ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ್ ಗುಂಡೇಟು ; ಕಾಲಿಗೆ ಯಾಕೆ, ಎದೆಗೆ ಹೊಡೆದು ಎನ್ಕೌಂಟರ್ ಮಾಡಬೇಕಿತ್ತು ಎಂದ ಮಾವ 

24-08-25 04:00 pm       HK News Desk   ಕ್ರೈಂ

ಇಲ್ಲಿನ ಗ್ರೇಟರ್ ನೋಯ್ಡಾ ನಗರದಲ್ಲಿ ವಿವಾಹಿತ ಮಹಿಳೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪದಲ್ಲಿ ಜೈಲು ಸೇರಿರುವ ವಿಪಿನ್ ಭಾಟಿ ಎಂಬಾತ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

ನವದೆಹಲಿ, ಆ.24 : ಇಲ್ಲಿನ ಗ್ರೇಟರ್ ನೋಯ್ಡಾ ನಗರದಲ್ಲಿ ವಿವಾಹಿತ ಮಹಿಳೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪದಲ್ಲಿ ಜೈಲು ಸೇರಿರುವ ವಿಪಿನ್ ಭಾಟಿ ಎಂಬಾತ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

36 ಲಕ್ಷ ರೂಪಾಯಿ ವರದಕ್ಷಿಣೆ ಹಣಕ್ಕಾಗಿ ಪೀಡಿಸಿ ನಿಕ್ಕಿ ಭಾಟಿ ಎಂಬ ಮಹಿಳೆಯನ್ನು ಪತಿ ಮತ್ತು ಆತನ ಮನೆಯವರು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು ಎಂದು ಮಹಿಳೆಯ ಸೋದರಿ ಕಾಂಚನ ಪೊಲೀಸ್ ದೂರು ನೀಡಿದ್ದರು. 2016ರಲ್ಲಿ ನಿಕ್ಕಿ ಮತ್ತು ವಿಪಿನ್ ಮದುವೆಯಾಗಿದ್ದು, ಈಕೆಯ ಸೋದರಿ ಕಾಂಚನ, ವಿಪಿನ್ ಸಹೋದರ ರೋಹಿತ್ ಎಂಬಾತನನ್ನು ವರಿಸಿ ಒಂದೇ ಮನೆಯಲ್ಲಿ ನೆಲೆಸಿದ್ದರು. ಕಳೆದ ಗುರುವಾರ ವರದಕ್ಷಿಣೆ ಹಣ ತರುವಂತೆ ಪೀಡಿಸಿ ವಿಪಿನ್ ಮತ್ತು ಆತನ ತಾಯಿ ದಯಾ ಎಂಬುವವರು ಸೇರಿ ನಿಕ್ಕಿಗೆ ಹಲ್ಲೆ ನಡೆಸಿದ್ದರು. ಇದನ್ನು ಪ್ರಶ್ನಿಸಿದ ಕಾಂಚನ ಅವರಿಗೂ ಹಿಗ್ಗಾಮುಗ್ಗ ಬಾರಿಸಿ, ನಿಕ್ಕಿಗೆ ಬೆಂಕಿ ಹಚ್ಚಿದ್ದರು. ಈ ದೃಶ್ಯ ಕಾಂಚನ ಅವರ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ನಿಕ್ಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಬಗ್ಗೆ ಕಾಂಚನ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ವಿಪಿನ್ ನನ್ನು ಪೊಲೀಸರು ಬಂಧಿಸಿದ್ದರು. 

Greater Noida dowry murder: Accused shot in leg during encounter, as he  tries to escape police custody

Greater Noida dowry murder case: Prime accused Vipin shot in police  encounter - The Economic Times

Greater Noida Dowry Death Case: Accused Vipin Shot In Leg While Trying To Escape  Police Custody - Oneindia News

ಈ ಮಧ್ಯೆ ಭಾನುವಾರ ಬೆಳಗ್ಗೆ ಮೃತ ನಿಕ್ಕಿ ಅವರ ತಂದೆ ಭಿಕಾರಿ ಸಿಂಗ್ ಪಾಯ್ಲಾ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ನನ್ನ ಮಗಳ ಹತ್ಯೆಯಲ್ಲಿ ವಿಪಿನ್ ನ ಇಡೀ ಕುಟುಂಬವೇ ಭಾಗಿಯಾಗಿದೆ. ಅವರನ್ನು ಎನ್ಕೌಂಟರ್ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಇದಾದ ಒಂದು ಗಂಟೆಯಲ್ಲೇ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಪೊಲೀಸರು ವಿಪಿನ್ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿರುವ ಮಹಿಳೆಯ ತಂದೆ ಆತನ ಎದೆಗೆ ಗುಂಡು ಹೊಡೆದು ಎನ್ಕೌಂಟರ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.

A man accused of setting his wife ablaze over a dowry demand of ₹36 lakh was shot in his leg by police while fleeing custody on Sunday in Greater Noida, an officer said.