ಬ್ರೇಕಿಂಗ್ ನ್ಯೂಸ್
03-12-20 11:41 am Mangalore Correspondent ಕ್ರೈಂ
ಮಂಗಳೂರು, ಡಿ.3: ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಕಂಡುಬಂದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ತೀರ್ಥಹಳ್ಳಿ ಮೂಲದ ನಜೀರ್ ಅಹ್ಮದ್ ಬಂಧಿತ ಯುವಕ.
ನಜೀರ್, ಮಂಗಳೂರು ನಗರದಲ್ಲಿ ಝೊಮೆಟೋ ಕಂಪನಿಯಲ್ಲಿ ಆನ್ ಲೈನ್ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಮಂಗಳೂರಿನ ಬಿಜೈ ಬಳಿಯ ಅಪಾರ್ಟ್ಮೆಂಟ್ ಒಂದರ ಆವರಣ ಗೋಡೆಯಲ್ಲಿ ನ.27ರಂದು ಗೋಡೆ ಬರಹ ಕಂಡುಬಂದಿತ್ತು. ಉಗ್ರರ ಪರವಾದ ಗೋಡೆ ಬರಹ ಮಂಗಳೂರಿನಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಸಂಘಿಗಳನ್ನು ನಿಯಂತ್ರಣ ಮಾಡೋಕೆ ಲಷ್ಕರ್ ಮತ್ತು ತಾಲಿಬಾನ್ ಉಗ್ರರನ್ನು ಕರೆಸಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, ಲಷ್ಕರ್ ಜಿಂದಾಬಾದ್ ಘೋಷಣೆಯ ಬರಹವನ್ನೂ ಹಾಕಿದ್ದರು.
ಸಿಸಿಟಿವಿ ಪರಿಶೀಲನೆ ವೇಳೆ ಬೈಕಿನಲ್ಲಿ ಬಂದು ಗೋಡೆ ಬರಹ ಬರೆದು ಪರಾರಿಯಾಗಿದ್ದು ಕಂಡುಬಂದಿತ್ತು. ಈಗ ಖಚಿತ ಮೊಬೈಲ್ ಲೋಕೇಶನ್ ಆಧರಿಸಿ ಪೊಲೀಸರು ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೋರ್ವನ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳ ಪತ್ತೆಗೆ ಮಂಗಳೂರು ಕಮಿಷನರ್ ವಿಶೇಷ ತಂಡವನ್ನು ನೇಮಕ ಮಾಡಿದ್ದರು. ವಾರದ ನಂತರ ಆರೋಪಿಯ ಪತ್ತೆಗೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ನಜೀರ್ ಗೆ ಲಷ್ಕರ್ ಇ ತೊಯ್ಬಾ ಜೊತೆ ಸಂಬಂಧ ಇದೆಯೇ ಅಥವಾ ಕಿಡಿಗೇಡಿ ಕೃತ್ಯವೇ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Video:
A Zamato Delivery Boy has been arrested in connection to Pro-Terror Graffiti in Mangalore by Kadri Police. The arrested is been identified as Nazir Ahmed from Thirthahalli.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm