ಬ್ರೇಕಿಂಗ್ ನ್ಯೂಸ್
09-07-24 10:46 am Mangalore Correspondent ಕ್ರೈಂ
ಮಂಗಳೂರು, ಜುಲೈ.9: ನಗರದ ಉರ್ವಾ ಸ್ಟೋರ್ ಬಳಿಯ ದಡ್ಡಲ್ ಕಾಡ್ ಕೋಟೆಕಣಿ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ವೃದ್ಧ ದಂಪತಿಗೆ ಹಲ್ಲೆಗೈದು 14 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದಾರೆ
ವಿಕ್ಟರ್ ಮೆಂಡೋನ್ಸ ಮತ್ತು ಪೆಟ್ರಿಶಿಯಾ ಎಂಬ ಇಬ್ಬರು ವೃದ್ಧ ದಂಪತಿಯಿದ್ದ ಮನೆಗೆ ಹೊಕ್ಕಿದ ಕಳ್ಳರು ಅವರಿಗೆ ಮನಸೋ ಇಚ್ಚೆ ಹಲ್ಲೆಗೈದು ದರೋಡೆ ಮಾಡಿದ್ದಾರೆ. ರಾತ್ರಿ 1.40ರ ಸುಮಾರಿಗೆ ಚಡ್ಡಿ ಬನಿಯಾನ್ ಮತ್ತು ಮುಖಕ್ಕೆ ಮಂಕಿ ಕ್ಯಾಪ್ ಹಾಕಿದ್ದ ನಾಲ್ವರಿದ್ದ ತಂಡದ ಸದಸ್ಯರು ಕಿಟಕಿ ಸರಳು ಮುರಿದು ಒಳನುಗ್ಗಿದ್ದರು. ಮನೆಮಂದಿ ಬೆಡ್ ನಲ್ಲಿ ಮಲಗಿದ್ದಾಗ ನೇರವಾಗಿ ಹಲ್ಲೆ ನಡೆಸಿ ಚಿನ್ನ, ನಗದು ನೀಡುವಂತೆ ಒತ್ತಾಯ ಮಾಡಿದ್ದಾರೆ.
ಮನೆಯಿಂದ ಸುಮಾರು 14 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ವಿಕ್ಟರ್ ಅವರಿಗೆ ರಾಡ್ ನಲ್ಲಿ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳರು 1.40 ಗಂಟೆಗೆ ಒಳ ಹೊಕ್ಕವರು 4.45ರ ವರೆಗೂ ಮನೆಯಲ್ಲಿದ್ದರು. ಬಳಿಕ ಮನೆಯಲ್ಲಿದ್ದ ಮಾರುತಿ ಸಿಯಾಜ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇದ್ದು ಇವರ ಮಕ್ಕಳು ವಿದೇಶದಲ್ಲಿದ್ದಾರೆ. ಕಾರನ್ನು ಕಳ್ಳರು ಮೂಲ್ಕಿಯಲ್ಲಿ ಬಿಟ್ಟು ಹೋಗಿದ್ದಾರೆ.
ಚಡ್ಡಿ ಗ್ಯಾಂಗ್ ಸದಸ್ಯರು ಕೃತ್ಯ ನಡೆಸಿರುವ ಶಂಕೆಯಿದೆ. ದರೋಡೆಕೋರರು ಚಡ್ಡಿ, ಬನಿಯಾನ್ ಮತ್ತು ಮುಖಕ್ಕೆ ಮಂಕಿ ಕ್ಯಾಪ್ ಹಾಕಿದ್ದರು. ಕನ್ನಡ ಮತ್ತು ಹಿಂದಿ ಮಾತನಾಡುತ್ತಿದ್ದರು. ನಾವೇನು ನಿಮಗೆ ತೊಂದರೆ ಮಾಡುವುದಿಲ್ಲ, ಕಪಾಟು ಕೀ ಕೊಡಿ ಎಂದು ಮನೆಯವರಿಗೆ ಬೆದರಿಕೆ ಹಾಕಿದ್ದಾರೆ. ಕೀ ಕೊಟ್ಟ ಬಳಿಕ ಅದರಿಂದ ಕಪಾಟು ಓಪನ್ ಮಾಡಲಾಗದೆ, ಸ್ಕ್ರೂ ಡೈವರಲ್ಲಿ ಕಪಾಟು ಒಡೆದಿದ್ದಾರೆ.
ಕಳ್ಳರು ಹೋದ ಬಳಿಕ ಮನೆಯವರು ಪಕ್ಕದ ಮನೆಗೆ ಫೋನ್ ಮಾಡಿ ತಿಳಿಸಿದ್ದಾರೆ. ಹಲ್ಲೆ ಸಂದರ್ಭದಲ್ಲಿ ಮನೆಯವರು ಬೊಬ್ಬೆ ಹಾಕಿದ್ದರೂ ಯಾರಿಗೂ ಹೊರಗಿನವರಿಗೆ ಗೊತ್ತಾಗಲಿಲ್ಲ. ಪಕ್ಕದ ಮನೆಯವರು 112ಗೆ ಕರೆ ಮಾಡಿದ್ದು ಬಳಿಕ ಉರ್ವಾ ಪೊಲೀಸರು ಬಂದು ಗಾಯಾಳು ವಿಕ್ಟರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ಮಂಗಳೂರಿಗೆ ಚಡ್ಡಿ ಗ್ಯಾಂಗ್ ಬಂದಿರುವ ಬಗ್ಗೆ ಉರ್ವಾ ಪೊಲೀಸರು ಮಾಹಿತಿ ನೀಡಿದ್ದು ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಕೇಳಿಕೊಂಡಿದ್ದರು.
Robbery in Mangalore at Vivekananda Nagar in Urwa, Dacoits gang attacks elderly couple, loot cash gold and then flee by stealing their car. Urwa police who have arrived are suspecting Chaddi Baniyan gang involvement. On July 7th there was an attempted theft at a house on Kodikal Road. The culprits tried to enter the house by cutting the window grill of the room where the residents were sleeping. It is suspected that the dacoits parked their car before the Hejmady toll gate to avoid being tracked by the police.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm