ಬ್ರೇಕಿಂಗ್ ನ್ಯೂಸ್
23-10-24 08:38 pm Mangalore Correspondent ಕ್ರೈಂ
ಮಂಗಳೂರು, ಅ.23: ಹರ್ಯಾಣದಲ್ಲಿ ಏಡ್ ಏಜನ್ಸಿ ತೆಗೆಸಿಕೊಡುವುದಾಗಿ ಹೇಳಿ ಮಂಗಳೂರಿನ ಏಡ್ ಏಜನ್ಸಿಯೊಂದಕ್ಕೆ 50 ಸಾವಿರ ರೂ. ಪಡೆದು ಸೈಬರ್ ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಜಾಹೀರಾತು ಏಜನ್ಸಿ ಹೊಂದಿರುವ ವ್ಯಕ್ತಿಯೊಬ್ಬರು, ಬೇರೆ ಬೇರೆ ಕಡೆಗಳಿಂದ ಜಾಹೀರಾತು ಪಡೆಯಲು ಏಜನ್ಸಿ ಪಡೆದಿರುತ್ತಾರೆ. ಬೇರೆ ರಾಜ್ಯಗಳ ಏಡ್ ಏಜನ್ಸಿ ಕುರಿತಾಗಿ ಮಾಹಿತಿ ಪಡೆಯಲು ಗೂಗಲ್ ನಲ್ಲಿ ಸರ್ಚ್ ಮಾಡಿದ್ದರು. ಜೂನ್ 6ರಂದು ಸಂಜೆ ನಾಲ್ಕು ಗಂಟೆಗೆ ತನ್ನ ಕಚೇರಿಯಲ್ಲಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿದ್ದು ತನ್ನನ್ನು ಹರ್ಯಾಣ ಮೂಲದ ಸಂಜಯ್ ಎಂದು ಪರಿಚಯ ಮಾಡಿಕೊಂಡಿದ್ದ. ಹರ್ಯಾಣದಿಂದ ಏಡ್ ಏಜನ್ಸಿ ಮಾಡಿಕೊಡುವುದಾಗಿ ಹೇಳಿದ್ದಾನೆ.
ಅದಕ್ಕೆ ಮಂಗಳೂರಿನ ವ್ಯಕ್ತಿ ಹರ್ಯಾಣದ್ದು ನಮಗೆ ಬೇಡ ಎಂದು ನಿರಾಕರಿಸಿದ್ದಾರೆ. ಆನಂತರವೂ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ನೀವು ಒಪ್ಪಿದರೆ ಹರ್ಯಾಣದಿಂದ ಜಾಹೀರಾತುಗಳನ್ನು ತೆಗೆಸಿಕೊಡುತ್ತೇನೆ, ಏಡ್ ಏಜನ್ಸಿಯನ್ನೂ ಮಾಡಿಸುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ವ್ಯಕ್ತಿಗೆ ಏಜನ್ಸಿ ಆರಂಭಿಸಬೇಕಿದ್ದಲ್ಲಿ 50 ಸಾವಿರ ಡಿಪಾಸಿಟ್ ನೀಡಬೇಕೆಂದು ಹೇಳಿದ್ದಾನೆ. ಒಂದು ವೇಳೆ ಏಜನ್ಸಿ ಇಷ್ಟವಾಗದಿದ್ದರೆ, ಹಣವನ್ನು ಮರಳಿಸುವುದಾಗಿಯೂ ಹೇಳಿದ್ದಾನೆ. ನಂತರ, ವಾಟ್ಸಾಪ್ ನಲ್ಲಿ ಎಚ್ ಡಿಎಫ್ ಸಿ ಬ್ಯಾಂಕಿನ ಖಾತೆಯನ್ನು ಕಳಿಸಿಕೊಟ್ಟಿದ್ದ. ಇದನ್ನು ನಂಬಿದ ವ್ಯಕ್ತಿಯು ಜೂನ್ 16ರಂದು ಸಂಜೆ ತನ್ನ ಯೂನಿಯನ್ ಬ್ಯಾಂಕ್ ಖಾತೆಯಿಂದ ಆನ್ಲೈನ್ ಮೂಲಕ 50 ಸಾವಿರ ಹಣವನ್ನು ಕಳಿಸಿದ್ದರು.
ಸ್ವಲ್ಪ ಹೊತ್ತಿಗೆ ಆ ವ್ಯಕ್ತಿಗೆ ಕರೆ ಮಾಡಿದರೆ, ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆನಂತರವೂ ತುಂಬಾ ಸಲ ಕರೆ ಮಾಡಿದರೂ, ಸ್ವಿಚ್ ಆಫ್ ಎಂದೇ ಬಂದಿತ್ತು. ಇದರಿಂದ ತಾನು ಏಡ್ ಏಜನ್ಸಿಯೆಂದು ಹೇಳಿ 50 ಸಾವಿರ ಕೊಟ್ಟು ಮೋಸ ಹೋಗಿದ್ದೇನೆಂದು ತಿಳಿದು ಘಟನೆ ನಡೆದು ನಾಲ್ಕು ತಿಂಗಳ ಬಳಿಕ ಅಕ್ಟೋಬರ್ 20ರಂದು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.
Add agency in Mangalore cheated of 50 thousand in the name of opening branch at haryana. A case has been registered at the cyber crime police station.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm