ಬ್ರೇಕಿಂಗ್ ನ್ಯೂಸ್
29-08-24 09:02 pm Udupi Correspondent ಕ್ರೈಂ
ಉಡುಪಿ, ಆಗಸ್ಟ್.29: ಯುವತಿಯೊಬ್ಬಳು ಕೃಷ್ಣಾಷ್ಟಮಿ ಪ್ರಯುಕ್ತ ರೈಲಿನಲ್ಲಿ ಬೆಂಗಳೂರಿನಿಂದ ಊರಿಗೆ ಬರುತ್ತಿದ್ದಾಗ ಯುವಕನೊಬ್ಬ ಮಾನಭಂಗಕ್ಕೆ ಯತ್ನಿಸಿದ್ದು ದೂರು ದಾಖಲಾದ 24 ಗಂಟೆಯಲ್ಲೇ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭಟ್ಕಳ ಮೂಲದ ಮೊಹಮ್ಮದ್ ಶುರೈಮ್ (22) ಬಂಧಿತ ಆರೋಪಿ.
ಮೂಲತಃ ಉಡುಪಿ ತಾಲೂಕಿನ ಮಣಿಪಾಲದ ಯುವತಿ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಶನಿವಾರ ರಾತ್ರಿ ಊರಿಗೆ ಹೊರಟಿದ್ದರು. ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಯುವಕನೋರ್ವ ಅಸಭ್ಯ ವರ್ತನೆ ತೋರಿದ್ದಾನೆ. ಇನ್ನೇನು ಉಡುಪಿ ತಲುಪಲು ಅರ್ಧ ಗಂಟೆ ಇರುವಾಗ ಮೈಗೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದು ಜೋರು ಮಾಡುತ್ತಲೇ ಆರೋಪಿ ಶುರೈಮ್ ಕ್ಷಮೆ ಯಾಚಿಸಿದ್ದಾನೆ. ಇದೇ ವೇಳೆ, ಯುವತಿ ಆತನ ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದರು.
ಉಡುಪಿಯಲ್ಲಿ ರೈಲಿನಿಂದ ಇಳಿಯುತ್ತಲೇ ರೈಲ್ವೆ ಪೊಲೀಸ್ಗೆ ಯುವತಿ ಮಾಹಿತಿ ನೀಡಿದ್ದಾರೆ. ರೈಲ್ವೆ ಆ್ಯಪ್ ಮೂಲಕವೂ ದೂರು ದಾಖಲಿಸಿದ್ದರು. ಯುವತಿ ನೀಡಿದ ಮಾಹಿತಿ ಆಧರಿಸಿ ಮಣಿಪಾಲ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ದೂರು ಮತ್ತು ಫೋಟೊ ಹಿಡಿದು ಶೋಧಕ್ಕಿಳಿದ ಪೊಲೀಸರು ಮೊದಲಿಗೆ ಅಂದು ರೈಲಿನಲ್ಲಿ ಪ್ರಯಾಣಿಸಿದ್ದ ಎಲ್ಲ ಪ್ರಯಾಣಿಕರ ವಿವರ ಪಡೆದಿದ್ದಾರೆ. ಘಟನೆ ನಡೆದದ್ದು ವೀಕೆಂಡ್ ಆದ ಹಿನ್ನೆಲೆ ಬೆಂಗಳೂರು-ಮುರ್ಡೇಶ್ವರ ನಡುವೆ ಸಂಚರಿಸುವ ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದರು. ದೂರಿನಲ್ಲಿ ನೀಡಿದ್ದ ಮಾಹಿತಿ ಆಧರಿಸಿ ಮೂರು ಹಂತಗಳಲ್ಲಿ ಶಾರ್ಟ್ ಲಿಸ್ಟ್ ಮಾಡಿ ಶೋಧ ನಡೆಸಿದ್ದಾರೆ. ಜೊತೆಗೆ, ಉಡುಪಿ ಮತ್ತು ಆನಂತರದ ನಿಲ್ದಾಣಗಳಲ್ಲಿ ಇಳಿದು ಹೋದವರನ್ನು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಭಟ್ಕಳದಲ್ಲಿ ಇಳಿದಿದ್ದನ್ನ ಪತ್ತೆಹಚ್ಚಿದ ಪೊಲೀಸರು ಆತನ ಮಾಹಿತಿ ಪಡೆದು ನೇರವಾಗಿ ಭಟ್ಕಳದ ನಿವಾಸದಿಂದಲೇ ಬಂಧಿಸಿದ್ದಾರೆ. ಹೆಸರು, ಮಾಹಿತಿ ಇಲ್ಲದಿದ್ದರೂ ಪೊಲೀಸರು ಕರಾರುವಾಕ್ಕಾಗಿ ಕಾರ್ಯಾಚರಣೆ ನಡೆಸಿದ್ದು ಶ್ಲಾಘನೆಗೆ ಪಾತ್ರವಾಗಿದೆ.
The 22-year-old man, who tried to sexually assault a woman software professional on a running train in the Udupi district of Karnataka, has been arrested, said officials here on Thursday. The incident happened on an express train on Sunday as the woman was travelling from Bengaluru to Manipal town near Udupi City.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm