ಬ್ರೇಕಿಂಗ್ ನ್ಯೂಸ್
03-10-24 10:49 pm Bangalore Correspondent ಕ್ರೈಂ
ಬೆಂಗಳೂರು, ಅ.3: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ 33 ವರ್ಷದ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಟರ್ಕಿಯಿಂದ ಚಿನ್ನದ ಉಡುಗೊರೆಗಳನ್ನು ತಂದಿದ್ದೇನೆ, ಬೆಂಗಳೂರು ಏರ್ಪೋರ್ಟ್ ನಲ್ಲಿ ಸಿಕ್ಕಿಬಿದ್ದಿದ್ದೇನೆಂದು ಸುಳ್ಳು ಹೇಳಿ ಬರೋಬ್ಬರಿ 1.3 ಕೋಟಿ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮ್ಯಾಟ್ರಿಮನಿ ಸೈಟ್ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೋರ್ವ ಮಹಿಳೆಯ ಜೊತೆಗೆ ಆತ್ಮೀಯನಂತೆ ನಟಿಸಿ ವಂಚನೆ ಎಸಗಿದ್ದಾನೆ. ಟರ್ಕಿಯಲ್ಲಿ ನೆಲೆಸಿರುವ ಭಾರತೀಯನಾಗಿದ್ದು ನಿನ್ನನ್ನು ಮದುವೆಯಾಗುತ್ತೇನೆ, ಈಗ ದೊಡ್ಡ ಮೊತ್ತದ ಚಿನ್ನದ ಬಿಸ್ಕೆಟ್ ಜೊತೆಗೆ ಬರುತ್ತಿದ್ದೇನೆ, ಬೆಂಗಳೂರು ಏರ್ಪೋರ್ಟ್ ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದೇನೆ ಎಂದು ನಂಬಿಸಿದ್ದ.
ಉಡುಗೊರೆ ಕೊಡಲು ಬಹಳಷ್ಟು ಚಿನ್ನವನ್ನು ತಂದ್ದಿದ್ದು, ವಿಮಾನ ನಿಲ್ದಾಣ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವ್ಯಕ್ತಿ ಮಹಿಳೆಗೆ ಹೇಳಿ ನಂಬಿಸಿದ್ದಾರೆ. ತಾನು ಹೇಳಿದ್ದು ನಿಜ ಎಂದು ನಂಬಿಸುವುದಕ್ಕಾಗಿ ಆತ ವಿಮಾನ ಪ್ರಯಾಣದ ನಕಲಿ ಟಿಕೆಟ್ ಗಳನ್ನು ಕಳಿಸಿದ್ದಾನೆ, ಅಷ್ಟೇ ಅಲ್ಲದೆ ವಿಮಾನ ನಿಲ್ದಾಣದ ಮಹಿಳಾ ಅಧಿಕಾರಿ ಎಂಬಂತೆ ಬಿಂಬಿಸಿ ಮಹಿಳೆಯೊಬ್ಬರ ಜೊತೆಯಲ್ಲಿ ಫೋಟೋ ಕ್ಲಿಕ್ಕಿಸಿ ಕಳುಹಿಸಿದ್ದ. ಅವರಿಬ್ಬರೂ ಸೇರಿ ಸಂತ್ರಸ್ತ ಮಹಿಳೆಯನ್ನು 35-40 ದಿನಗಳ ಮೋಸದ ಮಾತನಾಡಿ ವಂಚಿಸಿದ್ದು ಬೇರೆ ಬೇರೆ ಖಾತೆಗಳಿಗೆ 1.30 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಹಣ ಸಿಗುತ್ತಿದ್ದಂತೆಯೇ ಆ ವ್ಯಕ್ತಿ ಮ್ಯಾಟ್ರಿಮನಿ ಪ್ರೊಫೈಲ್ ಅನ್ನು ಡಿಲೀಟ್ ಮಾಡಿದ್ದು ನಾಪತ್ತೆಯಾಗಿದ್ದಾರೆ.
ಆಬಳಿಕ ವಾರ ಕಳೆದರೂ ಆ ವ್ಯಕ್ತಿಯ ಸಂಪರ್ಕ ಸಿಗದೇ ಇದ್ದಾಗ, ತಾನು ಮೋಸ ಹೋಗಿದ್ದೇನೆ ಎಂಬುದು ಮಹಿಳೆಯ ಅರಿವಿಗೆ ಬಂದಿತ್ತು. ಟರ್ಕಿಯ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದರಿಂದ ಆ ವ್ಯಕ್ತಿಯನ್ನು ಪತ್ತೆಹಚ್ಚುವುದೂ ಸಾಧ್ಯವಾಗಿಲ್ಲ. ಮಹಿಳೆಯ ದೂರಿನಂತೆ ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ, ಮ್ಯಾಟ್ರಿಮನಿ ಸೈಟ್ ಗಳಲ್ಲಿ ಪರಿಚಯವಾದ ವ್ಯಕ್ತಿಗಳ ಜೊತೆ ವ್ಯವಹಾರ ಮಾಡುವಾಗ ತುಂಬ ಜಾಗ್ರತೆ ಇರಬೇಕು. ಆತ್ಮೀಯರಂತೆ ನಟಿಸಿ ಮೋಸ ಮಾಡುತ್ತಾರೆ. ಹೆಚ್ಚಾಗಿ ವಿದ್ಯಾವಂತ ಮಹಿಳೆಯರೇ ಈ ವಂಚನೆಗೆ ಬಲಿ ಬೀಳುತ್ತಿದ್ದಾರೆ. ಆರಂಭದಲ್ಲಿ ಇವರು ತಮ್ಮನ್ನು ಸೈಬರ್ ವಂಚಕರು ಎಂದು ತಿಳಿಯದಂತೆ ವರ್ತಿಸುತ್ತಾರೆ. ಈಗಿನ ತಂತ್ರಜ್ಞಾನದಲ್ಲಿ ಯಾವುದೇ ದಾಖಲೆಯನ್ನು ನಕಲಿಯಾಗಿಸಲು ಸಾಧ್ಯವಿದೆ. ಎಐ ಟೆಕ್ನಾಲಜಿಯಲ್ಲಿ ನಮ್ಮನ್ನು ನಾವೇ ನಂಬದ ರೀತಿಯಲ್ಲಿ ಎಡವಟ್ಟು ಮಾಡುತ್ತಾರೆ. ಇದರಿಂದಾಗಿ ಇಂಥ ಅಪರಿಚಿತರ ಜೊತೆಗೆ ವ್ಯವಹರಿಸುವಾಗ ತುಂಬ ಜಾಗ್ರತೆ ಇರಬೇಕು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬ ಹೇಳುತ್ತಾರೆ.
A 33-year-old woman working at an international financial institution was defrauded of Rs 1.3 crore by a man she met on a popular matrimonial app. The man, claiming to be an Indian from Turkiye, said he had been detained by Bengaluru Airport officials as he was carrying a lot of gold to gift her.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
15-08-26 02:06 pm
HK News Staffer
Belthangady Couple Suicide, Bangalore: ಬೆಂಗಳೂ...
15-08-26 01:28 pm
ಕೋಟೆಕಾರಿನಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡ ವಲಸೆ ಕ...
14-08-26 09:09 pm
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am