ಬ್ರೇಕಿಂಗ್ ನ್ಯೂಸ್
24-05-24 01:10 pm Mangalore Correspondent ಕ್ರೈಂ
ಮಂಗಳೂರು, ಮೇ 24: ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ತೀವ್ರ ಮಟ್ಟದಲ್ಲಿ ಹೆಚ್ಚುತ್ತಿದ್ದು ಮೇ ತಿಂಗಳಲ್ಲಿ ಮಂಗಳೂರು ನಗರ ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕಳ್ಳತನ ಪ್ರಕರಣ ವರದಿಯಾಗಿವೆ. ಮಂಗಳೂರು ನಗರದಲ್ಲಿ ಒಂದೇ ವಾರದಲ್ಲಿ ಇತ್ತೀಚೆಗೆ ನಾಲ್ಕು ಕಡೆ ಮನೆ ಕಳ್ಳತನ ಪ್ರಕರಣ ನಡೆದಿತ್ತು.
ಮನೆಯವರು ಮಲಗಿದ್ದಾಗಲೇ ಚಿನ್ನಾಭರಣ ಕಳವು
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರಿನಲ್ಲಿ ಶೈಲೇಶ್ (21) ಎಂಬವರು ನೀಡಿದ ದೂರಿನ ಪ್ರಕಾರ, ಮೇ 22 ರಂದು ಮನೆಯಲ್ಲಿ ಅವರ ತಾಯಿ ಹಾಗೂ ಅಜ್ಜಿ ಮಲಗಿದ್ದಾಗಲೇ ಹಿಂಬಾಗಿಲು ಮುರಿದು ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ್ದಾರೆ. ಬೆಳಗಿನ ಜಾವ ತಾಯಿ ನಿದ್ದೆಯಿಂದ ಎದ್ದು ನೋಡಿದಾಗ, ಮನೆಯ ಹಿಂಬದಿಯ ಬಾಗಿಲು ತೆರೆದಿದ್ದು ಒಳಗಿನ ಚೀಲಕ ಕಿತ್ತು ಹೋಗಿತ್ತು. ಪರಿಶೀಲನೆ ನಡೆಸಿದಾಗ ಕೊಠಡಿಯಲ್ಲಿದ್ದ ಬೀರುವಿನ ಬಾಗಿಲು ತೆಗೆದಿರುವುದು ಕಂಡುಬಂದಿರುತ್ತದೆ. ಅದರಲ್ಲಿದ್ದ ಸುಮಾರು 18 ಪವನ್ ತೂಕದ ಅಂದಾಜು ರೂ 8,64,000/- ಮೌಲ್ಯದ ಚಿನ್ನದ ಆಭರಣಗಳು, 3000/- ರೂ. ನಗದು ಹಣ ಹಾಗೂ ಆಧಾರ್ ಕಾರ್ಡ್, ಜೀವ ವಿಮಾ ಪಾಲಿಸಿ, ಚುನಾವಣೆ ಗುರುತಿನ ಚೀಟಿಗಳಿದ್ದ ವ್ಯಾನಿಟಿ ಬ್ಯಾಗನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿಗೆ ತೆರಳಿದ್ದಾಗ ಮನೆ ಬೀಗ ಒಡೆದು ಕಳವು
ಇನ್ನೊಂದು ಪ್ರಕರಣದಲ್ಲಿ ಪುತ್ತೂರಿನ ಬನ್ನೂರು ಪಡೀಲ್ ನಿವಾಸಿ ವಿಜಯಶ್ರೀ ಐ. ಭಟ್ (53) ನೀಡಿದ ದೂರಿನಂತೆ, ಮೇ 10 ರಂದು, ತನ್ನ ಮಗಳು ಹಾಗೂ ಗಂಡನೊಂದಿಗೆ, ಮಗನ ಮನೆಗೆ ಹೋಗಿ, ಅಲ್ಲಿಂದ ಮರುದಿನ ಮೈಸೂರಿಗೆ ತೆರಳಿದ್ದರು. ಮಗನ ಬಳಿ ಮನೆಯ ಇನ್ನೊಂದು ಕೀ ಇದ್ದು, ಮೇ 17ರಂದು ಮನೆಗೆ ಬಂದು ವಾಸವಿದ್ದು, ಮರುದಿನ 18 ರಂದು ಬೆಳಗ್ಗೆ ಮನೆಗೆ ಮತ್ತು ಗೇಟಿಗೆ ಬೀಗ ಹಾಕಿ ಹೋಗಿರುತ್ತಾನೆ. ಮೇ 23ರಂದು ಬೆಳಗ್ಗೆ ನೆರೆಮನೆಯ ಮಹಿಳೆ ಕರೆಮಾಡಿ, ಮನೆಯ ಬಾಗಿಲು ತೆರೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿರುತ್ತಾರೆ. ಕೂಡಲೇ ತನ್ನ ಮಗನಿಗೆ ಮಾಹಿತಿ ನೀಡಿದ್ದು ಆತ ಮನೆಗೆ ಬಂದು ಪರಿಶೀಲಿಸಿದಾಗ ಮುಖ್ಯದ್ವಾರದ ಲಾಕ್ ಅನ್ನು ಯಾರೋ ಕಳ್ಳರು ಒಡೆದಿರುವುದು ಕಂಡುಬಂದಿತ್ತು. ಮನೆಯೊಳಗಿದ್ದ ರೂ.62,700/-ಮೌಲ್ಯದ
ಬೆಳ್ಳಿಯ ಆಭರಣಗಳು ಹಾಗೂ ರೂ.3,17,400 ಮೌಲ್ಯದ ಚಿನ್ನದ ಆಭರಣಗಳು ಹಾಗು ನಗದು ಹಣ ರೂ.8000/- ಕಳವಾಗಿರುವುದು ಕಂಡುಬಂದಿದೆ. ಕಳುವಾದ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ರೂ. 3,88,100/- ಆಗಬಹುದು ಎಂಬುದಾಗಿ ದೂರು ನೀಡಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳವು
ಬೆಳ್ತಂಗಡಿ ಕಲ್ಮಂಜ ಗ್ರಾಮದ ಶಶಿಕಲ (38) ನೀಡಿದ ದೂರಿನಂತೆ, ಮೇ 23ರಂದು ಮಧ್ಯಾಹ್ನ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದಾಗಲೇ ಬ್ಯಾಗಿನಿಂದ 45 ಗ್ರಾಮ್ ಚಿನ್ನಾಭರಣ ಕಳವು ಮಾಡಲಾಗಿದೆ. ಶಶಿಕಲಾ ಅವರು ಅಂದು ಬೆಳಗ್ಗೆ ತನ್ನ ಬ್ಯಾಗ್ನಲ್ಲಿ ತವರು ಮನೆಯವರು ಹಾಗೂ ಗಂಡನ ಮನೆಯವರು ಉಡುಗೊರೆಯಾಗಿ ನೀಡಿದ್ದ ವಿವಿಧ ಶೈಲಿಯ ಒಟ್ಟು 45 ಗ್ರಾಂ ಚಿನ್ನಾಭರಣಗಳನ್ನು ಇರಿಸಿಕೊಂಡು, ಗಂಡ ಮತ್ತು ಚಿಕ್ಕ ಮಗುವಿನ ಜೊತೆಯಲ್ಲಿ ಕಲ್ಲಡ್ಕದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬಂದಿದ್ದು ಬಿ ಸಿ ರೋಡ್ ಬಸ್ಸಿನಿಂದ ಇಳಿದಿದ್ದರು. ಬಳಿಕ ರಸ್ತೆ ದಾಟಿ ಬಿಸಿ ರೋಡ್ ಖಾಸಗಿ ಬಸ್ ನಿಲ್ದಾಣದ ಸಮೀಪದ ಸ್ವೀಟ್ಸ್ ಅಂಗಡಿಗೆ ತೆರಳಿದ್ದು, ಈ ವೇಳೆ ಬ್ಯಾಗಲ್ಲಿ ಸದ್ರಿ ಚಿನ್ನಾಭರಣಗಳಿತ್ತು ಎನ್ನಲಾಗಿದೆ. ಸ್ವಲ್ಪ ಸಮಯದ ಬಳಿಕ ಬಿ.ಸಿ.ರೋಡ್ ಖಾಸಗಿ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ, ಸದ್ರಿ ಬ್ಯಾಗಲ್ಲಿದ್ದ 45 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುತ್ತದೆ. ಅವುಗಳ ಅಂದಾಜು ಮೌಲ್ಯ 2 ಲಕ್ಷ ರೂ. ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತೆಂಕಕಾರಂದೂರಿನಲ್ಲಿ ಒಂದೇ ದಿನ ಎರಡು ಕಡೆ ಕಳವು
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ವಿಶ್ವನಾಥ ಶೆಟ್ಟಿ (52) ನೀಡಿದ ದೂರಿನಂತೆ, ಮೇ 22 ರಂದು ರಾತ್ರಿಯಿಂದ ಮರುದಿನ ಬೆಳಗ್ಗಿನ ಅವಧಿಯಲ್ಲಿ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಬೀಗವನ್ನು ಮುರಿದು ಮನೆಯೊಳಗೆ ನುಗ್ಗಿ ಗೋದ್ರೆಜ್ ಕಪಾಟಿನ ಬಾಗಿಲನ್ನು ತೆರೆದು, ಸುಮಾರು 14 ½ ಗ್ರಾಂ ಚಿನ್ನಾಭರಣ ಮತ್ತು ನಗದು 3000 ಸಾವಿರ ರೂ/- ಗಳನ್ನು ಕಳವು ಮಾಡಿದ್ದಾರೆ. ಕಳವಾದ ಚಿನ್ನಾಭರಣಗಳ ಹಾಗೂ ನಗದು ಸೇರಿ ಅಂದಾಜು ಮೌಲ್ಯ ಸುಮಾರು 75,500 ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Rise of robbery in Dakshina kannada and mangalore, 18 pounds of gold stolen in totally from many houses.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
06-11-25 10:22 pm
HK News Desk
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
06-11-25 10:50 pm
Mangalore Correspondent
ಜೈಲ್ ಜಾಮರ್ ನಿಂದ ಸುತ್ತಮುತ್ತ ನೆಟ್ವರ್ಕ್ ಸಮಸ್ಯೆ ;...
06-11-25 12:51 pm
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
06-11-25 10:59 pm
Mangalore Correspondent
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm