾಡಿರುವ ಬಗ್ಗೆ ಹೇಳಿದ್ದ. ಅಲ್ಲದೆ, ತೇಜಸ್ ಮೊಬೈಲಿನಿಂದ ವಾಟ್ಸಪ್ ಕರೆ ಮಾಡಿದ್ದ ಅಪಹರಣಕಾರರು ಕೂಡಲೇ 50 ಲಕ್ಷ ಏರ್ಪಾಡು ಮಾಡಬೇಕು, ಇಲ್ಲದಿದ್ದರೆ ತೇಜಸನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆನಂತರ, ತಮ್ಮ ಬೇಡಿಕೆಯನ್ನು 3 ಕೋಟಿಗೆ ಹೆಚ್ಚಿಸಿದ್ದಲ್ಲದೆ, ಪದೇ ಪದೇ ಕೊಲ್ಲುವ ಬೆದರಿಕೆಯನ್ನೂ ಒಡ್ಡಿದ್ದರು.
ಕುಂದಾಪುರ ಡಿವೈಎಸ್ಪಿ ಎಚ್.ಡಿ ಕುಲಕರ್ಣಿ ನೇತೃತ್ವದ ಪೊಲೀಸರು ತನಿಖೆ ನಡೆಸಿ ಪ್ರಕರಣ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಿದ್ದರು. ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳ ನಿವಾಸಿ ದೇವಿಪ್ರಸಾದ್ ಶೆಟ್ಟಿ ಯಾನೆ ದೀಕ್ಷಿತ್ (33), ಹಿರಿಯಡ್ಕ ನಿವಾಸಿ ಸುಜಿತ್ (27), ಕಾಟಿಪಳ್ಳದ ಸುದೀಪ್ (22), ಶ್ರೀಶ ಆನಂದ ಶೆಟ್ಟಿ ಅಲಿಯಾಸ್ ಶ್ರೀಶ(35), ಕಾಟಿಪಳ್ಳ ಕೈಕಂಬದ ಮಿಥುನ್ ಅಲಿಯಾಸ್ ಮಿಥುನ್ ಕೈಕಂಬ(20), ಕೆಮ್ಮಣ್ಣು ನಿವಾಸಿಗಳಾದ ಮನೋಜ್ ವಿ. ಕೋಟ್ಯಾನ್(34), ಸುಹಾಸ್ (31) ಎಂಬವರನ್ನು ಬಂಧಿಸಲಾಗಿತ್ತು. ಮನೋಜ್ ಕೋಡಿಕೆರೆ ಮತ್ತು ಚೇತನ್ ಪಡೀಲ್ ಸೂಚನೆಯಂತೆ ಕಿಡ್ನಾಪ್ ಮಾಡಿರುವ ಬಗ್ಗೆ ಆರೋಪಿಗಳು ತಿಳಿಸಿದ್ದರಿಂದ ಇಬ್ಬರ ವಿರುದ್ಧವೂ ಕೋಕಾ ಕಾಯ್ದೆಯಡಿ ಕೇಸು ದಾಖಲಿಸಿ ತಲೆಮರೆಸಿಕೊಂಡ ಆರೋಪಿಗಳೆಂದು ಪೊಲೀಸರು ಘೋಷಿಸಿದ್ದಾರೆ.


ಸುರತ್ಕಲ್ ಪೊಲೀಸರ ಪ್ರಕಾರ, ಮನೋಜ್ ಕೋಡಿಕೆರೆ ಇತ್ತೀಚೆಗೆ ಜಾಮೀನಿನಲ್ಲಿ ಹೊರಬಂದ ಬಳಿಕ ಹಿಂದು ಸಂಘಟನೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯನಾಗಿದ್ದ. ಕಳೆದ ನವೆಂಬರ್ ವೇಳೆಗೆ ಜೋಕಟ್ಟೆ ಬಳಿಯಲ್ಲಿ ತನ್ನ ನೇತೃತ್ವದಲ್ಲೇ ಪ್ರಮುಖ ಧಾರ್ಮಿಕ ಕಾರ್ಯಕ್ರಮವನ್ನೂ ನಡೆಸಿದ್ದ. ಇದಕ್ಕಾಗಿ ಹಲವು ಕಡೆ ದೇಣಿಗೆ ಸಂಗ್ರಹದಲ್ಲೂ ತೊಡಗಿದ್ದ ಎನ್ನುವ ಮಾಹಿತಿ ಇದೆ. ಈ ನಡುವೆ, ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಕಠಿಣ ಕ್ರಮಕ್ಕೆ ಮುಂದಾಗಿರುವ ಕಾರಣಕ್ಕೋ ಏನೋ, ಮಂಗಳೂರಿನಲ್ಲಿ ಅಪರಾಧ ಚಟುವಟಿಕೆ ಕಡಿಮೆಗೊಳಿಸಿ ಕುಂದಾಪುರ ಕಡೆಗೆ ತನ್ನ ಚಟುವಟಿಕೆ ವಿಸ್ತರಿಸಿರುವ ಸಾಧ್ಯತೆಯಿದೆ. ಮಂಗಳೂರಿನಲ್ಲಿ ಹಲವು ರೌಡಿಗಳ ವಿರುದ್ಧ ಸುಧೀರ್ ರೆಡ್ಡಿ ಬಂದ ಬಳಿಕ ಕೋಕಾ ಕಾಯ್ದೆಯಡಿ ಕ್ರಮ ಜರುಗಿಸಿದ್ದರೂ, ಮನೋಜ್ ಕೋಡಿಕೆರೆ ಮಾತ್ರ ಬಚಾವ್ ಆಗಿದ್ದ. ಈಗ ಉಡುಪಿ ಪೊಲೀಸರು ಕೋಕಾ ಕಾಯ್ದೆ ಅಳವಡಿಸಿದ್ದು, ಮಂಗಳೂರು, ಉಡುಪಿಯನ್ನು ಬಿಟ್ಟು ಮುಂಬೈಗೆ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Police in Udupi district have launched a manhunt for two notorious criminals, Manoj Kodikere and Chetan Padil, who are accused of masterminding a kidnapping and extortion case. Authorities have announced a reward of ₹50,000 for credible information leading to their arrest. Both have been booked under the Karnataka Control of Organized Crime Act (KCOCA).
07-04-26 07:26 pm
HK News Staffer
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಶರಣ್ಯ ಕಡೆಗೂ ಪತ...
05-04-26 10:45 pm
07-04-26 10:44 pm
HK News Staffer
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ...
07-04-26 11:45 am
ಟ್ರಂಪ್ ವಾರ್ನಿಂಗ್ ಗೆ ಇರಾನ್ ಟಕ್ಕರ್ ; ವಿದ್ಯುತ್ ಸ...
07-04-26 11:42 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
07-04-26 10:15 pm
HK News Staffer
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm
ಚಿಕ್ಕಮಗಳೂರು ; ಭದ್ರಾ ನದಿಗೆ ಹಾರಿ ಶಿವಮೊಗ್ಗದ ನರ್ಸ...
07-04-26 04:04 pm
ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ...
07-04-26 10:08 am
ತಮಿಳಿನ ಖ್ಯಾತ ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಹ್...
06-04-26 05:40 pm