ಬ್ರೇಕಿಂಗ್ ನ್ಯೂಸ್
05-07-24 10:34 pm Mangalore Correspondent ಕ್ರೈಂ
ಉಳ್ಳಾಲ, ಜುಲೈ 5: ಶೋಕಿ ಜೀವನಕ್ಕಾಗಿ ಮನೆಯ ಕಪಾಟಿನಲ್ಲಿದ್ದ ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನ ಮನೆ ಮಕ್ಕಳೇ ಎಗರಿಸಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ಐದು ಮಂದಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆದರೆ, ಈ ಬಗ್ಗೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಮಾತ್ರ ಮಾಧ್ಯಮಗಳಿಗೆ ಮಾಹಿತಿ ಕೊಡದೆ ಮುಚ್ಚಿಟ್ಟಿದ್ದಾರೆ.
ಜೂನ್ 8ರ ಬೆಳಗ್ಗೆ 8 ಗಂಟೆಯಿಂದ 16ರ ಮಧ್ಯಾಹ್ನ 12 ಗಂಟೆಯ ನಡುವೆ ಚಿನ್ನಾಭರಣ ಕಳವಾಗಿರುವ ಬಗ್ಗೆ ಉಳ್ಳಾಲ ಠಾಣೆಗೆ ಉಳ್ಳಾಲಬೈಲಿನ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಮನೆಯ ಬೆಡ್ ರೂಮಿನ ಕಪಾಟಿನಲ್ಲಿರಿಸಿದ್ದ ಸ್ಟೀಲಿನ ಡಬ್ಬದಲ್ಲಿ ಇಟ್ಟಿದ್ದ ಚಿನ್ನದ ಕರಿಮಣಿ ಸರ, ನೆಕ್ಲೆಸ್, ಚೈನ್, ಬ್ರಾಸ್ ಲೈಟ್, ಉಂಗುರಗಳು, ಕಿವಿ ಓಲೆಗಳು, ಕೈಬಳೆಗಳು ಸೇರಿದಂತೆ ಅಂದಾಜು 15 ಲಕ್ಷಕ್ಕೂ ಹೆಚ್ಚು ಮೌಲ್ಯದ 32 ಪವನ್ ಗಿಂತಲೂ ಹೆಚ್ಚು ತೂಕದ ಚಿನ್ನದ ಆಭರಣಗಳನ್ನ ಕಳವುಗೈದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣದ ಜಾಡು ಹಿಡಿದ ಉಳ್ಳಾಲ ಪೊಲೀಸರಿಗೆ ತನಿಖೆಯ ವೇಳೆ ದೂರುದಾರರ ಪಿಯುಸಿ ಓದುತ್ತಿರುವ ಅಪ್ರಾಪ್ತ ಮಗನೇ ಕಳ್ಳತನದ ರೂವಾರಿ ಎಂದು ತಿಳಿದುಬಂದಿತ್ತು. ನೆರೆಮನೆಯ ಮತ್ತೋರ್ವ ಅಪ್ರಾಪ್ತ ಸೇರಿ ಇವರ ಸ್ನೇಹಿತರಾದ ಹೊರಗಿನ ಮೂವರು ಯುವಕರು ಕಳ್ಳತನದಲ್ಲಿ ಭಾಗಿಯಾಗಿದ್ದು ಉಳ್ಳಾಲ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾರೆ. ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಬಗ್ಗೆ ಮಾಹಿತಿ ಇದೆ. ಅಪ್ರಾಪ್ತ ಆರೋಪಿಗಳಿಬ್ಬರಿಗೆ ಜಾಮೀನು ಸಿಕ್ಕಿರುವುದಾಗಿಯೂ ತಿಳಿದು ಬಂದಿದೆ.
ಪೋಷಕರು ಮೊಬೈಲ್ ನೀಡದಕ್ಕೆ ಕೃತ್ಯ!
ಪೋಷಕರು ಮೊಬೈಲ್ ನೀಡದೆ ಕಟ್ಟುನಿಟ್ಟು ಮಾಡಿದ್ದಕ್ಕೆ ಮನೆ ಮಗನೇ ಸ್ನೇಹಿತರೊಂದಿಗೆ ಸೇರಿ ಕಳವು ಕೃತ್ಯ ಎಸಗಿದ್ದಾನೆ. ಮನೆಯಿಂದ ಕದ್ದ ಚಿನ್ನಾಭರಣಗಳಲ್ಲಿ ಸುಮಾರು ಆರು ಲಕ್ಷದಷ್ಟು ಮೌಲ್ಯದ ಚಿನ್ನವನ್ನ ಮಾರಾಟ ಮಾಡಿದ್ದು ಹುಡುಗರು ತಮಗಾಗಿ ಐಫೋನ್ ಗಳನ್ನು ಖರೀದಿಸಿದ್ದರು. ಕಳೆದ ಶುಕ್ರವಾರ ಪ್ರಮುಖ ಅಪ್ರಾಪ್ತ ಆರೋಪಿ ಮತ್ತು ಇತರರ ಬಂಧನವಾಗುತ್ತಿದ್ದಂತೆಯೇ ಅವರ ಪೋಷಕರು ಮರ್ಯಾದೆಗೆ ಅಂಜಿ ಪ್ರಕರಣ ದಾಖಲಿಸದಂತೆ ಠಾಣೆಯಲ್ಲೇ ಬಿಡಾರ ಹೂಡಿದ್ದರೆಂದು ತಿಳಿದುಬಂದಿದೆ.
ಆರೋಪಿಗಳ ಬಂಧನ ನಡೆದು ವಾರ ಕಳೆದರೂ ಮಾಧ್ಯಮದವರು ಕೇಳಿದರೆ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ಮಾಹಿತಿ ನೀಡದೇ ಮುಚ್ಚಿಟ್ಟಿದ್ದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಹಣ ಹೋದರೆ ಹೋಗಲಿ, ಮರ್ಯಾದೆ ಉಳಿಯಲಿ ಎಂಬ ಭಾವನೆಯೇ ಮನೆ ಮಕ್ಕಳನ್ನು ಕಳ್ಳರನ್ನಾಗಿಸಿದ್ದು ಸುಳ್ಳಲ್ಲ.
Mangalore Minor son steals gold worth 15 lakhs from house at ullal, five including two minors have been arrested. Parents has refused to give their son mobile phone for which minor son and his friends planned the idea of stealing gold from his house.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm