ಬ್ರೇಕಿಂಗ್ ನ್ಯೂಸ್
19-12-20 12:28 pm Mangalore Correspondent ಕ್ರೈಂ
ಮಂಗಳೂರು, ಡಿ.19: ತಣ್ಣೀರುಬಾವಿ ಬೀಚ್ ನಲ್ಲಿ ಬರ್ತ್ ಡೇ ಪಾರ್ಟಿ ಮುಗಿಸಿ ಮರಳುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಪೊಲೀಸರ ಜೊತೆ ಪುಂಡಾಟಿಕೆ ನಡೆಸಿರುವ ಘಟನೆ ಕಾವೂರಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಬೀಚ್ ನಲ್ಲಿ ಬರ್ತ್ ಡೇ ಹೆಸರಲ್ಲಿ ಪಾರ್ಟಿ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳ ಗುಂಪು, ಬಳಿಕ ತಡರಾತ್ರಿ ಹಿಂತಿರುಗುತ್ತಿದ್ದಾಗ ಕಾವೂರು ಜಂಕ್ಷನ್ನಲ್ಲಿ ಪೊಲೀಸರು ಎದುರಾಗಿದ್ದಾರೆ. ಪೊಲೀಸರು ತಪಾಸಣೆಗೆ ಮುಂದಾಗಿದ್ದು ವಿರೋಧ ಮಾಡಿದ್ದಾರೆ. ಅಲ್ಲದೆ, ಪೊಲೀಸರತ್ತ ಕಲ್ಲು ತೂರಲು ಯತ್ನಿಸಿದ್ದಾರೆ. ಕಲ್ಲು ತೂರುತ್ತಿದ್ದ ಯುವಕರನ್ನು ತಡೆದು ವಶಕ್ಕೆ ಪಡೆಯಲು ಮುಂದಾದಾಗ, ಹಲ್ಲೆಗೆ ಮುಂದಾಗಿದ್ದಲ್ಲದೆ ಸಿಬಂದಿ ಬಳಿಯಿದ್ದ ರೈಫಲ್ ಅನ್ನು ಕಸಿಯಲು ಪ್ರಯತ್ನ ಪಟ್ಟಿದ್ದಾರೆ. ಬಳಿಕ ಹೆಚ್ಚುವರಿ ಪೊಲೀಸರು ಆಗಮಿಸಿ ನಾಲ್ವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದ ನಾಲ್ವರು ಕೂಡ ಮಂಗಳೂರಿನ ನೀರುಮಾರ್ಗದ ಕಾಲೇಜು ಒಂದರ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಘಟನೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಗೋಲಿಬಾರ್ ಪ್ರಕರಣಕ್ಕೆ ಒಂದು ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರನ್ನು ಅಲರ್ಟ್ ಮಾಡಲಾಗಿದೆ. ಹಗಲು - ರಾತ್ರಿ ತಪಾಸಣೆ ಮತ್ತು ರೈಫಲ್ ಧಾರಿ ಪೊಲೀಸರನ್ನು ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ.
Video:
Students assault police personals after being drunk heavily in the birthday beach party held at tannirbhavi beach. The case has been registered at Panambur police station.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm