ಬ್ರೇಕಿಂಗ್ ನ್ಯೂಸ್
06-12-20 08:14 pm Shivamogga Reporter ಕ್ರೈಂ
ಶಿವಮೊಗ್ಗ, ಡಿ.6: ಮುಖ್ಯಮಂತ್ರಿ ತವರು ಕ್ಷೇತ್ರ ಶಿವಮೊಗ್ಗದಲ್ಲಿ ದುರುಳರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗ ನಗರದಲ್ಲಿರುವ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ತಾಯಿಯನ್ನು ನೋಡಿಕೊಂಡಿದ್ದ ಯುವತಿಯನ್ನು ವಾರ್ಡ್ ಬಾಯ್ ಸೇರಿ ಮೂವರು ಯುವಕರು ಕಾರಿನಲ್ಲಿ ಗ್ಯಾಂಗ್ ರೇಪ್ ನಡೆಸಿದ್ದಾರೆ.
ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಶಿವಮೊಗ್ಗ ನಗರ ಪೂರ್ತಿ ಬಂದ್ ಆಗಿದ್ದು ಸೆಕ್ಷನ್, ಕರ್ಫ್ಯೂ ಹೇರಲಾಗಿದೆ. ಈ ನಡುವೆ, ನಿನ್ನೆ ಡಿ.5ರ ಮಧ್ಯಾಹ್ನ ಹೊಟೇಲ್ ಬಂದ್ ಆಗಿದ್ದರಿಂದ ಹೊರಗಿನಿಂದ ಊಟ ತರಲು ಯುವತಿ ಆಸ್ಪತ್ರೆಯಿಂದ ಹೊರಕ್ಕೆ ಬಂದಿದ್ದಳು. ಕಳೆದ ಹಲವು ಸಮಯಗಳಿಂದ ಕೊರೊನಾದಿಂದಾಗಿ ತಾಯಿ ಆಸ್ಪತ್ರೆಯಲ್ಲಿದ್ದು ಆಕೆಯನ್ನು ನೋಡಿಕೊಳ್ಳಲು ಮಗಳು ಉಳಿದುಕೊಂಡಿದ್ದರಿಂದ ವಾರ್ಡ್ ಬಾಯ್ ಸೇರಿ ಸಿಬಂದಿಯ ಪರಿಚಯವೂ ಆಗಿತ್ತು. ನಿನ್ನೆ ಮಧ್ಯಾಹ್ನ ಹೊರಗೆ ಬಂದ ಯುವತಿಯನ್ನು ಹೊಟೇಲ್ ದೂರದಲ್ಲಿದ್ದು ಊಟ ತರಲು ಕಾರಿನಲ್ಲಿ ಕರೆದೊಯ್ಯುವುದಾಗಿ ವಾರ್ಡ್ ಬಾಯ್ ಹೇಳಿದ್ದಾನೆ. ಅದರಂತೆ, ಕಾರಿನ ಹಿಂದಿನ ಸೀಟಿನಲ್ಲಿ ಯುವತಿ ಕುಳಿತಿದ್ದು, ಅದಾಗಲೇ ಮತ್ತಿಬ್ಬರು ಯುವಕರು ಕಾರಿನಲ್ಲಿದ್ದರು. ಯುವತಿ ಹಿಂಭಾಗದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮೇಲೆರಗಿದ ಯುವಕರು ಕಾರಿನಲ್ಲೇ ಬಲಾತ್ಕರಿಸಿ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ.
ಬಳಿಕ ಯುವತಿಯನ್ನು ಹೊರಗೆ ಬಿಟ್ಟಿದ್ದು ಅಸ್ವಸ್ಥ ಸ್ಥಿತಿಯಲ್ಲೇ ಆಸ್ಪತ್ರೆಗೆ ತೆರಳಿ, ತಾಯಿ ಬಳಿ ವಿಷಯ ತಿಳಿಸಿದ್ದಾಳೆ. ಆಸ್ಪತ್ರೆ ಸಿಬಂದಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಪೊಲೀಸರು, ಆರೋಪಿ ವಾರ್ಡ್ ಬಾಯ್ ಮನೋಜ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಿಸಿದಾಗ, ಯುವತಿಯ ಮೇಲೆರಗಲು ಕೆಲವು ದಿನಗಳಿಂದ ಪ್ಲಾನ್ ಹಾಕಿದ್ದರು ಎನ್ನುವ ವಿಚಾರ ಬಯಲಾಗಿದೆ. ಈಗ ಹಲ್ಲೆ ಘಟನೆಯಿಂದ ಕರ್ಫ್ಯೂ ವಿಧಿಸಲ್ಪಟ್ಟು ಶಿವಮೊಗ್ಗ ನಗರ ಬಂದ್ ಆಗಿದ್ದು ಆರೋಪಿಗಳಿಗೆ ವರದಾನ ಆಗಿತ್ತು. ಇದೇ ಯೋಜನೆ ಹಾಕಿ ಆರೋಪಿಗಳು ಮಧ್ಯಾಹ್ನ ಒಂದು ಗಂಟೆ ಮೊದಲೇ ಖಾಲಿ ಜಾಗದಲ್ಲಿ ಕಾರು ಪಾರ್ಕ್ ಮಾಡಿ ಯುವತಿಗಾಗಿ ಕಾದಿದ್ದರು.
A ward boy of a hospital here along with his friends allegedly gang-raped a minor girl who came to the hospital with her sick mother in Shivamogga . Manoj ward boy and his friends have been arrested by the Shivamogga City Police.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm