ಬ್ರೇಕಿಂಗ್ ನ್ಯೂಸ್
02-01-21 01:12 pm Headline Karnataka News Network ಕ್ರೈಂ
ಕರ್ನೂಲ್, ಜ.2: ಅಂತರ್ಜಾತಿ ಮದುವೆಯಾಗಿದ್ದ 30 ವರ್ಷದ ದಲಿತ ಯುವಕನನ್ನು ಆತನ ಪತ್ನಿ ಮನೆಯವರೇ ಹೊಡೆದು ಕೊಂದು ಹಾಕಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಆಡಮ್ ಸ್ಮಿತ್ ಎಂದು ಗುರುತಿಸಲಾಗಿದೆ. ಸ್ಮಿತ್ ಕಳೆದ ಆರು ತಿಂಗಳ ಹಿಂದೆ ಮಹೇಶ್ವರಿ ಎನ್ನುವ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಹೈದರಾಬಾದಿನ ಆರ್ಯ ಸಮಾಜದಲ್ಲಿ ಮದುವೆ ನಡೆದಿತ್ತು. ಮದುವೆ ಬಳಿಕ ಯುವಕ ಮತ್ತು ಯುವತಿ ಕರ್ನೂಲ್ ಜಿಲ್ಲೆಯ ಆದೊನಿ ಪಟ್ಟಣದಲ್ಲಿ ವಾಸವಿದ್ದರು. ಯುವಕ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದರೆ, ಯುವತಿ ಮೇಲ್ಜಾತಿಗೆ ಸೇರಿದ್ದಳು. ಆತನ ಜೊತೆ ಮದುವೆಯಾಗುವುದಕ್ಕೆ ಯುವತಿ ಮನೆಯವರ ಭಾರೀ ವಿರೋಧವಿತ್ತು.


ಆಡಮ್ ಸ್ಮಿತ್ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದುದರಿಂದ ಯುವತಿ ಆತನನ್ನು ವರಿಸಲು ಮುಂದಾಗಿದ್ದಳು. ವಿರೋಧ ಮಧ್ಯೆಯೂ ಮದುವೆಯಾಗಿ ಜೊತೆಯಾಗಿದ್ದ ಜೋಡಿ, ಆದೊನಿ ಪಟ್ಟಣದಲ್ಲಿ ವಾಸಕ್ಕೆ ತೊಡಗಿದ್ದರು. ಆದರೆ, ಯುವತಿ ಮನೆಯವರು ಯುವಕನ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದರು. ಎರಡು ದಿನಗಳ ಹಿಂದೆ ಬೈಕಿನಲ್ಲಿ ಬರುತ್ತಿದ್ದ ಸ್ಮಿತ್ ನನ್ನು ಅಡ್ಡಹಾಕಿದ್ದ ದುಷ್ಕರ್ಮಿಗಳು ರಾಡ್ ನಲ್ಲಿ ಹೊಡೆದು ಕಲ್ಲು ಎತ್ತಿ ಹಾಕಿ ಕೊಂದಿದ್ದಾರೆ. ಕೊಲೆಗೆ ತಮ್ಮ ಮನೆಯವರೇ ಕಾರಣ ಎಂದು ಪತ್ನಿ ಮಹೇಶ್ವರಿ ದೂರಿದ್ದಾಳೆ. ಇದರಂತೆ, ಪೊಲೀಸರು ತನಿಖೆ ಆರಂಭಿಸಿದ್ದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
A 30-year-old man was done to death, allegedly by his in-laws at Adoni on Thursday. The deceased has been identified as Adam Smith (30), a resident of the RTC colony in Adoni.
18-03-26 11:00 pm
supritha Jain
Seraga Sarse Song: ಭಾರೀ ವಿವಾದಕ್ಕೀಡಾದ ಕೆಡಿ ಚಿತ...
18-03-26 09:44 pm
ಚಿಕ್ಕಮಗಳೂರು ; ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ...
18-03-26 07:13 pm
ಸಂತ್ರಸ್ತೆ ದೂರು ಕೊಡಬೇಕಿಲ್ಲ, ಸುಮೊಟೋ ಕೇಸು ದಾಖಲಿಸ...
18-03-26 06:10 pm
ಯುಗಾದಿ ಹಬ್ಬಕ್ಕೆ ಬಸ್ ದರ ಏರಿಕೆ ; ಜೀವಂತ ವ್ಯಕ್ತಿಯ...
18-03-26 03:41 pm
18-03-26 07:11 pm
HK News Staffer
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
18-03-26 10:42 pm
HK News Staffer
ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರಿಸ್ತಿಯನ್ ಅಲ್...
18-03-26 03:38 pm
SCS Hospital, Case: ಹೆರಿಗೆ ವೇಳೆ ನವಜಾತ ಶಿಶು ಸಾ...
18-03-26 09:41 am
ಭೂ ವ್ಯವಹಾರದ ವೈಷಮ್ಯ ; ಮೋಸ ಮಾಡಿದ ಸಿಟ್ಟಿನಲ್ಲಿ ಇನ...
17-03-26 10:54 pm
Besant Evening College: ಬೆಸೆಂಟ್ ಸಂಧ್ಯಾ ಕಾಲೇಜಿ...
17-03-26 10:12 pm
18-03-26 11:01 pm
HK News Desk
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm